ಸಾಮಾನ್ಯವಾಗಿ ಅಂಡಾಣು ಬಿಡುಗಡೆಯಾದ ದಿನ, ಹಿಂದಿನ ದಿನ ಅಥವಾ ಮರುದಿನ ಮಿಲನವಾದರೆ (ಯಾವುದೇ ಗರ್ಭನಿರೋಧಕ ಸಾಧನಗಳಿಲ್ಲದೆ) ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು ಆದರೆ ಬಹುತೇಕ ಮಹಿಳೆಯರು ಗರ್ಭಿಣಿಯಾಗಲು ಯತ್ನಿಸುವಾಗ ಫಲವಂತಿಕೆಯ ದಿನವನ್ನು ತಪ್ಪಾಗಿ ಲೆಕ್ಕ ಹಾಕುವ ಸಾಧ್ಯತೆ ಇರುತ್ತದೆ, ಅಂಡಾಣು ಬಿಡುಗಡೆಯಾಗುವ ಸಾಧ್ಯತೆ ಇರುವ ದಿನಗಳಲ್ಲಿ ನಿರಂತರವಾಗಿ ಮಿಲನದಲ್ಲಿ ತೊಡಗಿಸಿಕೊಂಡರೆ ಹೆಚ್ಚು ಉಪಯುಕ್ತವಾದೀತು.
ಸತತವಾಗಿ ಎಂದರೆ ಎಷ್ಟು ಸಲ: ಸಾಮಾನ್ಯವಾದ ನಂಬಿಕೆಯೆಂದರೆ ಕಡಿಮೆಯೇ ಲೇಸು ಎಂದಾದರೆ, ಹೆಚ್ಚು ಉತ್ತಮ ಎನ್ನಬಹುದು, ಆದರೆ ಸಂಭೋಗದ ವಿಷಯದಲ್ಲಿ ಇವೆರಡೂ ವ್ಯತಿರಿಕ್ತ ಪರಿಣಾಮವೇ ಬೀರುತ್ತವೆ, ವಾರಗಟ್ಟಲೆ ಸಂಭೋಗದಲ್ಲಿ ತೊಡಗದೆ ಫಲವಂತಿಕೆಯ ದಿನಗಳಂದು ತೊಡಗಿಸಿಕೊಂಡರೆ ನಿಮ್ಮಲ್ಲಿಯ ವೀರ್ಯಾಣುಗಳಿಗೆ ವಯಸ್ಸಾಗಿರುತ್ತದೆ, ಅವುಗಳ ಗುಣಮಟ್ಟದ ಬಗ್ಗೆ ಖಚಿತವಾಗಿ ಹೇಳಲಾಗದು ಆದರೆ ಸತತವೆಂದಾಕ್ಷಣ ಸಂಭೋಗಗಳ ಸಂಖ್ಯೆ ಹೆಚ್ಚಾಗಕೂಡದು ಇದರಿಂದ ವೀರ್ಯಾಣುವಿನ ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತದೆ ಸಾಕಷ್ಟು ಸಂಖ್ಯೆಯಲ್ಲಿ ವಿರ್ಯಾಣುಗಳು ಹುಟ್ಟುವುದಿಲ್ಲ.
ಪ್ರತಿ ಸಂಭೋಗದಲ್ಲಿಯೂ ವೀರ್ಯ ಸ್ಖಲನವಾಗುವುದೇ ಹೊರತು ವೀರ್ಯಾಣುಗಳ ಪ್ರಮಾಣ ಅದರಲ್ಲಿ ಕಡಿಮೆಯಾಗಿರುತ್ತದೆ ಹಾಗಾದರೆ ಯಾವುದು ಸರಿ? ಎಷ್ಟು ಸಲ ಮಿಲನವಾಗಬೇಕು? ಈ ಮಾತಿಗೆ ತಜ್ಞರು ಎಲ್ಲ ವಾದ, ಚರ್ಚೆಗಳನ್ನು ಪರಾಮರ್ಶಿಸಿ ಬಂದ ತೀರ್ಮಾನವೆಂದರೆ, ಮಗು ಬೇಕೆನಿಸಿದಾಗ ಪ್ರತಿದಿನವೂ ಸಾಧ್ಯವಿದ್ದಲ್ಲಿ ಒಂದು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು, ಕೊನೆಯ ಪಕ್ಷ ದಿನ ಬಿಟ್ಟು ದಿನವಾದರೂ ಒಂದು ಸಲ ತೊಡಗಿಸಿಕೊಂಡರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ.
ಯಾವ ಭಂಗಿ ಎಷ್ಟು ಸಹಾಯಕ: ಈ ಪ್ರಶ್ನೆಯನ್ನು ಸಾಮಾನ್ಯವಾಗಿ ಸಮಾಲೋಚನೆಗೆ ಬರುವ ದಂಪತಿಗಳೆಲ್ಲ ಕೇಳುತ್ತಾರೆ, ಮಗು ಮಾಡಿಕೊಳ್ಳಲು ಯಾರೂ ಕಾಮಸೂತ್ರವನ್ನು ಓದಿರಲೇಬೇಕಿಲ್ಲ, ತಿಳಿದರಲೇಬೇಕೆಂದೂ ಏನಿಲ್ಲ, ವಿಶ್ವದಲ್ಲಿ ಈಗಲೂ ಯಾವ ಭಂಗಿ ಸೂಕ್ತ ಎನ್ನುವುದನ್ನು ನಿರ್ಣಯಿಸಲು ಆಗಿಲ್ಲ, ಸಾಮಾನ್ಯವಾಗಿ ಪುರುಷ ಮೇಲೆ ಬರುವ ಮಿಶನರಿ ಭಂಗಿಯನ್ನು ಜನ ನೆಚ್ಚಿಕೊಂಡಿರುತ್ತಾರೆ, ಸ್ತ್ರೀಯರ ಜನನಾಂಗವನ್ನು ವೀರ್ಯಾಣು ನೇರವಾಗಿ ಪ್ರವೇಶಿಸುವುದರಿಂದ ಅನುಕೂಲ ಹೆಚ್ಚು ಎನ್ನುವುದು ಅಂಥವರ ವಾದ, ಮತ್ತೂ ಕೆಲವು ಮಹಿಳೆಯರು ಹೆಣ್ಣುಮಕ್ಕಳು ಮೇಲೆ ಬರುವ ಭಂಗಿಯಲ್ಲಿದ್ದರೆ ಗರ್ಭಿಣಿಯಾಗುವುದನ್ನು ತಪ್ಪಿಸಬಹುದು ಎಂದು ಕೊಂಡಿರುತ್ತಾರೆ.
ವೀರ್ಯಾಣುವಿನ ಚಲನೆಯ ವಿರುದ್ಧ ದಿಕ್ಕಿನಲ್ಲಿ ಗುರುತ್ವಾಕರ್ಷಣೆಯ ಬಲ ಇರುವುದರಿಂದ ವೀರ್ಯಾಣುಗಳು ತಮ್ಮ ಗಮ್ಯವನ್ನು ಸೇರುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿದೆ, ಆದರೆ ಒಮ್ಮೆ ವೀರ್ಯಾಣು ಸ್ಖಲನದೊಂದಿಗೆ ಚಿಮ್ಮಿದರೆ ಸಾಕು, ಅವು ಡಿಂಭನಾಳ ಸೇರಿ ಅತಿ ವೇಗವಾಗಿ ಈಜಿ ಸೆಕೆಂಡಿನ ಕೆಲ ಅಂಶದಷ್ಟು ಅವಧಿಯಲ್ಲಿಯೇ ತಮ್ಮ ಗಮ್ಯವನ್ನು ಸೇರಿಬಿಡುತ್ತವೆ, ನಂತರ ಏನೇ ಹೊರಬಂದರು ಅದರಲ್ಲಿ ಚಲಿಸಲು ವಿಫಲವಾದ ವೀರ್ಯಾಣು ಹಾಗೂ ವೀರ್ಯ ಮಾತ್ರವಿರುತ್ತದೆ, ಈ ಪ್ರಶ್ನೆಗೆ ಯಾವುದೇ ಬಗೆಯ ಸ್ಪಷ್ಟ ಉತ್ತರ ಸಿಗದು, ಅನುಕೂಲಕರವಾದ ಆರಾಮದಾಯಕವಾದ ಸುಖದ ಪರಮಸ್ಥಿತಿ ತಲುಪಬಹುದಾದ ಭಂಗಿಯೇ ಉತ್ತಮವೆಂದು ಹೇಳಬಹುದು.
ಮಿಲನದ ನಂತರ ಮುಂದೇನು: ಮಿಲನದ ನಂತರ ಮುಂದೇನು ಮಾಡಬೇಕು ಎನ್ನುವುದೂ ಬಹುತೇಕರ ಪ್ರಶ್ನೆ, ಪರಿಣತರ ಪ್ರಕಾರ ಸಂಭೋಗದ ನಂತರ ಹೆಣ್ಣುಮಕ್ಕಳು ಕನಿಷ್ಠ ಪಕ್ಷ 20 ನಿಮಿಷಗಳಾದರೂ ಹಾಸಿಗೆಯಲ್ಲಿಯೇ ಮಲಗಿರುವುದು ಒಳಿತು, ಒಂದು ಗಂಟೆ ಇದ್ದರಂತೂ ಇನ್ನೂ ಪರಿಣಾಮಕಾರಿ, ವೀರ್ಯಾಣುವು ಜನನಾಂಗದ ಮೂಲಕ ಗರ್ಭಕೋಶವನ್ನು ಸೇರಲು ಅನುಕೂಲವಾಗುವಂತೆ ಬೇಕಿದ್ದರೆ ಮೊಣಕಾಲನ್ನು ಮೇಲೆತ್ತಿರುವ ಭಂಗಿಯಲ್ಲಿ ಮಲಗಬಹುದು, ಇಲ್ಲವೇ ಗೋಡೆಗೆ ಕಾಲು ಚಾಚಿ, ಮೇಲೆತ್ತಿ, ಅಂಗಾಲುಗಳನ್ನು ಆನಿಸಿಕೊಂಡು ಪೃಷ್ಠದ ಕೆಳಗೆ ದಿಂಬನ್ನಿರಿಸಿದ ಭಂಗಿಯಲ್ಲಿಯೂ ಮಲಗಬಹುದು.
ಮೊಣಕಾಲುಗಳನ್ನು ಹೊಟ್ಟೆಗಾನಿಸಿಕೊಂಡು, ಸುರುಳಿ ಸುತ್ತಿಕೊಂಡಂತೆ ಭ್ರೂಣದ ಭಂಗಿಯಲ್ಲಿ ಮಲಗಬಹುದೇ? ಇಲ್ಲ ಈ ಭಂಗಿ ಅಂಥ ಪರಿಣಾಮಕಾರಿಯಾದ ಫಲಿತಾಂಶವನ್ನೇನೂ ನೀಡದು, ಇದರಿಂದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆಯೇ ಹೊರತು ಗರ್ಭಿಣಿಯಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ, ಈ ಮಿಲನದ ನಂತರ ಇನ್ನೊಂದು ಗಮನದಲ್ಲಿಡಲೇಬೇಕಾದ ಅಂಶವೆಂದರೆ ದೇಹದ ಉಷ್ಣತೆಯನ್ನು ಹೆಚ್ಚಿಸುವಂತ ದೇಹ ದಂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಾರದು, ಸುದೀರ್ಘ ನಡಿಗೆ ಅಥವಾ ಓಟ, ಬಾತ್ ಟಬ್ ಸ್ನಾನ, ಸೋನಾ ಸ್ನಾನ ಇಂಥವುಗಳನ್ನೆಲ್ಲ ತಡೆಯಬೇಕು.
ಆನಂದಕರವಾಗಿರಲಿ ಮಿಲನ: ಮಗುವಿಗಾಗಿಯೇ ಮಿಲನ ಎಂಬ ನಿರ್ಧಾರ ಬೇಡ, ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಈ ಅಂಶವನ್ನು ಆದಷ್ಟೂ ನೇಪಥ್ಯಕ್ಕೆ ಸರಿಸಿ ಆನಂದಕ್ಕಾಗಿ, ಆನಂದಕರವಾಗಿ ತೊಡಗಿಸಿಕೊಳ್ಳಬೇಕು ಇಲ್ಲದಿದ್ದರೆ ಈ ಸಲವಾದರೂ ಭ್ರೂಣ ಕಟ್ಟುವುದೇ ಎಂಬ ಒತ್ತಡ ಮರೆಯಲ್ಲಿದ್ದರೂ ನಿಮ್ಮ ಮಿಲನವನ್ನು ಸಂಪೂರ್ಣಗೊಳಿಸಲು ಬಿಡದು, ಅಲ್ಲದೆ ಮುನ್ನಲಿವಿಗಾಗಿ ಯಾವುದೇ ಸಾಧನಗಳನ್ನು ಬಳಸುವುದು ಬೇಡ ಕೆಲವೊಮ್ಮೆ ಜಾರಕಗಳನ್ನು ಬಳಸುತ್ತಾರೆ.
ಅಂಥವರು ವೀರ್ಯಾಣು ಸ್ನೇಹಿಯಾಗಿರುವ ಜಾರಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು ಯಾವುದೇ ಬೇಡಿಕೆ, ನಿರೀಕ್ಷೆಗಳಿಲ್ಲದೆ, ಸಂಗಾತಿಗಳಿಬ್ಬರೂ ಒಬ್ಬರನ್ನೊಬ್ಬರು ಸ್ವೀಕರಿಸುವ ಸುಖಕರ ಆಟದಲ್ಲಿ ತೊಡಗಿಸುವಂತೆ ಮುನ್ನಲಿವಿನಲ್ಲಿ ಪಾಲ್ಗೊಳ್ಳಿ, ಇದರಿಂದ ನೈಸರ್ಗಿಕ ಜಾರಕವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಸಂಭೋಗ ಕ್ರಿಯೆ ಸರಳಗೊಳಿಸುತ್ತವೆ, ಸುಖಕರಗೊಳಿಸುತ್ತವೆ ಎನ್ನುವುದು ನೆನಪಿರಲಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.