WhatsApp Group Join Now

ಬೇಸಿಗೆ ಕಾಲದಲ್ಲಿ ಜನರು ಮಸಾಲ ಪದಾರ್ಥ ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಸಾಲ ಪದಾರ್ಥ ತಿನ್ನುವುದರಿಂದ ಸೆಕೆ (ಬೇಗೆ) ಕಡಿಮೆಯಾಗುತ್ತದೆ. ಅದರಲ್ಲೂ ಆಹಾರದಲ್ಲಿ ಹಸಿಮೆಣಸಿನಕಾಯಿ ಇದ್ದರೆ, ಅದು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಮೆಣಸಿನಕಾಯಿಯಿಂದ ಆಗುವ ಲಾಭಗಳು: ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್(Antioxidant) ಜೊತೆಗೆ ಡೈಯಟ್ರಿ ಫೈಬರ್(Dietary fiber) ಅಂಶಗಳು ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಿತ ಪ್ರಮಾಣದ ಹಸಿಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ ಟ್ರಬಲ್, ಮಲಬದ್ಧತೆ ರೋಗದಿಂದ ದೂರ ಇರಬಹುದಾಗಿದೆ.

ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ(Antibacterial) ಅಂಶ ಕೂಡ ಇರುತ್ತದೆ. ಹಸಿಮೆಣಸಿನಕಾಯಿ ಸೇವಿಸುವುದರಿಂದ ದೇಹದಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾ ಹೋಗುತ್ತದೆ. ಇದರಿಂದ ಇಮ್ಯೂನ್ಯೂ ಸಿಸ್ಟಮ್(Immune System) ಶಕ್ತಿಯುತವಾಗುತ್ತದೆ ಹಾಗೂ ಅಲರ್ಜಿ, ಸೋಂಕಿನಿಂದ ರಕ್ಷಿಸುತ್ತದೆ.

ಸಂಶೋಧನೆ ಪ್ರಕಾರ ಹಸಿಮೆಣಸಿನಕಾಯಿ ಸೇವನೆಯಿಂದ ರಕ್ತದಲ್ಲಿ ಇರುವ ಶುಗರ್ ನಾರ್ಮಲ್ ಆಗುತ್ತದೆ. ಡಯಾಬಿಟಿಸ್(Diabetes) ರೋಗ ಇರುವವರು ಹಸಿ ಮೆಣಸಿನಕಾಯಿಯನ್ನು ಮಿತಿಯಲ್ಲಿ ಸೇವಿಸಬೇಕು. ಮೆಣಸಿನಕಾಯಿ ಸೇವನೆಯಿಂದ ವಿಟಮಿನ್-ಎ ಲೆವೆಲ್ ಹೆಚ್ಚಾಗುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *