ನಮಸ್ತೆ ಪ್ರಿಯ ಓದುಗರೇ, ಭಾರತದಲ್ಲಿ ಮಣ್ಣಿನ ಮಾಡಿಕೆಗಳಿಗೆ ಶತಮಾನಗಳ ಇತಿಹಾಸ ಇದೆ. ಅನೇಕ ಮನೆಗಳಲ್ಲಿ ಇಂದಿಗೂ ಕೂಡ ಈ ಮಣ್ಣಿನ ಮಡಿಕೆಗಳನ್ನು ಬಳಕೆ ಮಾಡುತ್ತಾ ಇದ್ದರೆ. ಮತ್ತು ಹಿಂದೆ ನಾವು ಬಳಸಿದಂತಹ ಮಣ್ಣಿನ ಪಾತ್ರೆಗಳು ಅಥವಾ ಮಡಿಕೆಗಳು ಈಗ ಮತ್ತೆ ಬೆಳಕಿಗೆ ಬರುತ್ತಾ ಇದೆ. ಸ್ವಲ್ಪ ದುಬಾರಿ ಅನಿಸಿದರೂ ಕೂಡ ಶುದ್ಧವಾದ ಮಣ್ಣಿನಿಂದ ಮಾಡಿರುವ ಮಡಿಕೆಗಳು ತುಂಬಾನೇ ಒಳ್ಳೆಯದು. ಈ ಮಣ್ಣಿನ ಮಡಿಕೆಯಲ್ಲಿನ ನೀರು ತುಂಬಾನೇ ತಂಪಾಗಿ ಇರುತ್ತದೆ ಮತ್ತು ಅಷ್ಟೇ ರುಚಿಯಾಗಿ ಇರುತ್ತದೆ. ಈ ಮಡಿಕೆಯಲ್ಲಿ ನೀರನ್ನು ಹಾಕುವುದರಿಂದ ಮಣ್ಣಿನ ಎಲ್ಲಾ ಗುಣಗಳು ನೀರಿನಲ್ಲಿ ಬೇರೆ ಯುತ್ತವೆ. ಆ ನೀರನ್ನು ನಾವು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇವತ್ತಿನ ಲೇಖನದಲ್ಲಿ ಈ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಯುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ ಎಂದು ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಮೊದಲನೆಯದಾಗಿ ಈ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಯುವುದರಿಂದ ಇದು ಬೇಸಿಗೆ ಕಾಲದಲ್ಲಿ ಇದು ತುಂಬಾ ಪ್ರಯೋಜನ ಆಗಿದೆ. ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರು ಫ್ರಿಡ್ಜ್ ನೀರನ್ನು ಕುಡಿಯುತ್ತಾರೆ ಆದರೆ ಫ್ರಿಡ್ಜ್ ನಲ್ಲಿ ಇರುವ ನೀರನ್ನು ಕುಡಿಯುವುದರಿಂದ ಸಾಕಷ್ಟು ಅನಾರೋಗ್ಯದ ಸಮಸ್ಯೆಗಳಿಗೆ ಒಳಗಾಗಬಹುದು.
ಫ್ರಿಡ್ಜ್ ನಲ್ಲಿ ಇರುವ ನೀರು ನೈಸರ್ಗಿಕವಾಗಿ ತಂಪಾಗಿ ಇರುವುದಿಲ್ಲ ಹಾಗಾಗಿ ಫ್ರಿಡ್ಜ್ ನಲ್ಲಿ ಇರುವ ನೀರನ್ನು ಕುಡಿಯುವುದರಿಂದ ಸಾಕಷ್ಟು ಅರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ರೆ ಈ ಮಣ್ಣಿನ ಮಡಿಕೆಯಲ್ಲಿ ಇರುವ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದ್ರಲ್ಲೂ ಈ ಮಣ್ಣಿನ ಮಡಿಕೆಯಲ್ಲಿ ಇರುವಂಥ ನೀರು ನೈಸರ್ಗಿಕವಾಗಿ ತಂಪಾಗಿ ಇರುತ್ತದೆ. ಈ ಮಣ್ಣಿನ ಮಡಿಕೆಯಲ್ಲಿ ಕ್ಷಾರ್ಯ ಗುಣಗಳು ಇವೆ. ಮನುಷ್ಯನ ದೇಹವು ಸಾಮಾನ್ಯವಾಗಿ ಆಮ್ಲೀಯ ಗುಣಗಳಿಂದ ಕೂಡಿರುತ್ತದೆ. ಮಣ್ಣು ಕ್ಷಾರ್ಯ ಗುಣವನ್ನು ಹೊಂದಿರುತ್ತದೆ. ಈ ಮಣ್ಣಿನ ಮಡಿಕೆಯಲ್ಲಿ ಇಟ್ಟಿರುವ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿನ ಪೀ. ಹೆಚ್ ಮಟ್ಟವನ್ನು ಕಾಪಾಡುತ್ತದೆ. ನಮಗೆ ಅಸಿಡಿಟಿ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಆಗುತ್ತೆ. ಮಣ್ಣಿನ ಮಡಿಕೆಯಲ್ಲಿ ಇಟ್ಟಿರುವ ನೀರು ಕುಡಿಯುವುದರಿಂದ ದೇಹ ತಂಪಾಗಿ ಇರುತ್ತದೆ. ಬೇಸಿಗೆ ಕಾಲದಲ್ಲಿ ಈ ಮಣ್ಣಿನ ಮಡಿಕೆಯಲ್ಲಿ ಇಟ್ಟಿರುವ ನೀರನ್ನು ಉಪಯೋಗ ಮಾಡುವುದು ತುಂಬಾನೇ ಒಳ್ಳೆಯದು. ಇನ್ನೂ ಈ ಮಡಿಕೆಯಲ್ಲಿನ ನೀರನ್ನು ಕುಡಿಯುವುದರಿಂದ ನಮ್ಮ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ.
ಜೀರ್ಣ ಕ್ರಿಯೆ ಹಾಗೂ ಚಯಾಪಚಯ ಕ್ರಿಯೆ ವೃದ್ಧಿಸುವಲ್ಲಿ ದೇಹದ ತೇವಾಂಶವೂ ಪ್ರಮುಖ ಪಾತ್ರ ವಹಿಸುತ್ತದೆ. ಮಣ್ಣಿನ ಮಡಿಕೆಯಲ್ಲಿ ಇಟ್ಟಿರುವ ನೀರನ್ನು ಕುಡಿಯುವುದರಿಂದ ನಮ್ಮ ಜೀರ್ಣ ಕ್ರಿಯೆ ವ್ಯವಸ್ಥೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಯಾವುದೇ ರೀತಿ ರಾಸಾಯನಿಕಗಳು ಇರುವುದಿಲ್ಲ ಇದರ ಇನ್ನೊಂದು ವಿಶೇಷ ವಿಷಯ ಎಂದರೆ ಮಣ್ಣು ವಿಷಕಾರಿ ವಸ್ತುಗಳನ್ನು ಹೀರಿಕೊಳ್ಳುತ್ತದೆ. ಈ ನೀರಿನಲ್ಲಿ ಇರುವ ವಿಷಕಾರಿ ವಸ್ತುಗಳನ್ನು ಹೀರಿಕೊಂಡು ನೀರನ್ನು ಶುದ್ಧ ಮಾಡುವ ಗುಣಗಳು ಮಣ್ಣಿನಲ್ಲಿ ಇವೆ. ಇನ್ನೂ ಈ ಮಡಿಕೆಯಲ್ಲಿನ ನೀರನ್ನು ಏಷ್ಟು ದಿನಗಳ ವರೆಗೆ ಉಪಯೋಗ ಮಾಡಬೇಕು ಎಂದು ನೋಡುವುದಾದರೆ, ಈ ಮಡಿಕೆಯಲ್ಲಿ ನ ನೀರನ್ನು ಗರಿಷ್ಟ ಮೂರು ದಿನಗಳ ಒಳಗೆ ಬಳಸಬೇಕು, ಇಲ್ಲದೆ ಹೋದರೆ ಹಳೆಯ ನೀರನ್ನು ಪೂರ್ಣವಾಗಿ ಹೊರಗೆ ಚೆಲ್ಲಿ ಹೊಸ ನೀರನ್ನು ತುಂಬಿ ಇಟ್ಟು ಬಳಸಿದರೆ ಉತ್ತಮ. ವಾರಕ್ಕೆ ಒಮ್ಮೆಯಾದರೂ ಈ ಮಡಿಕೆಯನ್ನು ಚೆನ್ನಾಗಿ ತೊಳೆದು ಬಳಸಿದರೆ ಒಳಿತು. ಇಂದಿನ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.