ಹಸಿ ಅರಿಶಿನ ಕೊಂಬನ್ನು ಹಾಲಿಗೆ ಹಾಕಿ ಮುಚ್ಚಳ ಮುಚ್ಚದೆ ಸಣ್ಣ ಉರಿಯಲ್ಲಿ 15 ನಿಮಿಷ ಕುದಿಸಬೇಕು. ಬಳಿಕ ಅರಿಶಿನದ ತುಂಡನ್ನು ತೆಗೆಯಬೇಕು. ಈ ಹಾಲನ್ನು ತಣಿದ ಬಳಿಕ ಕುಡಿಯಬೇಕು. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು. ಅರಿಶಿನದಲ್ಲಿ ನಂಜು ನಿರೋಧಕ ಗುಣವಿದೆ.
ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಒಟ್ಟಿಗೆ ಸೇರಿಸಿ ಬಿಸಿ ಮಾಡಬೇಕು. ಬಿಸಿ ಎಣ್ಣೆಯನ್ನೇ ನೋವಿರುವ ಜಾಗಕ್ಕೆ ಹಚ್ಚಿಕೊಂಡು 10-15 ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡಬೇಕು.ಪುದೀನಾ ಎಣ್ಣೆಯನ್ನು ನೋವು ಇರುವ ಮಂಡಿಯ ಮೇಲೆ ಹಾಕಿ ಮಸಾಜ್ ಮಾಡಬೇಕು.
ನೋವು ಇರುವ ಮಂಡಿ ಮೇಲೆ ಮಂಜುಗಡ್ಡೆ ಇಡಬಹುದು. ಟವೆಲ್‌ನಲ್ಲಿ ಮಂಜುಗಡ್ಡೆ ತುಂಡುಗಳನ್ನು ಹಾಕಿ ಕಟ್ಟಬೇಕು. ಇದನ್ನು 10-20 ನಿಮಿಷ ಕಾಲ ಮಂಡಿ ಮೇಲೆ ಇಟ್ಟು ಒತ್ತಬೇಕು. ಇದರಿಂದ ಬಾಧಿತ ಜಾಗಕ್ಕೆ ರಕ್ತಸಂಚಾರ ಕಡಿಮೆಯಾಗಿ ಊತ ತಗ್ಗುವುದು.
ಕರಿಮೆಣಸಿನಲ್ಲಿ ಕಾಪ್ಸಿಯನ್ ಎನ್ನುವ ಅಂಶವಿದೆ. ಇದು ನೋವು ನಿವಾರಕವಾಗಿ ಕೆಲಸ ಮಾಡುವುದು. ಇದು ನೈಸರ್ಗಿಕ ನೋವು ಶಮನಕಾರಿ ಗುಣಗಳನ್ನು ಹೊಂದಿದೆ. ಅರ್ಧ ಕಪ್ ಬಿಸಿ ಆಲಿವ್ ಆಯಿಲ್‌ಗೆ ಎರಡು ಚಮಚ ಕರಿಮೆಣಸಿನ ಹುಡಿ ಹಾಕಿ ಪೇಸ್ಟ್ ಮಾಡಬೇಕು. ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ದಿನದಲ್ಲಿ ಎರಡು ಸಲ ಒಂದು ವಾರ ಕಾಲ ಹಚ್ಚಬೇಕು.
ಕರ್ಪೂರದ ಎಣ್ಣೆಯನ್ನು ಹಚ್ಚುವುದರಿಂದ ರಕ್ತಪರಿಚಲನೆ ಹೆಚ್ಚುತ್ತದೆ. ಸೆಳೆತ ಮತ್ತು ಒತ್ತಡವನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.