ಈ ಹತ್ತು ವರ್ಷಗಲ್ಲಿ ಮೋದಿಯವರು ಪ್ರದಾನ ಮಂತ್ರಿ ಆದಮೇಲೆ ಹಲವು ರೀತಿಯಾದ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅದರಲ್ಲಿ ಕೆಲವೊಂದು ಹೆಚ್ಚು ಜನಪ್ರಿಯತೆ ಕಂಡಿವೆ ಅಂತ ಹಲವು ಯೋಜನೆಗಳಲ್ಲಿ ಇದೀಗ ಮತ್ತೊಂದು ಹೊಸ ಯೋಜನೆಯನ್ನು ಉದ್ಘಾಟನೆ ಮಾಡಿದ್ದಾರೆ.
ಮೋದಿ ಕನಸಿನಂತೆ ಇಂದು ಸರ್ದಾರ್ ವಲ್ಲಬಾಯ್ ಪಟೇಲ್ ಜಯಂತಿಯ ದಿನವಾದ ಇಂದು ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಉದ್ಘಾಟನೆ ಮಾಡಿದ್ದಾರೆ.
ಸೀ ಪ್ಲೇನ್ ಅಂದರೆ ಸಾಗರ ವಿಮಾನ ಇದನ್ನು ಇಂದು ಅಹಮದಾಬಾದ್ ನ ಸಬರಮತಿ ರಿವರ್ಫ್ರಂಟ್ ಹಾಗು ನರ್ಮದಾ ಜಿಲ್ಲೆಯ ಕೆವಾಡಿಯದಲ್ಲಿರುವ ಏಕತಾ ಪ್ರತಿಮೆ ನಡುವೆ ಸಂಚರಿಸುತ್ತದೆ, ಇನ್ನು ಉದ್ಘಾಟನಾ ದಿನವಾದ ಇಂದು ಈ ಸಾಗರದ ವಿಮಾನದಲ್ಲಿ ಮೊದಲು ಪ್ರದಾನ ಮಂತ್ರಿ ಮೋದಿಯವರು ಏಕತಾ ಪ್ರತಿಮೆಯಿಂದ ಸಬರಮತಿ ಕಡೆ ಪ್ರಯಾಣ ಮಾಡಿದರು.
ಇನ್ನು ಈ ಸಾಗರದ ವಿಮಾನದಲ್ಲಿ ೧೨ ಜನ ಪ್ರಯಾಣಿಕರು ಒಂದೇ ಸಮಯದಲ್ಲಿ ಪ್ರಯಾಣ ಮಾಡಬಹುದು ಇದರ ನಿರ್ವಣೆಯನ್ನು ಸ್ಪೈಸ್ ಜೆಟ್ ಸಂಸ್ಥೆ ಮಾಡುತ್ತದೆ ಇನ್ನು ಈ ವಿಮಾನ ಮೊದಲಿಗೆ ನೀರಿನ ಮೇಲೆ ತೇಲುವ ವಿಮಾನ ನಂತರ ಗಾಳಿಯಲ್ಲಿ ಹಾರಾಡಲಿದೆ ಇದರ ಟಿಕೆಟ್ ದರವನ್ನು ೧೫೦೦ ರೂಪಾಯಿ ನಿಗದಿ ಮಾಡುವ ಸಾಧ್ಯತೆ ಇದೆ, ಈ ವಿಮಾನ ದಿನಕ್ಕೆ ನಾಲ್ಕು ಸಲ ಪ್ರಯಾಣ ಮಾಡುತ್ತದೆ.
ಇನ್ನು ಈ ಯೋಜನೆಯನ್ನು ಆ ಪ್ರದೇಶಕ್ಕೆ ಮಾತ್ರ ಸೀಮಿತ ಮಾಡದೆ ದೇಶದ ಹಲವು ಸಮುದ್ರದ ತೀರಾ ಪ್ರೆದೇಶಗಲ್ಲಿ ಅಂದರೆ ೧೮ ಕಡೆ ಈ ಯೋಜನೆಯನ್ನು ವಿಸ್ತರಿಸುವ ಯೋಜನೆಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಲಾಭವಾಗಲಿದೆ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.