ಗ್ರೀನ್ ಟೀ ವಿವಿಧ ಖನಿಜಗಳು ವಿಟಮಿನ್ ಗಳು ಪ್ರಬಲ ಆಂಟಿಆಕ್ಸಿಡೆಂಟ್ ಗುಣಗಳು ಇರುವ ಆರೋಗ್ಯವರ್ಧಕ. ದಿನನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು. ಹಾಗಾಗಿ ಚೀನಾದಲ್ಲಿ ಹಿಂದಿನಿಂದಲೂ ಗ್ರೀನ್ ಟೀ ಯನ್ನು ಹಲವಾರು ಕಾಯಿಲೆಗಳ ಚಿಕಿತ್ಸೆಗೆ ಬಳಸಿ ಕೊಂಡು ಬರುತ್ತಿದ್ದಾರೆ. ನೀವು ತೂಕ ಇಳಿಸಿಕೊಳ್ಳಬೇಕು ಅನ್ನುತ್ತಿದ್ದಾರೆ ದಿನಕ್ಕೆ ಎರಡರಿಂದ ಮೂರು ಕಪ್ ಗ್ರೀನ್ ಟೀ ಕುಡಿದರೆ ಸಾಕು ಆಟೋಮೆಟಿಕ್ ಆಗಿ ತೂಕ ಇಳಿಯುತ್ತದೆ. ಈ ಗ್ರೀನ್ ಟೀ ನೈಸರ್ಗಿಕ ಮೂತ್ರವರ್ಧಕ ಆಗಿದೆ.
ಇದರಿಂದಾಗಿ ದೇಹದಲ್ಲಿ ದ್ರವ ಸಂಗ್ರಹಣೆ ಆಗುವಂತಹ ಸಮಸ್ಯೆ ನಿವಾರಿಸಬಹುದು. ಮತ್ತು ತಡೆಯಲೂ ಬಹುದು. ನಿಯಮಿತವಾಗಿ ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಸುಮಾರು 19ರಷ್ಟು ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ದಿನನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಚರ್ಮಕ್ಕೂ ಕೂಡ ಒಳ್ಳೆಯದು. ಮುಖದ ಮೇಲೆ ಇರುವ ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಲು ಮುಖದ ಮೇಲೆ ಇರುವ ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಿ ಮುಖ ತುಂಬಾ ಚೆನ್ನಾಗಿ ಕಾಣುತ್ತದೆ. 2 ಟೀ ಸ್ಪೂನ್ ನಷ್ಟು ಟಿಪ್ಪುವನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡಿ.
ಅದನ್ನು ಮುಖಕ್ಕೆ ಲೇಪಿಸಿ ಒಂದು ಗಂಟೆಯ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲೆ ಇರುವ ಕಲೆಗಳು ತೊಲಗಿ ಅಂದವಾಗಿ ಕಾಣಿಸಿದಂತೆ. ಇನ್ನು ಮೂರು ಚಮಚ ಗ್ರೀನ್ ಟೀ ಪುಡಿಗೆ ಸ್ವಲ್ಪ ಮೊಟ್ಟೆಯ ಬಿಳಿಭಾಗ ಸ್ವಲ್ಪ ನಿಂಬೆರಸ ಮತ್ತು ಜೇನು ಮಿಶ್ರಣ ಮಾಡಿ ಅದನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ ಸ್ವಲ್ಪ ಸಮಯದ ಬಳಿಕ ಸ್ವಚ್ಛಗೊಳಿಸಿ. ಇದರಿಂದ ಚರ್ಮ ತಾಜಾ ವಾಗಿರುತ್ತದೆ. ತಲೆಗೆ ಸ್ನಾನ ಮಾಡಿದ ಬಳಿಕ ಸ್ವಲ್ಪ ಗ್ರೀನ್ ಟೀ ದ್ರಾವಣವನ್ನು ತೆಗೆದುಕೊಂಡು ಕೂದಲನ್ನು ತೊಳೆದರೆ ಕೇಶ ಮೃದು ಆಗುವುದರ ಜೊತೆಗೆ ಸಮೃದ್ಧವಾಗಿ ಬೆಳೆಯುತ್ತದೆ.