ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಹೆಚ್ಚ್ಚಿನ ದೇಗುಲಗಳಲ್ಲಿ ದೇವಸ್ಥಾನದ ಗರ್ಭ ಗುಡಿಗೆ ಒಳಗೆ ಹೋಗಲು ಸಾಮಾನ್ಯ ಜನರಿಗೆ ಪ್ರವೇಶ ಇರೋದಿಲ್ಲ. ಆದರೆ ಈ ದೇಗುಲದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಯಾರು ಬೇಕಾದರೂ ದೇವರ ಗರ್ಭಗುಡಿಯೊಳಗೆ ಪ್ರವೇಶಿಸಿ ದೇವರ ದರ್ಶನವನ್ನು ಪಡೆಯಬಹುದು. ಬನ್ನಿ ಹಾಗಾದರೆ ಆ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಂಡು ಬರೋಣ. ರಾವಣಕಿ ಎಂಬ ಹೆಸರಿನಿಂದ ಕರೆಯುವ ಊರಿನಲ್ಲಿ ಆಂಜನೇಯ ಸ್ವಾಮಿ ದೇವಾಲಯ ಇದ್ದು, ಈ ದೇವಾಲಯವು ಗರುಡ ಗಂಬ, ವಿಶಾಲವಾದ ಪ್ರಾಂಗಣ, ಪುಟ್ಟದಾದ ಗರ್ಭಗೃಹ ವನ್ನಾ ಒಳಗೊಂಡಿದೆ. ಈ ಕ್ಷೇತ್ರದ ವಿಶೇಷತೆ ಎಂದರೆ ಯಾವುದೇ ಜಾತಿ ಮತ ಭೇದವಿಲ್ಲದೆ ಯಾರು ಬೇಕಾದರೂ ದೇವರ ಗರ್ಭಗುಡಿಯೊಳಗೆ ಪ್ರವೇಶಿಸಿ ಅತ್ಯಂತ ಹತ್ತಿರದಿಂದ ದೇವರ ದರ್ಶನ ಪಡೆಯಬಹುದಾಗಿದೆ. ಕಪ್ಪು ವರ್ಣದ ಶಿಲೆಯಲ್ಲಿ ಕೆತ್ತಿರುವ ದೇವರ ವಿಗ್ರಹವೂ ಸುಮಾರು 5 ಅಡಿ ಎತ್ತರವಿದ್ದು, ದೇವನು ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ರಾವಣಕಿಯ ವೀರಣ್ಣ, ವೀರ ಪುರದ ಈರಣ್ಣ ಎಂದೆಲ್ಲ ಖ್ಯಾತವಾದ ಇಲ್ಲಿನ ಆಂಜನೇಯ ಸ್ವಾಮಿ ಬಳಿ ಬಂದು ಏನನ್ನೇ ಭಕ್ತಿಯಿಂದ ಬೇಡಿಕೊಂಡರೂ ಆ ದೇವ ಇಲ್ಲ ಎನ್ನದೇ ಭಕ್ತರ ಮನೋಭಿಲಾಷೆಗಳನ್ನ ಇಡೆರಿಸುತ್ತನೆ ಎಂದು ಹೇಳಲಾಗುತ್ತದೆ.
ಸಂತಾನ ಸಮಸ್ಯೆ, ವ್ಯವಹಾರಿಕ ಸಮಸ್ಯೆ, ವಿಧ್ಯಾಭ್ಯಾಸ ಸಮಸ್ಯೆ, ಆರ್ಥಿಕ ಸಮಸ್ಯೆ, ಜಮೀನಿನ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ ಹೀಗೆ ಯಾವುದೇ ಸಮಸ್ಯೆಗಳು ಇದ್ದರೂ ಇಲ್ಲಿಗೆ ಬಂದು ದೇವರಿಗೆ ಹರಕೆಯನ್ನು ಹೊತ್ತುಕೊಂಡರೆ ಸಮಸ್ಯೆಗಳು ಎಲ್ಲಾ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಭಕ್ತರು ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಸಿದ್ಧಿ ಆಗುತ್ತವೋ ಇಲ್ಲ ಎಂದು ಪತ್ರೆ, ಪ್ರಸಾದವನ್ನು ಕೇಳಿ ಉತ್ತರವನ್ನು ಪಡೆಯಬಹುದು. ದೇವರ ಬಲಗಡೆ ಇಂದ ಪತ್ರೆ ಬಿದ್ದರೆ ಕಾರ್ಯ ಸಿದ್ಧಿ ಆಗುತ್ತೆ ಎಂದು ಎಡಗಡೆ ಇಂದ ಪತ್ರೆ ಬಿದ್ರೆ ಕಾರ್ಯ ಸಿದ್ಧಿ ಆಗೋದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲದೆ ದೇಗುಲದ ಹೊರಗಡೆ ಇಟ್ಟಿರೋ ದೇವರ ಪಾದರಕ್ಷೆಯನ್ನು ಮೈಗೆ ಬಡಿದುಕೊಳ್ಳುವುದರಿಂದ ಆಲಸ್ಯ, ರೋಗಗಳು ದೂರವಾಗಿ ಸಕಲವೂ ಶುಭ ಆಗುತ್ತೆ ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಇಲ್ಲಿ ಆಂಜನೇಯ ಸ್ವಾಮಿಯ ಜೊತೆಗೆ ಈಶ್ವರ, ಗಣಪತಿ ದೇವರ ದೇವಸ್ಥಾನ ಇವೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ರಾಮನವಮಿಯಾಂದು ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಜಾತ್ರೆ ಸಮಯದಲ್ಲಿ ಕಳಸದ ಮೆರವಣಿಗೆ, ಉತ್ಸಾಹ ಮೆರವಣಿಗೆ, ಅಗ್ನಿ ಕುಂಡೋತ್ಸವ ವನ್ನಾ ನಡೆಸಲಾಗುತ್ತದೆ. ಈ ಸಮಯದಲ್ಲಿ ಸಾವಿರಾರು ಮಂದಿ ಬಂದು ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
ಇನ್ನೂ ಕಾರ್ತಿಕ ಮಾಸ, ಶನಿವಾರ, ಅಮಾವಾಸ್ಯೆಗಳಂದೂ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಪ್ರತಿ ಅಮಾವಾಸ್ಯೆಗು ಇಲ್ಲಿಗೆ ಬರುವ ಭಕ್ತರಿಗೆ ಬೆಳಿಗ್ಗೆ 11.30 ರಿಂದ ಮಧ್ಯಾನ 2 ಗಂಟೆ ವರೆಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಏಳು ಮನೆತನದವರು ಪೂಜೆ ಮಾಡ್ತಾ ಇರುವ ದೇಗುಲವು ಸಂಪೂರ್ಣವಾಗಿ ಭಕ್ತರಿಂದಲೇ ನಡೆಯುತ್ತಿದ್ದು, ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯನ್ನು ಬೆಳಿಗ್ಗೆ 6 ಗಂಟೆ ಇಂದ ಸಂಜೆ 6 ಗಂಟೆ ವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಭಿಷೇಕ ಸೇವೆ, ಚಟ್ಟು ಕಟ್ಟಿಸುವ ಪೂಜೆ, ಹಣ್ಣು ಕಾಯಿ ಸೇವೆ ಇನ್ನೂ ಮುಂತಾದ ಪೂಜೆಗಳನ್ನು ಮಾಡಿಸಬಹುದಾಗಿದೆ. ದೇಗುಲದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7353831335 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಯಲಬುರ್ಗಾ, ಮಂಗಳೂರು, ಕುಕನೂರು, ಹಿರೇ ಬೀಡನಾಳ , ಚಿಕ್ಕ ಮ್ಯಾಗೇರಿ, ಚಿಕ್ಕ ಬಿರೋರು, ಮುತ್ತಾಲ, ಕುಡಗುಂಟಿ, ಕುಷ್ಟಗಿ ಹಾಗೂ ಕೊಪ್ಪಳ ತಾಲೂಕಿನ ಭಕ್ತರು ಭಕ್ತಿಯಿಂದ ಪೂಜಿಸುವ ರ್ಯಾವಾಂಕಿಯ ಆಂಜನೇಯ ಸ್ವಾಮಿ ದೇಗುಲವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ರಾವಣಕಿ ಎಂಬ ಗ್ರಾಮದಲ್ಲಿದೆ. ಈ ಪುಣ್ಯ ಕ್ಷೇತ್ರವೂ ಕೊಪ್ಪಳದಿಂದ 34 ಕಿಮೀ, ಕೋಕನೂರಿನಿಂದ 25 ಕಿಮೀ, ಯಲಬುರ್ಗಾ ದಿಂದಾ 27 ಕಿಮೀ, ದೂರದಲ್ಲಿದೆ. ಕೊಪ್ಪಳ ವೂ ಉತ್ತಮ ರಸ್ತೆ ಹಾಗೂ ರೈಲ್ವೇ ನಿಲ್ದಾಣದ ಸಂಪರ್ಕ ಹೊಂದಿದ್ದು, ಕೊಪ್ಪಳದಿಂದ ರಾವಣಕಿಗೆ ತಲುಪಲು ಸರ್ಕಾರಿ ಬಸ್ ಸೌಲಭ್ಯ ಕೂಡ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿ ಪಾವನಾರಾಗಿ. ಶುಭದಿನ.