WhatsApp Group Join Now

ನಮ್ಮ ದೇಹದ ಪ್ರತಿಯೊಂದು ಅಂಗವನ್ನು ನಿಯಂತ್ರಣ ಮಾಡುವುದು ಮೆದುಳು. ಯಾವ ಅಂಗ ಏನು ಕಾರ್ಯ ಮಾಡಬೇಕೆಂದು ಮೆದುಳು ಸಂದೇಶ ನೀಡುತ್ತಿರುತ್ತದೆ. ಆದರೆ ಈ ಮೆದುಳಿನ ಸಾಮರ್ಥ್ಯವನ್ನು ನಾವೇ ನಮ್ಮ ಕೆಲವೊಂದು ಅಭ್ಯಾಸಗಳಿಂದಾಗಿ ಕಡಿಮೆ ಮಾಡುತ್ತಾ ಹೋಗುತ್ತೇವೆ. ಅದರಲ್ಲೂ ಈ ರೀತಿಯ ಅಭ್ಯಾಸಗಳಿದ್ದರೆ ಮೆದುಳಿನ ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸಗಳನ್ನು ಬಿಡುವುದೇ ಒಳ್ಳೆಯದು.

ಅತೀಯಾಗಿ ಸಿಹಿ ತಿಂಡಿ ತಿನ್ನುವುದು: ಸಕ್ಕರೆಯಂಶ ಅಧಿಕವಿರುವ ತಿಂಡಿ ಅಥವಾ ಟೀ/ಕಾಫಿ ಕುಡಿಯುವುದು ಆರೋಗ್ಯಕ್ಕೆ ಮಾತ್ರವಲ್ಲ ಮೆದುಳಿಗೂ ಒಳ್ಳೆಯದಲ್ಲ. ಸಕ್ಕರೆಯಂಶ ಅಧಿಕವಾದಂತೆ ನಮ್ಮ ದೇಹದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಮೆದುಳಿಗೆ ಪೋಷಕಾಂಶದ ಕೊರತೆ ಉಂಟಾಗಿ ನೆನಪಿನ ಶಕ್ತಿ ಕುಂದುವುದು.

ನಿದ್ದೆ ಕಡಿಮೆ ಮಾಡುವುದು: ಸರಿಯಾದ ಸಮಯಕ್ಕೆ ನಿದ್ದೆ ಮಾಡದೇ ಫೋನ್‌, ಇಂಟರ್ನೆಟ್‌ನಲ್ಲಿ ಕಾಲ ಕಳೆಯುವುದರಿಂದ ನೆನಪಿನ ಶಕ್ತಿ ಕುಂದುವುದು, ನೆನಪಿರಲಿ.

ಬ್ರೇಕ್‌ ಪಾಸ್ಟ್‌ ಮಾಡದೇ ಇರುವುದು ಡಯಟ್‌ ಹೆಸರಿನಲ್ಲಿ ಬೆಳಗಿನ ಬ್ರೇಕ್‌ಫಾಸ್ಟ್‌ ಮಾಡದೆ ಇದ್ದರೆ ನೆನಪಿನ ಶಕ್ತಿ ಕಡಿಮೆಯಗುವುದು.

ತಲೆಯವರೆಗೆ ಹೊದಿಕೆ ಹೊದ್ದುಕೊಂಡು ನಿದ್ದೆ ಮಾಡುವುದು, ಇದರಿಂದ ನಮ್ಮ ಮೆದುಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆ ಆಗುವುದಿಲ್ಲ. ಈ ಅಭ್ಯಾಸವಿದ್ದರೆ ಇವತ್ತಿನಿಂದಲೇ ಬಿಡಲು ಟ್ರೈ ಮಾಡಿ.

ಅತೀಯಾಗಿ ತಿನ್ನುವುದು: ನಮ್ಮ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಆಹಾರವನ್ನು ತಿನ್ನಬೇಕು. ಬಾಯಿ ಚಪಲಕ್ಕೆ ಬಿದ್ದು ಅಧಿಕ ತಿನ್ನುವುದರಿಂದ ಮೈತೂಕ ಹೆಚ್ಚುವುದು, ಇದರಿಂದ ರಕ್ತ ಸಂಚಲ ಸರಾಗವಾಗಿ ನಡೆಯದೆ ಮೆದುಳಿನ ಸಾಮರ್ಥ್ಯ ಕಡಿಮೆಯಾಗುವುದು.

ಅತೀ ಕಡಿಮೆ ಮಾತು: ನಮ್ಮ ಮೆದುಳಿನ ಸ್ನಾಯುಗಳಿಗೆ ವ್ಯಾಯಾಮ ದೊರೆಯಬೇಕೆಂದರೆ ನಾವು ಮಾತನಾಡಬೇಕು. ಯೋಚನೆ ಮಾಡುತ್ತಾ ಇರುವುದರಿಂದ, ಮಾತನಾಡುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚುವುದು.

WhatsApp Group Join Now

Leave a Reply

Your email address will not be published. Required fields are marked *