ನೀವು ಬೇಡಿದ್ದನ್ನು ವರವಾಗಿ ಕೊಡುವ ಈ ಸೌತಡ್ಕ ಗಣಪನ ಬಗ್ಗೆ ಒಮ್ಮೆ ತಿಳಿದುಕೊಳ್ಳೋಣ ಬನ್ನಿ, ಈ ದೇವಾಲಯ ಇರೋದು ದಕ್ಷಿಣ ಕನ್ನಡ ಜಿಲ್ಲಿಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮದಲ್ಲಿ, ಈ ಗಣಪನಿಗೆ ಯಾವುದೇ ಗುಡಿ ಗೋಪುರಗಳಿಲ್ಲ ಬಟಾ ಬಯಲಿನಲ್ಲಿ ನೆಲೆಸಿದ್ದಾನೆ. ಆದ್ದರಿಂದ ಬಾಯಲ್ ಗಣಪ ಎಂಬುದಾಗಿ ಕೂಡ ಭಕ್ತರು ಕರೆಯುವುದುಂಟು.
ಸುತ್ತ ಮುತ್ತಲಿನ ಒಳ್ಳೆಅಯ್ ವಾತಾವರಣದಲ್ಲಿ ಹಸಿರು ಗಿಡ ಮರಗಳ ಜತೆಯಲ್ಲಿ ನೆಲೆಸಿರುವಂತ ಈ ಗಣಪನ ಹಿಂದಿದೆ ಒಂದು ಕಹಾನಿ, ಹೌದು ಸೌತಡ್ಕ ಕ್ಷೇತ್ರಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದ್ದು ಹಿಂದಿನಕಾಲದಲ್ಲಿ ದನ ಮೇಯಿಸಲು ಬಂದ ಗೋವಳರಿಗೆ ಕಲ್ಲುಗಳ ರಾಶಿಯಲ್ಲಿ ಸಿಕ್ಕಿದ ಗಣಪತಿಯ ವಿಗ್ರಹವನ್ನು ಅವರು ಕಾಡುಕಲ್ಲುಗಳ ಕಟ್ಟೆಯನ್ನು ಕಟ್ಟಿ ಅದರ ಮೇಲೆ ಇಟ್ಟು ಪೂಜಿಸಿದರು. ತಾವು ತಿನ್ನಲು ತಂದ ಸೌತೆಕಾಯಿಗಳನ್ನೇ ಗಣಪತಿಗೆ ಸಮರ್ಪಿಸಿದರು ಈ ಪರಿಪಾಠ ಮುಂದುವರೆಯಿತು ಇದರಿಂದಾಗಿ ಈ ಕ್ಷೇತ್ರಕ್ಕೆ ಸೌತಡ್ಕ ಎಂಬ ಹೆಸರು ಬಂತು ಎನ್ನಲಾಗಿದೆ
ಇಲ್ಲಿ ಮತ್ತೊಂದು ವಿಶೇಷತೆ ಏನಂದ್ರೆ: ಬಲಭಾಗದಲ್ಲಿ ವೀರಭದ್ರಸ್ವಾಮಿ ಎಡಕ್ಕೆ ಜನಾರ್ದನ ರೂಪಿ ಮಹಾವಿಷ್ಣುವಿನ ಮೂರ್ತಿ ನೆಲೆನಿಂತಿದೆ. ಅಷ್ಟೇ ಅಲ್ಲದೆ ಈ ಗಣಪನಿಗೆ ಇಷ್ಟಾರ್ಥ ಸಿದ್ಧಿಗಣಪ ಎಂಬ ಹೆಸರೂ ಇದೆ ಇಲ್ಲಿ ದೇವರ ದರ್ಶನಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ ಜಾತಿ ಮಠ ಪಂಗಡಗಳ ಭೇದವಿಲ್ಲ ಎಲ್ಲರೂ ದರ್ಶನ ಪಡೆದು ಸೇವೆ ಸಲ್ಲಿಸಲು ಮುಕ್ತ ಅವಕಾಶವಿದೆ.
ಇಲ್ಲಿ ತಮ್ಮ ಬಯಕೆಯನ್ನು ಬೇಡಿ ಬಂದಂತ ಭಕ್ತರ ಬೇಡಿಕೆ ಹಿಡಿರಿವುದು ತುಂಬಾನೇ ಇದೆ, ಈ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7.30 ವರೆಗೆ ದೇವರಿಗೆ ಪೂಜೆ ಹಾಗೂ ವಿವಿಧ ಸೇವೆ ಸಲ್ಲಿಕೆಗೆ ಅವಕಾಶವಿದೆ ಪ್ರತಿ ದಿನವೂ ಭಕ್ತರು ರಂಗಪೂಜೆ ಹಾಗೂ ಅವಲಕ್ಕಿ ಪಂಚ ಕಜ್ಜಾಯಗಳ ಸೇವೆಗಳನ್ನು ಸಲ್ಲಿಸುತ್ತಾರೆ ಮತ್ತು ಮೂಡಪ್ಪ ಸೇವೆ ಇಲ್ಲಿ ವಿಶೇಷ ಪೂಜೆಯಾಗಿದೆ.