ನಮಸ್ತೆ ಪ್ರಿಯ ಓದುಗರೇ, ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಬೇಸಿಗೆ ಕಾಲದಲ್ಲಿ ಈ ಹಣ್ಣು ಬಹಳ ವಿರಳವಾಗಿ ಸಿಗುತ್ತಾ ಇತ್ತು, ಈ ಹಣ್ಣು ತಿನ್ನಲು ಸ್ವಲ್ಪ ಹುಳಿ ಇರುವುದರಿಂದ ಚಿಕ್ಕ ವಯಸ್ಸಿನಲ್ಲಿ ಇದಕ್ಕೆ ಒಂದಿಷ್ಟು ಬೆಲ್ಲವನ್ನು ಸೇರಿಸಿ ತಿನ್ನುತ್ತಾ ಇದ್ದೆವು. ಸಾಮಾನ್ಯವಾಗಿ ಹಳ್ಳಿಯ ಕಡೆ ಬೆಳೆದವರಿಗೆ ಈ ಹಣ್ಣಿನ ಪರಿಚಯ ಇರುತ್ತದೆ. ಆದರೆ ಸಿಟಿಯಲ್ಲಿ ಬೆಳೆದವರಿಗೆ ಈ ಹಣ್ಣಿನ ಪರಿಚಯ ಇರುವುದು ಒಂದಿಷ್ಟು ಕಡಿಮೆ ಎಂದು ಹೇಳಬಹುದು. ಹಳ್ಳಿಗಳಲ್ಲಿ ಕೂಡ ಇತ್ತೀಚೆಗೆ ಈ ಹಣ್ಣು ದೊರಕುವುದು ತುಂಬಾ ಕಡಿಮೆ ಎಂತಲೂ ಹೇಳಬಹುದು. ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿರುವಾ ಈ ಹಣ್ಣಿನ ಹೆಸರು ಬೇಲದ ಹಣ್ಣು. ಇದಕ್ಕೆ ಇಂಗ್ಲಿಷ್ ಅಲ್ಲಿ ವುಡ್ ಆ್ಯಪಲ್ ಎಂದು ಕರೆಯುತ್ತಾರೆ. ಇನ್ನೂ ಈ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಆರೋಗ್ಯಕ್ಕೆ ಯಾವೆಲ್ಲ ಲಾಭಗಳು ಇವೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಈ ಲೇಖನವನ್ನು ಕೊನೆಯ ವರೆಗೂ ಓದಿ ಸಂಪೂರ್ಣ ಮಾಹಿತಿ ಪಡೆಯಿರಿ. ಈ ಹಣ್ಣಿನ ಮೂಲ ನಮ್ಮ ಭಾರತ ದೇಶವೇ ಆಗಿದೆ. ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಇದು ತುಂಬಾ ವಿರಳವಾಗಿ ಬೆಳೆಯಲಾಗುತ್ತದೆ. ಇದರ ಮೇಲಿನ ಪದರು ತುಂಬಾ ಗಟ್ಟಿ ಆಗಿರುತ್ತದೆ. ಆದರೆ ಒಳಗಿನ ಹಣ್ಣಿನ ಭಾಗ ಬಹಳ ಮೆತ್ತಗೆ ಮೃದುವಾಗಿ ಹುಳಿ ಒಗರು ಒಗರಾಗಿ ಇರುತ್ತದೆ. ಹಾಗಾಗಿ ಕೆಲವರು ಇದಕ್ಕೆ ಬೆಲ್ಲವನ್ನು ಸೇರಿಸಿ ತಿನ್ನುತ್ತಾರೆ.
ಇನ್ನೂ ಈ ಹಣ್ಣನ್ನು ಸೇವನೆ ಮಾಡುವುದರಿಂದ ಆಗುವ ಲಾಭಗಳನ್ನು ನೋಡುವುದಾದರೆ, ಯಾರಿಗೆ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲವೋ ಅಂಥವರಿಗೆ ಈ ಹಣ್ಣು ರಾಮಬಾಣ ಎಂದೇ ಹೇಳಬಹುದು. ಜೀರ್ಣ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾದಾಗ ಈ ಹಣ್ಣನ್ನು ಸೇವನೆ ಮಾಡುವುದು ಬಹಳ ಸೂಕ್ತ. ಇದು ಅತಿಸಾರ ವನ್ನಾ ಕೂಡ ತಡೆಯುತ್ತದೆ. ಹಾಗೆಯೇ ಇದರ ಸೇವನೆಯಿಂದ ಮಲಬದ್ದತೆ ಸಮಸ್ಯೆ ನಿವಾರಣೆ ಆಗುತ್ತದೆ. ಹಾಗೂ ಅತಿಯಾದ ಅಸಿಡಿಟಿ ಇಂದ ಬರುವ ಹೊಟ್ಟೆಯ ಅಲ್ಸರ್ ಗಳನ್ನ ಕೂಡ ಕಡಿಮೆ ಮಾಡುತ್ತದೆ. ಈ ಬೇಲದ ಹಣ್ಣಿನಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ ಸಿ ಕೊರತೆಯಿಂದ ಬರುವ ರೋಗಗಳನ್ನು ತಡೆಗಟ್ಟಬಹುದು. ಇನ್ನೂ ನಿಮಗೆ ಕಫ ದ ಸಮಸ್ಯೆ ಇದ್ದಾರೆ ಈ ಬೇಲದ ಹಣ್ಣಿಗೆ ಒಂದಿಷ್ಟು ಕಲ್ಲು ಸಕ್ಕರೆ ಹಾಕಿಕೊಂಡು ಸೇವನೆ ಮಾಡುವುದರಿಂದ ಕಫದ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ. ಇನ್ನೂ ಯಾರಿಗೆ ಬಿಕ್ಕಳಿಕೆ ಸಮಸ್ಯೆ ಇರುತ್ತದೆ ಅವರು ಕೆಲವೊಮ್ಮೆ ಎಷ್ಟು ನೀರು ಕುಡಿದರೂ ಬಿಕ್ಕು ನಿಲ್ಲುವುದೇ ಇಲ್ಲ. ಅಂಥವರು ಈ ಹಣ್ಣಿನ ರಸದೊಂದಿಗೆ ಬೆಟ್ಟದ ನೆಲ್ಲಿಕಾಯಿ ರಸವನ್ನು ಸೇರಿಸಿ ದಿನಕ್ಕೆ ಒಂದೆರಡು ಚಮಚ ಸೇವನೆ ಮಾಡುತ್ತಾ ಬಂದರೆ ಬಿಕ್ಕಳಿಕೆ ಸಮಸ್ಯೆ ನಿರ್ನಾಮ ಆಗುತ್ತದೆ.
ಇನ್ನೂ ಈ ಬೇಕಾದ ಹಣ್ಣನ್ನು ತಿನ್ನುವುದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹೌದು ಸ್ನೇಹಿತರೆ ಈ ಬೇಲದ ಹಣ್ಣಿನಲ್ಲಿರುವ ರಂಜಕದ ಅಂಶ ನಿಮ್ಮ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಇನ್ನೂ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ ಇರಿಸಲು ಮತ್ತು ಬಾಯಿಯ ದುರ್ಗಂಧವನ್ನು ಕಡಿಮೆ ಮಾಡಲು ಈ ಹಣ್ಣಿನ ಪಾನಕವನ್ನು ಸೇವಿಸಬೇಕು. ಬೇಸಿಗೆ ಕಾಲದಲ್ಲಿ ಈ ಹಣ್ಣಿನ ರಸವನ್ನು ಸೇವನೆ ಮಾಡುವುದರಿಂದ ದೇಹ ತಂಪಾಗುತ್ತದೆ. ಇನ್ನೂ ದಿನಕ್ಕೆ ಒಂದು ಬಾರಿ ಬೆಲ್ಲದ ಹಣ್ಣಿನ ರಸವನ್ನು ಕುಡಿಯುವುದರಿಂದ ನೀವು ಸದಾ ಕಾಲ ಉಲ್ಲಾಸದಿಂದ ಇರಬಹುದು ಹಾಗೆ ನಿಮ್ಮ ದೇಹಕ್ಕೆ ಹೊಸ ಚೈತನ್ಯ ಶಕ್ತಿಯನ್ನು ಕೊಟ್ಟು ನಿಮ್ಮನ್ನು ಸದಾ ಕಾಲ ಲವಲವಿಕೆ ಇಂದ ಕೂಡಿರುವಂತೆ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ನಿಮಗೆಲ್ಲಾ ಗೊತ್ತಿರುವ ಹಾಗೆ ಬಿಸಿಲಿನ ಧಗೆ ಇರುತ್ತೆ ಆಗ ಸ್ವಲ್ಪವೇ ಕೆಲಸ ಮಾಡಿದರೂ ಸುಸ್ತು ಆಗುವುದು ಸಹಜ ಆಗ ಈ ಹಣ್ಣಿನ ರಸ ರಾಮಬಾಣ ದ ರೀತಿ ಕೆಲಸ ಮಾಡಿ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ನೊಡಿದ್ರಲ್ಲ ಸ್ನೇಹಿತರೆ ಬೇಲದ ಹಣ್ಣಿನ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗಗಳಿವೆ ಎಂದು. ನಿಮಗೆ ಈ ಹಣ್ಣು ಎಲ್ಲಾದರೂ ಸಿಕ್ಕರೆ ತಪ್ಪದೇ ಸೇವನೆ ಮಾಡಿ ಇದರ ಸಂಪೂರ್ಣ ಲಾಭ ಪಡೆಯಿರಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.