ಬ್ರೈನ್ ಸ್ಟ್ರೋಕ್ ಎಂದರೇನು? ಈಗಂತೂ ಯಾರಿಗಾದರೂ ಯಾವ ಕ್ಷಣದಲ್ಲಿ ಎನಾಗುತ್ತದೆಯೋ ಎಂದು ಊಹಿಸಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಬದುಕು ಅಸುರಕ್ಷಿತವಾಗಿದೆ ನಮ್ಮ ಮೆದುಳಿಗೆ ರಕ್ತ ಸಂಚಾರ ವಾಗುವುದು ಇದ್ದಕ್ಕಿದ್ದಂತೆ ಕಡಿಮೆಯಾದಾಗ ನಿಂತು ಹೋದಾಗ ಮೆದುಳಿನ ನರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಹಾಗೂ ಪೋಷಕಾಂಶಗಳು ದೊರೆಯುವುದಿಲ್ಲಇದರಿಂದಾಗಿ ನರಗಳು ನಿಮಿಷದಲ್ಲಿ ಸಾಯುತ್ತವೆ ಹೀಗೆ ಉಂಟಾದಾಗ ಬ್ರೈನ್ ಸ್ಟ್ರೋಕ್ ಉಂಟಾಗುತ್ತದೆ.
ಬ್ರೈನ್ ಸ್ಟ್ರೋಕ್ ಉಂಟಾದಾಗ ಕಂಡುಬರುವ ಲಕ್ಷಣಗಳು ಮಾತನಾಡಲು ಕಷ್ಟವಾಗುವುದು ತೊದಲುವುದು ಗೊಂದಲ ಮಾತುಗಳು ದೊಡ್ಡವರಿಸುವುದು ಒಂದು ಅಥವಾ ಎರಡು ಕಣ್ಣುಗಳಲ್ಲಿ ಸಮಸ್ಯೆ ಕಂಡು ಬರಬಹುದು ಕಣ್ಣು ಮುಂಜಾಗುವುದು ವಸ್ತುಗಳು ಎರಡು ಎರಡಾಗಿ ಕಾಣುವುದು ಮುಖ ಅಥವಾ ಕೈಕಾಲುಗಳಿಗೆ ಪಾಶ್ವ ವಾಯು ವಾಗುವುದು. ಈ ಸಮಯದಲ್ಲಿ ವ್ಯಕ್ತಿಗೆ ಕೈಕಾಲುಗಳು ಮರಗಟ್ಟಿದಂತಾಗುವುದು ಕೈಗಾಲುಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುವುದಿಲ್ಲ.
ಅಲ್ಲದೆ ತುಟಿ ಕೂಡ ಒಂದು ಕಡೆಗೆ ತಿರುಗಬಹುದು ತಲೆನೋವು ವಿಪರೀತ ತಲೆನೋವು ಇದರ ಜೊತೆಗೆ ವಾಂತಿ ತಲೆ ಸುತ್ತು ಇವುಗಳಿಗೆ ಯಾವುದು ಬೇಕಾದರೂಕಾಣಬಹುದು ನಡೆಯಲು ಕಷ್ಟವಾಗುವುದು ವ್ಯಕ್ತಿಗೆ ನಡೆಯಲು ಸಾಧ್ಯವಾಗುವುದು ದೇಹದ ಸಮತೋಲನ ತಪ್ಪುತ್ತದೆ. ತೋಳಿನ ದೌರ್ಬಲ್ಯವು ಸ್ಪಷ್ಟವಾಗಿ ತಿಳಿಯುವುದಿಲ್ಲ. ತಮ್ಮ ಕೈಯಿಂದ ವಸ್ತುಗಳು ಕೆಳಗೆ ಬೀಳುವವರೆಗೂ ತೋಳಿನ ದೌರ್ಬಲ್ಯವು ಪಾರ್ಶ್ವವಾಯುವಿಗೆ ಒಳಗಾದ ವ್ಯಕ್ತಿಗೆ ತಿಳಿಯುವುದಿಲ್ಲ.
ತುರ್ತು ಚಿಕಿತ್ಸೆ ಯಾವುದಾದರೂ ಒಂದು ಲಕ್ಷಣ ಕಂಡುಬಂದರೂ ತಡ ಮಾಡಬೇಡಿ, ಕೂಡಲೇ ಉತ್ತಮ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗೆ ತಲುಪಿಸಿ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ ಕೂಡಲೇ ಚಿಕಿತ್ಸೆ ದೊರೆಯುತ್ತಾರೆ ಬದುಕುವ ಹಾಗೂ ಗುಣಮುಖವಾಗುವ ಸಾಧ್ಯತೆ ಹೆಚ್ಚು ತಡವಾದಷ್ಟು ವ್ಯಕ್ತಿ ಒಂದು ವೇಳೆ ಬದುಕಿದರೂ ಗುಣಮುಖರಾಗುವುದು ಕಷ್ಟ ಸ್ಟ್ರೋಕ್ ಗೆ ಕಾರಣಗಳು ಅಪಧಮನಿ ಬ್ಲಾಕ್ ಆಗುವುದಿಲ್ಲ ರಕ್ತನಾಳಗಳು ಒಡೆದು ರಕ್ತ ಸೋರಿಕೆಯಾಗುವುದು ಇದು ಸಾಮಾನ್ಯವಾಗಿ ಕಂಡುಬರುವ ಸ್ಟ್ರೋಕ್ ಆಗಿದೆ ಈ ರೀತಿ ಉಂಟಾದಾಗ ರಕ್ತ ಸಂಚಾರ ಕಡಿಮೆಯಾಗುತ್ತದೆ ಈ ರೀತಿ ಉಂಟಾದಾಗ ಮೆದುಳಿಗೆ ರಕ್ತ ಸಂಚಾರ ಆಗುವುದಿಲ್ಲ.
ಹೇ ಮೊರಾಜಿಕ್ ಸ್ಟ್ರೋಕ್ ಈ ಕಾರಣಗಳಿಂದ ಉಂಟಾಗುತ್ತದೆ ನಿಯಂತ್ರಣಕ್ಕೆ ಬಾರದ ಅತ್ಯಧಿಕ ರಕ್ತದೊತ್ತಡ ರಕ್ತ ತೆಳುವಾಗುವ ಔಷಧಿ ಅತ್ಯಧಿಕ ಸೇವಿಸುವುದು ದುರ್ಬಲ ರಕ್ತನಾಳಗಳು. ವ್ಯಕ್ತಿಯ ದೃಷ್ಟಿ ಮಸುಕಾಗುತ್ತಿದೆ ಎಂದು ದೂರಬಹುದು. ಈ ಹಂತದಲ್ಲಿ ಅವರು ಅದನ್ನು ಬಿಸಿಲಿನಲ್ಲಿ ಹೆಚ್ಚು ಅಡ್ಡಾಡುವುದರಿಂದ ಅಥವಾ ದಿನದಲ್ಲಿ ಸಾಕಷ್ಟು ನೀರು ಇಲ್ಲದಿರುವುದು ಯಾವುದಾದರೂ ಕಾರಣದಿಂದ ಆಗಿರಬಹುದು ಎಂದು ಹೇಳುತ್ತಾರೆ. ನಿಮಗೆ ಹೀಗಾದಾಗ ತುಂಬಾ ಎಚ್ಚರಿಕೆಯಿಂದ ಗಮನಿಸುವ ಸಮಯ ಇದು.
ಪಾರ್ಶ್ವವಾಯುವಿಗೆ ಒಳಗಾಗುವ ವ್ಯಕ್ತಿಯ ಮುಖದ ಅರ್ಧದಷ್ಟು ಭಾಗ ಜೋತು ಬಿದ್ದಂತೆ ಕಾಣುತ್ತದೆ. ಅವರು ಮಾತನಾಡುವಾಗ, ಮುಖದ ಒಂದು ಭಾಗವು ಯಾವುದೇ ಭಾವನೆ ತೋರಿಸುತ್ತಿಲ್ಲ ಎಂದು ಕಾಣುತ್ತದೆ. ಇನ್ನೊಂದು ಭಾಗವು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ತಿರುಗಿಸಲು ಸಾಧ್ಯವಾಗುತ್ತದೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಯು ಮಾತನಾಡಲು ಸಮಸ್ಯೆ ಆಗುತ್ತದೆ.