ಬೇವು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಆಯುರ್ವೇದದಲ್ಲಿ ಪಡೆದಿದೆ. ಆಯುರ್ವೇದದ ಪ್ರಕಾರ ತಾಜಾ ಸಣ್ಣ ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹವು ಅನೇಕ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ರಕ್ತವನ್ನು ಶುದ್ಧೀಕರಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಒಂದು 130ಕ್ಕೂ ಹೆಚ್ಚು ಪ್ರಯೋಜನಕಾರಿ ಸಕ್ರಿಯ ಸಂಯುಕ್ತಗಳನ್ನು ಒಳಗೊಂಡಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲ ಮೊಡವೆಗಳನ್ನು ಗುಣಪಡಿಸುತ್ತದೆ. ಬೇವಿನ ಎಲೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಚರ್ಮ ಆರೋಗ್ಯ ಕೂದಲಿಗೆ ತನ್ನದೇ ಆದ ಕೊಡುಗೆಯನ್ನು ಶತಮಾನಗಳಿಂದ ನೀಡುತ್ತಲೇ ಬಂದಿದೆ. ಹಾಗಾದರೆ ಬನ್ನಿ ಬೇವು ಮತ್ತು ಕೂದಲಿನ ಮಹತ್ವದ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. ಅದಕ್ಕಿಂತ ಮೊದಲು ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.
ಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ನೀವು ಅಚ್ಚರಿಗೊಂಡರು ಇದು ಸತ್ಯ. ವಿವಿಧ ಆರೋಗ್ಯ ಮತ್ತು ಸೌಂದರ್ಯ ತಜ್ಞರ ಪ್ರಕಾರ ತಲೆಹೊಟ್ಟು ಸಂಪೂರ್ಣವಾಗಿ ತೆಗೆದುಹಾಕಲು ಸುಲಭವಾದ ಮಾರ್ಗವೆಂದರೆ ಅದು ದಿನ ಬೆಳಗ್ಗೆ ಬೇವಿನ ಎಲೆಗಳನ್ನು ತಿನ್ನುವುದು. ಇದು ಬಾಯಿಯನ್ನು ಕಹಿಯಾಗಿದ್ದರೂ ನಿಮ್ಮ ಕೇಶ ಸೌಂದರ್ಯಕ್ಕೆ ಸಿಹಿಯಾಗಿದೆ. ಕಹಿ ಅನುಭವವನ್ನು ಕಡಿಮೆ ಮಾಡಲು ಬೇವಿನ ಎಲೆಗಳನ್ನು ಜೇನಿನ ಜೊತೆ ಸೇರಿಸಿ ಸೇವನೆ ಮಾಡಿ ಅಥವಾ ಕಷಾಯವನ್ನು ಸೇವಿಸಿ. ಇನ್ನು ತೆಂಗಿನ ಎಣ್ಣೆಗೆ ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಕುದಿಸಿ. ತೆಂಗಿನ ಎಣ್ಣೆಯೊಂದಿಗೆ ಬೇವನು ಬೇರ್ಪಡಿಸಿಕೊಂಡು ಉಗುರು ಬೆಚ್ಚಗೆ ಮಾಡಿ ತಲೆಗೆ ಹಚ್ಚಿ ಕೊಳ್ಳುವುದರಿಂದ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಎಣ್ಣೆಯಲ್ಲಿ ನಾಲ್ಕರಿಂದ ಮೂರು ಹನಿ ನಿಂಬೆ ರಸವನ್ನು ಸಹ ಬಳಸಬಹುದು.
ರಾತ್ರಿ ಮಲಗುವ ಮುಂಚೆ ತಯಾರಿಸಿಕೊಂಡ ಎಣ್ಣೆಯನ್ನು ರಾತ್ರಿಯ ಸಮಯದಲ್ಲಿ ಹಚ್ಚಿಕೊಳ್ಳಿ. ಮರುದಿನ ಬೆಳಗ್ಗೆ ತಲೆಯನ್ನು ತೊಳೆಯಿರಿ. ಹೀಗೆ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಿಸಿಕೊಂಡು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇನ್ನು ಬೇವು ನಿಮ್ಮ ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಬೇವು ಮತ್ತು ಮೊಸರಿನ ಸಂಯೋಜನೆಯು ಡ್ಯಾಂಡ್ರಫ್ ಅನ್ನ ನಿಗ್ರಿಹಿಸಲೂ ಸೂಕ್ತವಾದ ಮಾರ್ಗವಾಗಿದೆ. ವಾಸ್ತವವಾಗಿ ಮೊಸರು ಕೂದಲಿಗೆ ವಿಶೇಷವಾದ ಕಾಂತಿಯನ್ನು ನೀಡುವುದಲ್ಲದೆ ತಲೆಹೊಟ್ಟಿಗೆ ಚಿಕಿತ್ಸೆಯನ್ನು ನೀಡುತ್ತದೆ. ಇದು ಕೂದಲನ್ನು ಹೊರ ಪರೆಗಳನ್ನು ಮೃದು ಗೊಳಿಸುವುದರ ಮೂಲಕ ಇನ್ನು ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ.