ಬಿಸಿಲು-ಮಳೆ ಅಂತ ನೋಡದೆ ಕತ್ತೆ ನೋಡಿದಂಗೆ ದುಡಿದರೂ ಕೂಡ ಕೈಗೆ ಸಿಗುವುದು ತುಂಬಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ದುಬಾರಿ ಜಗತ್ತಿನಲ್ಲಿ ಜೀವನ ಮಾಡುವುದು ತುಂಬಾನೇ ಕಷ್ಟ ವಾಗುತ್ತಿದೆ. ಇದೇ ಸಮಯದಲ್ಲಿ ಮತ್ತೆ ಕರೆಂಟ್ ಶಾಕ್ ಕೊಟ್ಟಿದ್ದೆ ಸರ್ಕಾರ . ಈಗ ಜೀವನ ನಡೆಸುವುದು ಹೇಗಪ್ಪಾ ಎಂದು ಯೋಚನೆ ಮಾಡುವಂತ ಸ್ಥಿತಿ ಬಂದಿದೆ. ಇನ್ನು ಬೆಲೆ ಏರಿಕೆ ಮಾತ್ರ ಬೆನ್ನಿಗೆ ಬಿದ್ದ ಬೇತಾಳ ತರ ಏರುತ್ತಲೇ ಇದೆ.ತರಕಾರಿ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದು ಹೈರಾಣಿಗಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಕೋವಿಡ್ ಬಿಕ್ಕಟ್ಟಿನ ನಡುವೆ ಗ್ರಾಹಕ ವಸ್ತುಗಳ ಬೆಲೆಗಳು ಗಗನಮುಖಿಯಾಗಿವೆ. ಈ ನಡುವೆಯೇ ವಿದ್ಯುತ್ ಕಂಪನಿಗಳು ಕೂಡ ಬೆಲೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಮೂಲಕ ಬೆಂಗಳೂರಿಗರಿಗೆ ಶಾಕ್ ನೀಡಲು ಮುಂದಾಗಿದೆ ಬೆಸ್ಕಾಂ.
ಹೌದು ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಾಗಲಿದೆ. ವಿದ್ಯುತ್ ದರದಲ್ಲಿ ಪ್ರತಿ ಯುನಿಟ್‌ಗೆ ಹೆಚ್ಚಿಸಲು ಬೆಸ್ಕಾಂ ಅಧಿಕಾರಿಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇತರ ಸಾಲಿಗೆ ಸೇರಿರುವುದು ಕರೆಂಟ್ ಶಾಕ್ ಅದು ‘ಪವರ್’ಫುಲ್ ಶಾಕ್.ಈಗ ವಿದ್ಯುತ್ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಹೊಸ ದರಗಳು ಜುಲೈ 1 ರಿಂದ ಅನ್ವಯವಾಗಲಿದೆ. ಈ ಮೂಲಕ ಜನರ ಜೇಬಿಗೆ ವಿದ್ಯುತ್ ದರ ಮತ್ತಷ್ಟು ಹೊರೆ ಆಗಲಿದೆ. ಜುಲೈ 1 ರಿಂದ ವಿದ್ಯುತ್ ದರ 19 ರೂ.ಗಳಿಂದ 31 ರೂ.ಗೆ ಏರಿಕೆಯಾಗಲಿದೆ. ಅಂದ್ರೆ ಪ್ರತಿ ತಿಂಗಳು 100 ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು 19 ರೂ.ಯಿಂದ 31 ರೂ. ಪಾವತಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈ ಸುಡ್ತಿದೆ. ಈ ಬೆನ್ನಲ್ಲೇ ಇದೀಗ ಸಾರ್ವಜನಿಕರಿಗೆ KERC ವಿದ್ಯುತ್ ಶಾಕ್ ನೀಡಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಈ ಮಧ್ಯೆ ದಿಢೀರ್ ವಿದ್ಯುತ್ ದರವೂ ಹೆಚ್ಚಳವಾದರೆ ಗತಿಯೇನು ಎಂಬ ಚಿಂತೆ ಕಾಡುತ್ತಿದೆ. ಏಕೆಂದರೆ ವಿದ್ಯುತ್ ದರ ಏರಿಕೆಯಾದರೆ ಅದು ಪರೋಕ್ಷವಾಗಿ ಅಗತ್ಯ ವಸ್ತುಗಳ ದರ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಆತಂಕ ಶುರುವಾಗಿದೆ. ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಈಗ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಲಿದೆ. ಈಗಾಗಲೇ ದೈನಂದಿನ ವಸ್ತುಗಳ ಬೆಲೆಗಳು ಮುಗಿಲು ಮುಟ್ಟುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಮೊನ್ನೆಯಷ್ಟೇ LPG ದರ ದುಬಾರಿಯಾಗಿತ್ತು. ಈ ನಡುವೆ ವಿದ್ಯುತ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಾದರೆ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ನಮಗೆ ತಿಳಿಸಿ.