ಬೇಲದ ಹಣ್ಣು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಆದರೆ ಎದು ಸಿಗುವುದು ತುಬಾ ಕಡಿಮೆ ಹಳ್ಳಿಗಳ ಕಡೆ ದೊರೆಯುತ್ತದೆ, ಇದು ಚೀಟಿಯಲ್ಲಿ ಕೆಲವರಿಗೆ ಗೊತ್ತಿರುವುದಿಲ್ಲ, ಈ ಹಣ್ಣು ತಿನ್ನಲು ತುಂಬಾ ಚೆನ್ನಾಗಿರುತ್ತದೆ ಅದಲ್ಲದೆ ಈ ಹಣ್ಣಿನಲ್ಲಿಯೂ ಕೆಲವು ಆರೋಗ್ಯಕಾರಿ ಗುಣಗಳು ಸಹ ಅಡಗಿವೆ.
ಬೇಲದ ಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾಗುವಂತಹ ಉತ್ತಮ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಮಲಬದ್ಧತೆ ಇರುವವರು ಈ ಹಣ್ಣನು ತಿಂದರೆ ಮಲಬದ್ಧತೆ ತೊಂದರೆ ಕಡಿಮೆಯಾಗುತ್ತೆ.
ಜಿರ್ಣಕ್ರಿಯೆಯಲ್ಲಿ ವ್ಯತ್ಯಾಸ ಸಮಸ್ಯೆ ಇದ್ದವರು ಈ ಬೇಲದ ಹಣ್ಣಿನ ಸೇವನೆ ಮಾಡುವುದು ಒಳ್ಳೆಯದು. ಬೇಲದ ಹಣ್ಣು ಅತಿಸಾರವನ್ನು ತಡೆಯುತ್ತದೆ. ಬೇಲದ ಹಣ್ಣು ತಿನ್ನುವುದರಿಂದ ಅತಿಯಾದ ಆ್ಯಸಿಡಿಟಿಯಿಂದ ಬರುವ ಹೊಟ್ಟೆಯ ಅಲ್ಸರ್‌ಗಳನ್ನು ತಡೆಗಟ್ಟುತ್ತದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದೊಂದು ಉತ್ತಮವಾದ ರೋಗನಿರೋಧಕ ಶಕ್ತಿ ಹೊಂದಿದ್ದು ಮತ್ತು ವಿಟಮಿನ್ ಸಿ ಕೊರತೆಯಿಂದ ಬರುವ ಕಾಯಿಲೆಯನ್ನು ತಡೆಯಲು ಸಹಕಾರಿಯಾಗುತ್ತದೆ.
ಬೇಲದ ಹಣ್ಣು ಮಧುಮೇಹಿಗಳಿಗೆ ಉತ್ತಮ ಹಣ್ಣು.ಯಾಕೆಂದರೆ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ.
ಈ ಹಣ್ಣಿನಲ್ಲಿ ರಂಜಕದ ಅಂಶ ಇರುವುದರಿಂದ ಮಿದುಳಿನ ಕಾರ್ಯಕ್ಷ ಮತೆಯನ್ನು ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸುತ್ತದೆ.