ಸಾಮಾನ್ಯವಾಗಿ ಮಧ್ಯ ವಯಸ್ಸು ದಾಟುತ್ತಿದ್ದಂತೆ ಎಲ್ಲರಲ್ಲೂ ಕಾಡುವ ಸಾಮಾನ್ಯ ಕಾಯಿಲೆ ಅಂದರೆ ಅದು ಮಂಡಿ ನೋಡು. ಮಂಡಿ ನೋವು ಬಂತಂದರೆ ಸಾಕು ಮಧ್ಯ ವಸ್ಸಾಯ್ತಾ ಅಂತಾ ಕಾಲೆಳೆಯೋವ್ರು ಹೆಚ್ಚು. ಸಾಮಾನ್ಯಾವ ಚಿಕನ್ ಗುನ್ಯದಂತಹ ಜ್ವರ ಬಂದರೂ ಕೂಡ ಈ ಮಂಡಿ ನೋವು ಕಾಣಿಸುತ್ತದೆ. ಸದ್ಯ ಈ ಮಂಡಿ ನೋವಿಗೆ ಸಾಕಷ್ಟು ಔಷಧಗಳಿವೆ. ಆದರೆ ಕೆಲವೊಂದು ಹಣ್ಣುಗಳನ್ನು ತಿನ್ನುವುದರಿಂದಲೂ ಮಂಡಿ ನೋವನ್ನು ತಡೆಯಬಹುದಾಗಿದೆ. ಇನ್ನು ಈ ವೇಳೆ ಕೊಂಚ ಡಯಟ್ ನಿಂದ ಇದ್ದರೆ ಮಂಡಿ ನೀವನ್ನು ಗುಣಪಡಿಸಬಹುದು.
ಪ್ರತಿನಿತ್ಯ ಅಡುಗೆಗೆ ಬಳಸುವ ಕೆಲವೊಂದು ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು ಮುಖ್ಯವಾದ ಪದಾರ್ಥ. ಈ ಬೆಳ್ಳುಳ್ಳಿ ತಿನ್ನುವುದರಿಂದ ಮಂಡಿ ನೋವನ್ನು ನಿವಾರಿಸಿಕೊಳ್ಳಬಹುದಾಗಿದೆ. ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಂಡಿ ನೋವನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತದೆ.
ಇನ್ನು ಪಾಲಕ್ ಸೊಪ್ಪು ಕೂಡ ಮಂಡಿ ನೋವಿಗೆ ಉತ್ತಮವಾದುದ್ದಾಗಿದೆ. ಈ ಪಾಲಕ್ ಸೊಪ್ಪನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಮಂಡಿ ನೋವು ಕಡಿಮೆಯಾಗುತ್ತದೆ. ದ್ರಾಕ್ಷಿ, ಕಿತ್ತಳೆ, ಕಿವಿ ಹಣ್ಣು ಇವುಗಳಲ್ಲಿ ವಿಟಮಿನ್ ಸಿ ಅಧಿಕವಿದೆ. ಹಾಗಾಗಿ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಿಟ್ರಸ್ ಹಣ್ಣುಗಳು ಪ್ರಯೋಜನಕಾರಿ.
ಇನ್ನು ಹಾಲು ಕೂಡ ಇಲ್ಲಿ ಪ್ರಮುಖ ಅಂಶವಾಗಿದೆ. ಮಂಡಿನೋವು ಇರುವವರು ಹಾಲಿಗೆ ಸ್ವಲ್ಪ ಕೇಸರಿ ಹಾಕಿ ಕುಡಿದರೆ ನೋವು ನಿವಾರಿಸಬಹುದಾಗಿದೆ. ಕೇಸರಿಯಲ್ಲಿ ಉರಿಊತ ಕಡಿಮೆ ಮಾಡುವ ಸಾಮರ್ಥ್ಯ ಇರುವುದರಿಂದ ಉತ್ತಮವಾದಂಥಹ ಅಂಶವಾಗಿದೆ.
ಇನ್ನು ಡ್ರೈಫ್ರೂಟ್ಸ್ ಕೂಡ ಮಂಡಿ ನೋವಿಗೆ ಉತ್ತಮವಾದಂತಹ ಮದ್ದುಗಳಾಗಿವೆ. ವಾಲ್‌ನಟ್, ಪಿಸ್ತಾ, ಬಾದಾಮಿ ಸೇವಿಸುವುದರಿಂದ ಮಂಡಿ ನೋವು ನಿವಾರಣೆ ಮಾಡಬಹುದು. ಇನ್ನು ಈ ಡ್ರೈ ಫ್ರೂಟ್ಸ್‌ಗಳಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ, ವಿಟಮಿನ್ ಇ, ಪ್ರೊಟಿನ್ ಇವುಗಳು ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅಲ್ಲದೆ ಡ್ರೈ ಫ್ರೂಟ್ಸ್‌ನಲ್ಲಿರುವ ಒಮೆಗಾ ೩ ಕೊಬ್ಬಿನಂಶ ಮಂಡಿನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.