ಬೈಕ್ ಮಾರಾಟ ಮಾಡುವ ವ್ಯವಹಾರದ ಬಗ್ಗೆ ನಿಮಗೆಷ್ಟು ಗೊತ್ತು ? ಒಂದು ಲಕ್ಷ ರೂಪಾಯಿ ಮೌಲ್ಯದ ಬೈಕ್ ಮಾರಿದರೆ ಡಿಲರ್ ಗೆ ಎಷ್ಟು ಹಣ ಗಳಿಕೆಯಾಗುತ್ತೆ ? ಈ ಬ್ಯುಸಿನೆಸ್ ಸುತ್ತಲಿನ ಕುತೂಹಲಕಾರಿ ವಿವರಗಳು ನಿಮಗೆ ಗೊತ್ತಿದೆಯೇ? ನಮ್ಮ ದೇಶದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ, ದಿನಕ್ಕೆ ಒಂದು ಸಾವಿರ ರೂಪಾಯಿಯಿಂದ ಹಿಡಿದು ಒಂದು ಲಕ್ಷಕ್ಕಿಂತ ಹೆಚ್ಚಿನ ಕಮಿಷನ್ ಸಿಗುವ option ಗಳವರೆಗೆ ಹಲವಾರು ವಾಹನಗಳು ಮಾರಾಟವಾಗುತ್ತಿರುತ್ತವೆ.
ಈಗ ನೀವು, ಸರಿಸುಮಾರು ಒಂದು ಲಕ್ಷ ರೂಪಾಯಿ ಬೆಲೆಯ ಬೈಕ್ ಅನ್ನು ಮಾರುತ್ತಿದ್ದೀರಾ ಎಂದುಕೊಳ್ಳಿ. ಅಂತಹ ಬೈಕ್‌ಗಳನ್ನು ಮಾರಾಟ ಮಾಡುವಾಗ ಡೀಲರ್‌ಗಳ ಗಳಿಕೆಯ ಬಗ್ಗೆ ನೀವು ಯವತ್ತಾದ್ರೂ ಯೋಚಿಸಿದ್ದೀರಾ? ಈ ಇಂಟೆರೆಸ್ಟಿಂಗ್ ಲೇಖನವು ಬಹಳಷ್ಟು ಮಾಹಿತಿಯನ್ನ ನಿಮಗೆ ತಿಳಿಸುತ್ತದೆ.
ಡಿಲರ್ ಗಳು ಪಡೆಯುವ ಕಮಿಷನ್ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಮೊದಲನೆದಾಗಿ ಬೈಕ್ ಮಾದರಿ ಮತ್ತು ಅದರ ಎಂಜಿನ್ ಸಾಮರ್ಥ್ಯದ ಮೇಲೆ ಡಿಪೆಂಡ್ ಆಗಿರುತ್ತೆ. ಇದಲ್ಲದೆ, ಇದು ಬ್ರ್ಯಾಂಡ್ ಮತ್ತು ಶೋ ರೂಂನ ಸ್ಥಳದಿಂದ ಪ್ರಭಾವಿತವಾಗಿರುತ್ತದೆ. ಒಂದು ಲಕ್ಷ ರೂಪಾಯಿ ಮೌಲ್ಯದ ಬೈಕ್‌ಗೆ, ಡಿಲರ್ ಗಳು ಸಾಮಾನ್ಯವಾಗಿ 10 ರಿಂದ 15 ಪ್ರತಿಶತದಷ್ಟು ಕಮಿಷನ್ ಅಥವಾ ಮಾರ್ಜಿನ್ ಅನ್ನು ಪಡೆಯುತ್ತಾರೆ. ಇದು ಡೀಲರ್‌ಗೆ 10,000 ರಿಂದ 15,000 ರೂಪಾಯಿಗಳ ಲಾಭವನ್ನು ನೀಡುತ್ತದೆ. ಬೈಕ್‌ನ ಬೆಲೆ ಹೆಚ್ಚಾದಂತೆ ಡೀಲರ್‌ನ ಲಾಭದ ಪ್ರಮಾಣವೂ ಹೆಚ್ಚಾಗುತ್ತದೆ ಎಂಬುದು ನೆನಪಿಡಿ.