ಮಂಡಿ ನೋವು ಬಂದರೆ ಸಾಕು ನಾವು ಸರಿಯಾಗಿ ನಡೆಯುವುದಕ್ಕೂ ಆಗುವುದಿಲ್ಲ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಅದರಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ನಿಂತುಕೊಂಡು ಮಾಡುವ ಕೆಲಸಗಳು ಅಧಿಕವಾಗಿರುತ್ತದೆ. ಹಾಗಾಗಿ ಮಂಡಿ ನೋವಿನ ಸಮಸ್ಯೆಯಿಂದ ನಾವು ಯಾವ ಬಗೆಯ ಕೆಲಸಗಳನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ. ಈ ರೀತಿ ಮಂಡಿನೋವು ಬರುವುದಕ್ಕೆ ಮುಖ್ಯ ಕಾರಣ ನಮ್ಮ ಮೂಳೆಗಳಲ್ಲಿ ಸವೆತ ಉಂಟಾಗಿರುತ್ತದೆ. ವಯಸ್ಸಾದಂತೆ ಕ್ಯಾಲ್ಸಿಯಂ ಕೊರತೆ ಉಂಟಾಗಿ ಈ ರೀತಿ ಮಂಡಿ ನೋವು ಕಾಣಿಸಿಕೊಳ್ಳುತ್ತದೆ ಹೆಚ್ಚಿನ ಸಮಯ ನಿಂತುಕೊಂಡು ಕೆಲಸ ಮಾಡಿದರೆ ನಮಗೆ ಮಂಡಿ ನೋವು ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಸಮಸ್ಯೆಯೂ ನಿಮಗೆ ಕಾಣಿಸಿಕೊಂಡರೆ ವೈದ್ಯರ ಬಳಿ ತೆರಳುವ ಬದಲು ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ಮನೆಮದ್ದನ್ನು ತಯಾರಿಸಿಕೊಳ್ಳಬಹುದು ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಈ ಒಂದು ಮನೆಮದ್ದಿಗೆ ಬೇಕಾಗಿರುವ ಪದಾರ್ಥಗಳು ಹರಳೆಣ್ಣೆ, ಬೆಳ್ಳುಳ್ಳಿ, ಚಕ್ಕೆ ಮತ್ತು ಮೆಂತೆ. ಈ ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದು ತಯಾರಿಸುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡು ಟೇಬಲ್ ಸ್ಪೂನ್ ಹರಳೆಣ್ಣೆಯನ್ನು ಹಾಕಿ ಹರಳೆಣ್ಣೆಯಲ್ಲಿ ಮಂಡ

ನೋವನ್ನು ಕಡಿಮೆ ಮಾಡುವಂತಹ ಅತ್ಯದ್ಭುತ ಔಷಧೀಯ ಗುಣವಿದೆ. ತದನಂತರ ಇದಕ್ಕೆ ಎರಡು ಚಕ್ಕೆಯನ್ನು ಹಾಕಿ ಚಕ್ಕೆಯಲ್ಲಿ ಹೇರಳವಾದ ಕ್ಯಾಲ್ಸಿಯಂ ಇರುತ್ತದೆ ಇದು ಮಂಡಿ ನೋವನ್ನು ಉಪಶಮನ ಮಾಡುತ್ತದೆ. ತದನಂತರ ನಾಲ್ಕು ಬೆಳುಳ್ಳಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಕಟ್ ಮಾಡಿ ಇದರಲ್ಲಿ ಆಂಟಿಬಯೋಟಿಕ್ ಗುಣಗಳು ಹೆಚ್ಚಾಗಿ ಇರುತ್ತದೆ ನೋವನ್ನು ಉಪಶಮನ ಮಾಡಲು ತುಂಬಾನೇ ಉಪಯುಕ್ತಕಾರಿ.

ಕೊನೆಯಲ್ಲಿ ಒಂದು ಟೇಬಲ್ ಸ್ಪೂನ್ ಮೆಂತೆಯನ್ನು ಹಾಕಿ ಈಗ ಇವೆಲ್ಲವನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು. ತಣ್ಣಗಾದ ನಂತರ ನೋವು ಇರುವ ಜಾಗಕ್ಕೆ ಈ ಎಣ್ಣೆಯನ್ನು ಹಚ್ಚಿ ರಾತ್ರಿಯ ಸಮಯ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಮಂಡಿ ನೋವು ಖಂಡಿತವಾಗಿಯೂ ಉಪಶಮನವಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *