WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ಲಾಭಗಳು ಇವೆ ಮತ್ತು ಕಬ್ಬಿನ ಹಾಲನ್ನು ಕುಡಿಯುವ ಮುಂಚೆ ನೀವು ಯಾವ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡರೆ ಉತ್ತಮ ಎಂಬುದನ್ನು ತಿಳಿದುಕೊಂಡು ಬರೋಣ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನಾವು ದೇಹಕ್ಕೆ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದ್ರೆ ದೇಹಕ್ಕೆ ನೈಸರ್ಗಿಕವಾದ ಪಾನಿಯಗಳಾದ ಎಳೆನೀರು, ಶರಬತ್, ಕಬ್ಬಿನ ಹಾಲು ಇವೆಲ್ಲಾ ದಣಿದ ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ. ಕಬ್ಬಿನ ಹಾಲು ಉಷ್ಣ ಸ್ವಭಾವದವರು ಬೇಸಿಗೆ ಕಾಲದಲ್ಲಿ ಅಷ್ಟೇ ಅಲ್ಲದೆ ಉಳಿದ ದಿನಗಳಲ್ಲಿ ಕೂಡ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಅಯೋಡಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣದ ಸತು ಮತ್ತು ಪೊಟ್ಯಾಸಿಯಂ ಅಂತಹ ಖನಿಜಗಳು ಹಲವಾರು ಪೌಷ್ಟಿಕಾಂಶಗಳು ಇದರಲ್ಲಿ ಅಡಗಿವೆ. ಬೇಸಿಗೆಯಲ್ಲಿ ದೇಹ ಕಳೆದುಕೊಂಡ ಶಕ್ತಿಯನ್ನು ಮತ್ತೆ ಪಡೆಯಲು ಕಬ್ಬಿನ ಹಾಲು ಒಂದು ಅತ್ತ್ಯುತ್ತಮ ಆಯ್ಕೆಯಾಗಿದೆ. ಕಬ್ಬಿನ ಹಾಲು ಕುಡಿದ ಸ್ವಲ್ಪ ಹೊತ್ತಿನಲ್ಲಿ ಇದರಲ್ಲಿರುವ ಪೌಷ್ಟಿಕಾಂಶವು ರಕ್ತಕ್ಕೆ ಲಭಿಸುವ ಮೂಲಕ ತಕ್ಷಣವೇ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ ಅಂತೆ.

ಉರಿಮೂತ್ರ ಸಮಸ್ಯೆ ಇದ್ರೆ ಕಬ್ಬಿನ ಹಾಲಿನಲ್ಲಿ ನೆಲ್ಲಿಕಾಯಿ ರಸ ಹಾಗೂ ಜೇನುತಪ್ಪದೊಂದಿಗೆ ಬೆರೆಸಿ ಕುಡಿಯುುದರಿಂದ ಉರಿಮೂತ್ರ ಸಮಸ್ಯೆ ನಿವರಣೆಯಾಗುವುದು. ಮತ್ತು ಕಬ್ಬಿನ ಹಾಲಿಗೆ ಶುಂಠಿ ರಸ, ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಇದು ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ಹಾಗೂ ಹೊಟ್ಟೆಯುಬ್ಬರ ಮತ್ತು ಇತ್ಯಾದಿ ರೋಗಗಳನ್ನು ಹೋಗಲಾಡಿಸುತ್ತದೆ ಎಂತೆ. ಕಬ್ಬಿನ ಹಾಲು ದೇಹದಲ್ಲಿನ ನಿರ್ಜಲೀಕರಣ ಸಮಸ್ಯೆಯನ್ನು ತೆದೆಯುವುದರ ಜೊತೆಗೆ ದೇಹದಲ್ಲಿ ನೀರಿನ ಪ್ರಮಾಣವನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ. ಹಾಗೂ ಕಿಡ್ನಿಯಲ್ಲಿರುವ ಕಲ್ಲನ್ನು ಕೂಡ ಕರಗಿಸುವ ಶಕ್ತಿ ಇದಕ್ಕಿದೆ. ಹೌದು ಕಬ್ಬಿನ ಹಾಲಿನಲ್ಲಿರುವ ಅತ್ಯಂತ ಪ್ರಯೋಜನಕಾರಿ ಗುಣ ಎಂದರೆ ಅದು ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ ಎನ್ನುವುದು. ಹೌದು ಕಿಡ್ನಿಯಲ್ಲಿ ಕಲ್ಲಿದ್ದರೆ ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಆ ಸಮಸ್ಯೆಯಿಂದ ಗುಣಮುಖ ಆಗಲು ಸಹಾಯಕಾರಿ ಆಗಿದೆ. ಮತ್ತು ಕಬ್ಬಿನ ಜ್ಯೂಸ್ ಕುಡಿಯುವುದರ ಬದಲು ಬರೀ ಕಬ್ಬನ್ನು ಹಲ್ಲಿನಿಂದ ಜಗಿದು ತಿನ್ನುವುದರಿಂದ ಹಲ್ಲಿನ ವಸಡುಗಳು ಗಟ್ಟಿಯಾಗುತ್ತವೆ. ಕಬ್ಬಿನ ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ಧೃಢವಾಗಿಸಲು ಸಹಾಯ ಮಾಡುತ್ತದೆ.

ಇನ್ನೂ ಕಬ್ಬಿನ ಹಾಲು ಕುಡಿಯುವುದಕ್ಕೆ ಮುಂಚೆ ಯಾವೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ. ಸಾಮಾನ್ಯವಾಗಿ ಬಾಯಾರಿಕೆ ಆದಾಗ ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಹಾಲಿಗೆ ಮೊರೆ ಹೋಗುತ್ತೇವೆ ಆದ್ರೆ ಕಬ್ಬಿನ ಹಾಲು ಕುಡಿಯುವ ಮುನ್ನ ಕೆಲವೊಂದು ವಿಷಯಗಳನ್ನು ನಾವು ನೆನಪಿಟ್ಟು ಕೊಳ್ಳಬೇಕು. ಬಹಳಷ್ಟು ಕಬ್ಬಿನ ಹಾಲಿನ ಅಂಗಡಿಯಲ್ಲಿ ಒಬ್ಬರೇ ಇರುತ್ತಾರೆ, ಅವರು ಮಿಷಿನ ಸ್ಟಾರ್ಟ್ ಮಾಡಿ ಅವರೇ ಜ್ಯೂಸ್ ಮಾಡಿ ಕೊಡುತ್ತಾರೆ. ಜ್ಯೂಸ್ ಮಾಡುವ ವ್ಯಕ್ತಿ ಆಗಾಗ ಮಿಶಿನ್ ಮುಟ್ಟಿ ತನ್ನ ಕೈಯನ್ನು ಕೆಮಿಕಲ್ ಮಾಡಿಕೊಳ್ಳುತ್ತಾ ಇರುತ್ತಾನೆ ಮತ್ತು ಅದೇ ಕೈಯಲ್ಲಿ ಜ್ಯೂಸ್ ಮಾಡಿ ಕೊಡುತ್ತಾನೆ. ಇನ್ನೂ ಕಬ್ಬಿನ ಹಾಲನ್ನು ಮಾಡುವ ಯಂತ್ರ ಆಗಾಗ ಸ್ವಚ್ಛಗೊಳಿಸಬೇಕು ಯಾಕೆಂದರೆ ಕಬ್ಬಿನಲ್ಲಿ ಮಣ್ಣಿನ ಅಂಶ ಇರುತ್ತದೆ. ಬಹಳಷ್ಟು ಮಂದಿ ಇದನ್ನು ಸ್ವಚ್ಛ ಮಾಡುವುದಿಲ್ಲ. ಮತ್ತು ನಿಂಬೆ ಹಣ್ಣು ಅಥವಾ ಪುದೀನಾ ಶುಂಠಿಯನ್ನು ಸ್ವಚ್ಛಗೊಳಿ ಸದೇ ಕಬ್ಬಿನ ರಸಕ್ಕೆ ಬೆರೆಸಿ ಕೊಡುತ್ತಾರೆ. ಅದ್ರಲ್ಲೂ ಕೆಂಪಗಿರುವ ಕಬ್ಬಿನಿಂದ ಮಾಡಿದ ರಸವನ್ನು ಸೇವನೆ ಮಾಡಬಾರದಅಂತೆ. ಯಾಕೆಂದರೆ ಆ ಕಬ್ಬು ಕೊಳೆತಿರುತ್ತರೆ ಮತ್ತು ಅದರ ರಸ ನಿಮ್ಮ ಆರೋಗ್ಯವನ್ನೂ ಕೆಡಿಸುವುದರಲ್ಲಿ ಎರೆಡು ಮಾತಿಲ್ಲ. ಹಾಗಾಗಿ ಕಬ್ಬಿನ ಹಾಲನ್ನು ಕುಡಿಯುವಾಗ ಕೆಲವೊಂದಿಷ್ಟು ಮುನ್ನೆಚ್ಚರಿಕೆಯನ್ನು ವಹಿಸಿದರೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *