ನಮಸ್ತೆ ಪ್ರಿಯ ಓದುಗರೇ, ಬೇಸಿಗೆ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಯಾವೆಲ್ಲ ರೀತಿಯಾಗಿ ರಕ್ಷಣೆ ಮಾಡಿಕೊಳ್ಳಬೇಕು ಮತ್ತು ಬೇಸಿಗೆ ಕಾಲದಲ್ಲಿ ಬರುವಂತಹ ರೋಗಗಳ ಬಗ್ಗೆ ನಾವು ಹೇಗೆ ಮುನ್ನೆಚ್ಚರಿಕೆ ವಹಿಸಬೇಕು, ನಮ್ಮ ಆಹಾರ ಕ್ರಮ ಯಾವ ರೀತಿ ಇರಬೇಕು ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಪ್ರತಿ ವರ್ಷವೂ ಕೂಡ ಬಿಸಿಲಿನ ಶಾಖ ಹೆಚ್ಚಾಗುತ್ತಾ ಹೋಗುತ್ತ ಇದೆ. ಮಾರ್ಚ್ ತಿಂಗಳು ಪ್ರಾರಂಭ ಆದರೆ ಸಾಕು ಬಿಸಿಲಿನ ಧಗೆ ಗೆ ನಮಗೆ ಸಾಕಷ್ಟು ರೋಗಗಳು ನಮಗೆ ಕಾಡುತ್ತವೆ. ಮುಖ್ಯವಾಗಿ ಈ ಬಿಸಿಲಿನ ಕಾಲದಲ್ಲಿ ಜನರಿಗೆ ವಾಂತಿ ಬೇಧಿ ಆಗುತ್ತದೆ. ಕಣ್ಣಿನ ತೊಂದರೆ ಆಗುತ್ತದೆ ಮತ್ತು ಮಕ್ಕಳಿಗೆ ಚಿಕನ್ ಪಾಕ್ಸ್ ಆಗುತ್ತದೆ ಮತ್ತು ಬಿಸಿಲಿನಿಂದ ತಲೆ ಸುತ್ತು ಮೈಗ್ರೇನ್ ಮತ್ತು ಅತಿಯಾದ ಬಿಸಿಲಿನಿಂದ ಕೆಲವರಿಗೆ ಮೂಗಿನಿಂದ ರಕ್ತ ಸುರಿಯುತ್ತದೆ. ಚರ್ಮದ ಸಮಸ್ಯೆಗಳು ಕೂಡ ಕಾಡುತ್ತಾ ಇರುತ್ತವೆ. ಹಾಗಾಗಿ ಬೇಸಿಗೆ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿ ಇರುತ್ತದೆ. ಇನ್ನೂ ಬೇಸಿಗೆ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಯಾವ ರೀತಿಯಾಗಿ ಕಾಪಾಡಿಕೊಳ್ಳಬೇಕು ಅಂತ ನೋಡುವುದಾದರೆ, ಮೊದಲನೆಯದಾಗಿ ಬೇಸಿಗೆ ಕಾಲದಲ್ಲಿ ನಿದ್ದೆ ಕಡಿಮೆ ಆಗುತ್ತದೆ ಅದರಲ್ಲೂ ಶೇಕೆ ಜಾಸ್ತಿ ಇದ್ರೆ ನಿದ್ದೆನೇ ಆಗುವುದಿಲ್ಲ.
ಇನ್ನೂ ನೀವೇನಾದರೂ ಮಧ್ಯಾನ ಮಲಗುತ್ತಾ ಇದ್ದರೆ ಅದನ್ನೂ ಈಗಲೇ ಬಿಟ್ಟು ಬಿಡಿ. ಯಾಕಂದ್ರೆ ಮಧ್ಯಾನ ಮಲಗುತ್ತ ಇದ್ದರೆ ನಿಮಗೆ ರಾತ್ರಿ ನಿದ್ದೆ ಬರುವುದಿಲ್ಲ. ಮನುಷ್ಯನಿಗೆ ನಿದ್ದೆ ಸರಿಯಾಗಿ ಆಗದೇ ಇದ್ದರೆ ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಇರೋದಿಲ್ಲ. ಮತ್ತು ಅವರ ಆರೋಗ್ಯ ಕೂಡ ಕೆಡುತ್ತದೆ. ಹಾಗಾಗಿ ನೀವೇನಾದರೂ ಮಧ್ಯಾನದ ಸಮಯದಲ್ಲಿ ಮಲಗುವ ಅಭ್ಯಾಸ ಇದ್ದರೆ ಅದನ್ನೂ ಬಿಟ್ಟು ಬಿಡುವುದು ಒಳ್ಳೆಯದು. ಮತ್ತು ಬೆಳಿಗ್ಗೆ ಬೇಗನೆ ಏಳುವುದು ಕೂಡ ತುಂಬಾನೇ ಒಳ್ಳೆಯದು ಅದರಲ್ಲೂ ಸೂರ್ಯ ಉದಯಿಸುವ ಮುಂಚೆ ಎದ್ದು ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದು ಕೂಡ ಬಹಳ ಒಳ್ಳೆಯದು. ಇನ್ನೂ ಈ ಬೇಸಿಗೆ ಕಾಲದಲ್ಲಿ ಹಲವಾರು ಜನರಿಗೆ ಚರ್ಮದ ತೊಂದರೆ ಉಂಟಾಗುತ್ತದೆ ಅದರಲ್ಲಿ ಡ್ರೈ ಸ್ಕಿನ್ ಇರುವವರಿಗೆ ತುಂಬಾ ಸಮಸ್ಯೆ. ಯಾರಿಗೆ ಡ್ರೈ ಸ್ಕಿನ್ ಸಮಸ್ಯೆ ಇರುತ್ತದೋ ಅವರು ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಪ್ರತಿನಿತ್ಯ ಸ್ನಾನ ಮಾಡುವ ಮುಂಚೆ 10-15 ನಿಮಿಷ ಚೆನ್ನಾಗಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನವನ್ನು ಮಾಡಿದರೆ ಒಳ್ಳೆಯದು. ಇನ್ನೂ ಈ ಬೇಸಿಗೆ ಕಾಲದಲ್ಲಿ ನಾವು ಆರೋಗ್ಯದಿಂದ ಇರುವುದು ನಾವು ತಿನ್ನುವ ಆಹಾರ ಕ್ರಮದ ಮೇಲೂ ಡಿಪೆಂಡ್ ಇರುತ್ತದೆ. ಈ ಬೇಸಿಗೆ ಕಾಲದಲ್ಲಿ ನಮಗೆ ಘನ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾವು ನೀರಿನ ಅಂಶ ಜಾಸ್ತಿ ಇರುವಂಥ ಆಹಾರಗಳನ್ನು ಸೇವಿಸಬೇಕು. ಎಲ್ಲಾ ರೀತಿಯ ಹಣ್ಣುಗಳನ್ನೂ ಈ ಬೇಸಿಗೆ ಕಾಲದಲ್ಲಿ ಸೇವನೆ ಮಾಡುವು ದು ಬಹಳ ಮುಖ್ಯ ಆಗಿರುತ್ತದೆ. ಅದರಲ್ಲೂ ನೀರಿನಂಶ ಜಾಸ್ತಿ ಇರುವ ಹಣ್ಣುಗಳು ಯಾವುದು ಅಂದ್ರೆ ಕರ್ಬೋಜಾ, ಕಲ್ಲಂಗಡಿ ಹಣ್ಣು ಈ ರೀತಿಯ ಹಣ್ಣುಗಳನ್ನೂ ಸೇವನೆ ಮಾಡಬೇಕು. ಹಾಗೂ ವಾರದಲ್ಲಿ ಒಂದೆರೆಡು ಸಲ ಎಳನೀರನ್ನು ಸೇವನೆ ಮಾಡಿ. ಇದರಿಂದ ದೇಹದಲ್ಲಿ ಇರುವ ನಿಶ್ಯಕ್ತಿ ಕಡಿಮೆ ಆಗುತ್ತದೆ ಮತ್ತು ನಮ್ಮ ದೇಹ ಡೆಹೈಡ್ರೆಟ್ ಆಗುವುದನ್ನು ತಪ್ಪಿಸಿಕೊಳ್ಳಬಹುದು. ಈ ಬೇಸಿಗೆ ಕಾಲದಲ್ಲಿ ನಾವು ಹಾಕಿಕೊಳ್ಳುವ ಬಟ್ಟೆಗಳು ಕೂಡ ತುಂಬಾನೇ ಮುಖ್ಯವಾದ ಪಾತ್ರ ವಹಿಸುತ್ತದೆ ಹಾಗಾಗಿ ಶುದ್ಧವಾದ ಹತ್ತಿ ಬಟ್ಟೆ ಅಂದ್ರೆ ಕಾಟನ್ ಬಟ್ಟೆಗಳನ್ನು ಧರಿಸುವುದು ಬಹಳ ಒಳ್ಳೆಯದು. ಮತ್ತು ಹೊರಗಿನ ಆಹಾರ ಸೇವನೆ ಮಾಡುವುದು ಬಿಟ್ಟರೆ ಒಳ್ಳೆಯದು. ಅದರಲ್ಲೂ ಕರಿದಿರುವ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ. ಈ ಬೇಸಿಗೆ ಕಾಲದಲ್ಲಿ ವಿಧ್ಯಾರ್ಥಿಗಳು ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಯಾಕೆಂದರೆ ಬೇಸಿಗೆ ಕಾಲ ಪರೀಕ್ಷೆಯ ಸಮಯ ಆಗಿದ್ದರಿಂದ ವಿಧ್ಯಾರ್ಥಿಗಳು ಅಪಾರ ಮುನ್ನೆಚ್ಚರಿಕೆ ವಹಿಸಬೇಕು.
ಪರೀಕ್ಷೆಯ ತಯಾರಿಯ ಸಮಯದಲ್ಲಿ ಕೆಲವರು ಸರಿಯಾದ ಸಮಯಕ್ಕೆ ಊಟಾ ತಿಂಡಿ ನೀರು ಸೇವಿಸದೇ ಸರಿಯಾದ ಸಮಯಕ್ಕೆ ಮಲಗುವುದನ್ನೋ ಮಾಡುತ್ತಿರುವುದೂ ಇಲ್ಲ. ಇದರಿಂದ ಮೇಗ್ರೈನ್ ನಂತಹ ಸಮಸ್ಯೆಗಳು ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಊಟಾ ನೀರು ನಿದ್ದೆ ಮಾಡದಿದ್ದರೆ ಮೆದುಳಿಗೆ ಗ್ಲುಕೋಸ್ ಕೊರತೆ ಉಂಟಾಗುತ್ತದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಮೈಗ್ರೆನ್ ನಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಅಗತ್ಯವಾದ ಊಟಾ ತಿಂಡಿ ನಿದ್ದೆ ಮಾಡೋದು ಮುಖ್ಯವಾಗಿರುತ್ತದೆ. ಬೇಸಿಗೆ ಕಾಲದಲ್ಲಿ ನಮ್ಮ ದೇಹದಲ್ಲಿ ಬಹಳ ಬೆವರು ಬರುತ್ತಾ ಇರುತ್ತದೆ ಇದರಿಂದ ನಮ್ಮ ದೇಹದಲ್ಲಿನ ನೀರಿನಂಶ ಕಡಿಮೆ ಆಗುತ್ತಾ ಇರುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಅನೇಕ ಸಮಸ್ಯೆಗಳು ಎದುರಾಗಬಹುದು ಹಾಗಾಗಿ ನಾವು ನಮ್ಮ ದೇಹಕ್ಕೆ ಎಷ್ಟು ನೀರು ಅಗತ್ಯವೋ ಅಷ್ಟು ನೀರು ಕುಡಿಯುವುದು ಒಳ್ಳೆಯದು. ಒಂದುವೇಳೆ ನಿಮಗೆ ನೀರು ಕುಡಿಯುವುದು ನೆನಪು ಆಗದೆ ಇದ್ದರೇ, ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಅಲ್ಲಿ ನೀರನ್ನು ಕುಡಿಯಲು ನೆನಪಿಸುವ ರಿಮೇಂಡರ್ ಅಪ್ಲಿಕೇಶನ್ ಗಳು ಸಿಗುತ್ತವೆ. ಅವುಗಳನ್ನು ಬಳಸಿ ಮೊಬೈಲ್ ನಲ್ಲಿ ರಿಮೈ ರಿಮೈಂಡರ್ ಅಥವಾ ಅಲಾರಂ ಇಟ್ಟುಕೊಳ್ಳಬಹುದು. ನೋಡಿದ್ರಲ್ಲ ಸ್ನೇಹಿತರೆ ಬೇಸಿಗೆ ಕಾಲದಲ್ಲಿ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.