ನಮಸ್ತೆ ಪ್ರಿಯ ಓದುಗರೇ, ನಿಮ್ಮ ಜೀವನದಲ್ಲಿ ಎಂತಹ ಕಷ್ಟಗಳು ಇದ್ದರೂ ಸಹ ಈ ದೇವಿಯ ಬಳಿ ಬಂದು ಬೇಡಿಕೊಂಡರೆ ಸಾಕು ಆ ದೇವಿ ನಿಮ್ಮ ಕನಸಿನಲ್ಲಿ ಬಂದು ಕಾಪಾಡುತ್ತಾಳೆ. ಪವಾಡ ದೇವಿಯ ಮಹಿಮೆ ನೇರವಾಗಿ ನೋಡಿ. ಈ ತಾಯಿಗೆ ಬಳೆ, ಕುಂಕಮ, ಅರಿಶಿನ ಮಡಿಲು ತುಂಬಿ ಹರಕೆ ತೀರಿಸುವ ವಾಡಿಕೆ ಇದೆ. ಶ್ರೀ ರಂಗ ಪಟ್ಟಣ ವು ಐತಿಹಾಸಿಕ ಹಿನ್ನೆಲೆ ಉಳ್ಳ ಸ್ಥಳ. ಇಲ್ಲಿ ತುಂಬಾ ಹಳೆಯ ಶಕ್ತಿಶಾಲಿ ದೇವಸ್ಥಾನಗಳು ಇರುವುದು ವಿಶೇಷ. ಕರ್ನಾಟಕದ ದ್ವೀಪ ಎಂದೇ ಖ್ಯಾತಿ ಪಡೆದ ಪರಮ ಪುಣ್ಯ ಸ್ಥಳ ಸಾಕ್ಷಾತ್ ಶ್ರೀ ರಂಗನಾಥ ನೆಲೆಸಿರುವ ಮಹಾಕ್ಷೇತ. ಇಂತಹ ಪುಣ್ಯ ಸ್ಥಳ ದಲ್ಲಿ ಕೇವಲ 3 ಕಿಮೀ ಅಂತರದಲ್ಲಿ ಕಾವೇರಿಯ ದಡದಲ್ಲಿ ಶ್ರೀ ಚಕ್ರ ಸಹಿತ ಮಾತೆ ಶ್ರೀ ಪಾರ್ವತಿ ದೇವಿಯು ನಿಮಿಷಾಂಬ ಹೆಸರಿನಿಂದ ಸಕಲ ಜನರ ಕಷ್ಟಗಳನ್ನು ತೀರಿಸುತ್ತಿದ್ದಾಳೆ. ಇಲ್ಲಿ ಬಂದು ಹರಕೆ ಹೊತ್ತರೆ ಸಾಕು ಫಲ ಎಂಬುದಲ್ಲ, ಕೇವಲ ಈ ತಾಯಿಯ ದರ್ಶನ ಪಡೆದರೆ ಸಾಕು ನಿಮಿಷ ಮಾತ್ರದಲ್ಲಿ ಕಳೆಯುತ್ತದೆ. ಇದಕ್ಕೆ ಸಾಕಷ್ಟು ಜೀವಂತ ಸಾಕ್ಷಿಗಳಿವೆ. ಕಂಕಣ ಭಾಗ್ಯ ಇಲ್ಲದವರಿಗೆ ಮದುವೆ ಆಗಿದೆ, ಸಂತಾನ, ಆರೋಗ್ಯ, ವ್ಯಾಪಾರ ವ್ಯವಹಾರ, ಆಸ್ತಿ ವಿಚಾರ, ಕೋರ್ಟ್ ಕಚೇರಿ ಯಾವುದೇ ವಿಷಯವಾಗಲಿ ಮಾತೆಗೆ ಬಂದು ನಮಸ್ಕರಿಸಿ ನಿಂಬೆ ಹಣ್ಣಿನ ದೀಪವನ್ನು ಹಚ್ಚಿ ಪೂಜೆ ಸಲ್ಲಿಸಿ ಹೋದರೆ ಖಂಡಿತವಾಗಿ ನಿಮ್ಮ ಆಸೆಗಳು ನೆರವೇರುತ್ತವೆ. ಇದಕ್ಕೆಲ್ಲಾ ಕಾರಣ ತಾಯಿಯು ಶ್ರೀಚಕ್ರ ಸಹಿತ ಪ್ರತಿಷ್ಠಾಪನೆ ಆಗಿರುವುದು. ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಪಾರ್ವತಿ ದೇವಿಯು ಶ್ರೀಚಕ್ರ ಸಹಿತ ನೆಲೆಸಿರುವುದು. ಅಂತಹ ಪುಣ್ಯ ಕ್ಷೇತ್ರ ನಮ್ಮ ನಿಮಿಷಾಂಬ ದೇವಾಲಯ.
ಯಾವುದೇ ಕಷ್ಟ ಇದ್ದರೂ ಈ ದೇವಾಲಯಕ್ಕೆ ಭೇಟಿ ನೀಡಿ. ಈ ದೇಗುಲದ ಪುರಾಣ ಹೇಳುವುದಾದರೆ ಶಿವನ ಆಜ್ಞೆಯಂತೆ ಯಾಗವನ್ನು ಮಾಡಲು ಮುಕ್ತ ಋಷಿಗಳು ಅದರ ತಯಾರಿಯಲ್ಲಿ ಇರುತ್ತಾರೆ ಆಗ ಇಬ್ಬರು ರಕ್ಕಸರು ಅದನ್ನು ತಡೆಯಲು ರಾಕ್ಷಸರ ಸೇನೆಯನ್ನು ಕಳಿಸುತ್ತಾರೆ. ಅವರನ್ನು ಮುಖ್ತ ಋಷಿಗಳು ಸೋಲಿಸುತ್ತಾರೆ. ಆಗ ಆ ರಕ್ಕಸರೇ ನೇರವಾಗಿ ಬಂದು ಯಾಗ ತಡೆಯಲು ಮುಂದಾಗುತ್ತಾರೆ. ಆಗ ಮುಕ್ತ ಋಷಿಗಳು ಅವ್ರ ಮುಂದೆ ಸೋಲುತ್ತಾರೆ. ಯಾಕೆಂದರೆ ರಕ್ಕಸರು ಬ್ರಹ್ಮನಿಂದ ವರ ಪಡೆದಿರುತ್ತಾರೆ, ಮುಕ್ತ ಋಷಿಗಳು ಪಾರ್ವತಿಯನ್ನು ಪ್ರಾರ್ಥನೆ ಮಾಡುತ್ತಾರೆ. ಆಗ ದೇವಿಯು ಯಜ್ಞ ಕುಂಡ ದಿಂದ ಬಂದು ರಕ್ಕಸರನ್ನು ಸಾಯಿಸುತ್ತಾಳೆ. ನಿಮಿಷದಲ್ಲಿ ಆಗ ಋಷಿಯು ನಿಮಿಷಾಂಬ ಎಂದು ಕರೆಯುತ್ತಾರೆ. ಅಂದಿನಿಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಶ್ರೀಚಕ್ರ ಸಹಿತ ನೆಲೆಸಿದಳು ಎನ್ನಲಾಗುತ್ತದೆ. ದೇವಿಗೆ ನಿಂಬೆ ಹಣ್ಣಿನ ದೀಪ ಹಚ್ಚುವ ಹರಕೆ ಹೊತ್ತರೆ ಜೀವನದ ಎಲ್ಲಾ ಕಷ್ಟಗಳು ನೀಗುತ್ತದೆ. ದೇವಿಯು ಕನಸಲ್ಲಿ ಕಾಣುವುದು ಖಚಿತ. ನಂಬಿ ಬಂದವರನ್ನು ರಕ್ಷಿಸುತ್ತ ನೆಲೆಯೂರಿದ್ದಾರೆ ನಿಮಿಷಾಂಬ. ತ್ರಿಶೂಲ, ಡಮರು ಅವಯ ವರದಗಳಿಂದ ಶೋಭಿಸುವ ಶ್ರೀ ನಿಮಿಷಾಂಬ ದೇವಿಯು ಭಕ್ತ ಜನರ ಕಲ್ಪತರು. ಮುಗುಳು ನಗೆ ಸೂಸುವ ಮುಗ್ಧ ಮುದ್ರಸನದಲ್ಲಿ ಕುಳಿತಿರುವ ನಿಮಿಷಾಂಬ ಶ್ರೀಚಕ್ರಾಂಗಿತೆ. ಎದುರಿನಲ್ಲಿರುವ ಚಕ್ರವು ಅಷ್ಟೇ ಪುರಾತನವಾಗಿರುವುದು ವಿಶೇಷ. ಭೋಪ್ರಸ್ಥಾರ ಕೃಷ್ಣ ಶಿಲೆಯಲ್ಲಿ ಕೆತ್ತಲ್ಪಟ್ಟ ಶ್ರೀಚಕ್ರವು ಏಕಮೇವ ಅದ್ವಿತೀಯ ಎನಿಸಿದೆ.
ಶ್ರೀಚಕ್ರದ ಎಲ್ಲೆಡೆ ದಳಗಳಲ್ಲಿ, ತ್ರಿಕೋನಗಳಲ್ಲಿ ಭವನಗಳಲ್ಲಿ ಇರುವ ಬೀಜಕ್ಷರಗಳು ಜಗದಾಂಬ ಶ್ರೀ ನಿಮಿಷಾಂಬ ದೇವಿಯು ಪ್ರಸನ್ನತೆ ಕಾರಣ. ಇಲ್ಲಿಯ ದೇವಿಯ ಮೂಲ ಮಂತ್ರಗಳನ್ನು ಹೊಂದಿರುವ ಶ್ರೀ ಚಕ್ರ ಅತಿ ವಿರಳ ಎನ್ನಲಾಗಿದೆ. ಕೇವಲ ದರ್ಶನದಿಂದ ಲೇ ಭಕ್ತರ ಇಷ್ಟಾರ್ಥ ಇದೀರುವುದಲ್ಲದೇ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ. ಶ್ರೀ ನಿಮಿಷಾಂಬ ದೇವಿಯಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಂದರೆ ಮದುವೆಯಾಗದ ವರಿಗೆ ಕಲ್ಯಾಣ ಭಾಗ್ಯವೂ, ಮಕ್ಕಳಗದವರಿಗೆ ಸಂತಾನ ಭಾಗ್ಯ, ಆರ್ಥಿಕ ತೊಂದರೆಯಲ್ಲಿ ಇರುವವರಿಗೆ ಧನ ಧಾನ್ಯ, ಅನಾರೋಗ್ಯದಿಂದ ಕೂಡಿರುವವರಿಗೆ ಆರೋಗ್ಯ ಭಾಗ್ಯವೂ ಕೂಡಿ ಬರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯದಾನವೂ ಕೂಡಿ ಬರುತ್ತದೆ. ಇಲ್ಲಿನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೈವ ಸ್ವರೂಪಿಣಿ ಶ್ರೀ ನಿಮಿಷಾಂಬ ದೇವಿ ಪ್ರಸಿದ್ಧಿ ಆಗಿದೆ. ಈ ದೇವಸ್ಥಾನ ಇರುವ ಸ್ಥಳ ನಿಮಿಷಾಂಬ ದೇವಾಲಯ, ಶ್ರೀ ರಂಗಪಟ್ಟಣ, ಮಂಡ್ಯ ಜಿಲ್ಲೆ. ಇಲ್ಲಿ ಮಹಾ ನೈವೇದ್ಯ ವು ಮಧ್ಯಾನ 12 ಗಂಟೆಯ ನಂತರ ನಡೆಯುತ್ತದೆ. ಈ ದೇವಿಯ ದೇವಸ್ಥಾನಕ್ಕೆ ಮಂಗಳವಾರ ಅಥವಾ ಶುಕ್ರವಾರ ಬಂದರೆ ವಿಶೇಷ ಫಲ. ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.