ಸೌತೆಕಾಯಿ ನೀರಿನಂಶ ಹೊಂದಿರುವಂತದ್ದು ಹಾಗಾಗಿ ಇದನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹ ತಂಪಾಗಿರುತ್ತದೆ ಹಾಗೂ ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಸೌತೆಕಾಯಿಯಲ್ಲಿ ಪೌಷ್ಠಿಕಾಂಶಗಳು ದಟ್ಟವಾಗಿರುತ್ತವೆ. ಅಲ್ಲದೆ, ಫೈಬರ್, ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಕೂಡ ಹೆಚ್ಚಾಗಿರುತ್ತದೆ. ಈ ಎಲ್ಲ ಪೌಷ್ಠಿಕಾಂಶಗಳು ರಕ್ತದೊತ್ತಡ ಕಡಿಮೆ ಮಾಡಲಷ್ಟೇ ಅಲ್ಲ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ.
ಸೌತೆಕಾಯಿಯಲ್ಲಿ ಪೊಟ್ಯಾಷಿಯಂ ಹಾಗೂ ನೀರಿನಂಶ ಹೆಚ್ಚಾಗಿ ಇರೋದ್ರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸೌತೆಕಾಯಿಯಿಂದ ನಿಮ್ಮ ಚರ್ಮಕ್ಕೆ ಹೆಚ್ಚು ಫ್ರೆಶ್‌ನೆಸ್ ಬರುತ್ತದೆ. ಹೀಗಾಗಿ, ನಿಮ್ಮದು ಒಣಗಿದ ಚರ್ಮವಾಗಿದ್ದರೆ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಸಾಕು ನೀವು ಫ್ರೆಶ್ ಆಗಿ ಕಾಣುತ್ತೀರಿ.
ಬಹಳಷ್ಟು ಜನಕ್ಕೆ ಕಣ್ಣಿನ ಸುತ್ತಲೂ ಕಪ್ಪು ವರ್ತುಲ ಮೂಡಿರುತ್ತದೆ ಇಂತಹ ಸಮಸ್ಯೆಗೆ ಸೌತೆ ಸಹಕಾರಿಯಾಗಿದೆ, ಕಣ್ಣುಗಳ ಸುತ್ತಲಿನ ಡಾರ್ಕ್ ಸರ್ಕಲ್ಸ್ ಹಾಗೂ ಪಫ್ಫಿನೆಸ್ ನಿವಾರಣೆಗೆ ಪರಿಹಾರ ಕಪ್ಪು ಕಲೆ ನಿವಾರಿಸಲು ಹಾಗೂ ಕಣ್ಣುಗಳ ಬಳಿಯ ಪಫ್ಫಿನೆಸ್ ಕಡಿಮೆ ಮಾಡಲು ಸೌತೆಕಾಯಿಯ ರಸವನ್ನು ಕಣ್ಣು ಸುತ್ತ ಹಚ್ಚಿಕೊಳ್ಳಿ, ಇದು ನೈಸರ್ಗಿಕ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.