ಹೌದು ಸಾಮಾನ್ಯವಾಗಿ ಈ ಬೆವರು ಗುಳ್ಳೆಗಳು ಬೇಸಿಗೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಗುಳ್ಳೆಗಳಿಂದ ಕಿರಿ ಕಿರಿ ಮತ್ತು ಮುಜುಗರವಾಗುತ್ತದೆ ಹಾಗಾಗಿ ಅಂತಹ ಮುಜುಗರದಿಂದ ಪಾರಾಗಬೇಕು ಅಂದ್ರೆ ಈ ರೀತಿಯಾಗಿ ಮಾಡಿ.
ಮೊದಲನೆಯದಾಗಿ ನಿಮ್ಮ ಮನೆಯಲ್ಲಿರುವ ತೆಂಗಿನ ಎಣ್ಣೆಯನ್ನು ಸೌತೆಕಾಯಿ ಜ್ಯೂಸ್ ಜತೆ ಕಲಸಿ ಬೆವರು ಗುಳ್ಳೆಗಳ ಮೇಲೆ ದಿನಕ್ಕೆ 2 ಬಾರಿ ಹಚ್ಚಿದರೆ ಗುಳ್ಳೆಗಳು ಮಾಯವಾಗುತ್ತವೆ.
ನಿಮ್ಮ ಮನೆಯಲ್ಲಿ ಯಾವಾಗಲು ಅಕ್ಕಿ ತೊಳೆಯುವ ನೀರನ್ನು ನಿಮ್ಮ ಬೆವರು ಗುಳ್ಳೆಗಳಿಗೆ ಹಚ್ಚಿದರೆ ಗುಳ್ಳೆಗಳು ಗುಣವಾಗುತ್ತದೆ.
ಬೆವರು ಗುಳ್ಳೆಗಳಿಗೆ ಇದು ಸಹ ಉತ್ತಮ ಮನೆಮದ್ದು ಅಲೋವೆರಾ ಜೆಲ್ ಹಚ್ಚಿದರೂ ಬೆವರು ಗುಳ್ಳೆಗಳು ಮಾಯವಾಗುತ್ತದೆ.
ಕಸ್ತೂರಿ ಅರಿಶಿನ , ಮೆಂತ್ಯ, ಧನಿಯಾ, ಹೆಸರುಕಾಳನ್ನು ಪುಡಿ ಮಾಡಿ ಸ್ನಾನ ಮಾಡುವಾಗ ಸೋಪಿನ ಬದಲಾಗಿ ಈ ಪುಡಿಯನ್ನು ಬಳಸಿದರೆ ಗುಳ್ಳೆಗಳು ನಿವಾರಣೆಯಾಗುತ್ತದೆ.
ಬೆವರು ಗುಳ್ಳೆ ಆಗಿ ತುಂಬಾ ನವೆ ಇದ್ದರೆ ಬೇವಿನ ಸೊಪ್ಪಿನ ಪೇಸ್ಟ್‌ಗೆ ರೋಸ್ ವಾಟರ್ ಬೆರೆಸಿ ಹಚ್ಚಿದರೆ ನವೆ ಕಡಿಮೆಯಾಗಿ ಗುಳ್ಳೆಗಳು ಶಮನವಾಗುತ್ತದೆ.
ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆಗಳು ಮಾಯವಾಗುತ್ತದೆ. ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಬೆವರು ಗುಳ್ಳೆಗಳ ಮೇಲೆ 10 -15 ನಿಮಿಷಗಳು ಇಟ್ಟರೂ ಗುಳ್ಳೆಗಳು ಶಮನವಾಗುತ್ತದೆ.
ಕರ್ಪೂರವನ್ನು ಬೇವಿನ ಎಣ್ಣೆ ಜತೆ ಪೇಸ್ಟ್ ಮಾಡಿ ಗುಳ್ಳೆಗಳ ಮೇಲೆ ಲೇಪನ ಮಾಡಿದರೆ ಗುಳ್ಳೆಗಳು ನಿವಾರಣೆಯಾಗುತ್ತದೆ.ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಬೆವರು ಗುಳ್ಳೆಗಳಿಂದ ನೀವು ಪಾರಾಗಬಹುದು.