ಮದುವೆ ಅನ್ನುವ ಮೂರಕ್ಷರದ ಬಂಧನದಲ್ಲಿ ಒಮ್ಮೆ ಸಿಲುಕಿದರೆ ಅದರಿಂದ ಹೊರಗೆ ಬರುವುದು ತುಂಬಾ ಕಠಿಣ .ಹೀಗಾಗಿ ಯಾವಾಗಲೂ ವಿವಾಹ ಆಗುವವರು ತಮ್ಮ ಜೀವನ ಸಂಗಾತಿಯ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಹಾಗಾಗಿ ನೀವು ಇಂತಹ ವ್ಯಕ್ತಿಯೊಂದಿಗೆ ಸಂಭಂದ ಬೆಳೆಸಬೇಕು ಎಂದಾಗಿದ್ದರೆ ಖಂಡಿತವಾಗಿಯೂ ಇದನ್ನೊಮ್ಮೆ ಓದಿ. ಮದುವೆಗೆ ಮೊದಲು ನೀವು ಆ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರೆ ಆಗ ನೀವು ಆತನಲ್ಲಿರುವಂತಹ ಕೆಲವೊಂದು ಅಭ್ಯಾಸಗಳ ಬಗ್ಗೆ ಖಂಡಿತವಾಗಿಯೂ ತಿಳಿದುಕೊಂಡಿರುವಿರಿ. ಆದರೆ ಕೆಲವು ಅಭ್ಯಾಸಗಳು ಮದುವೆ ಆದ ನಂತ್ರ ಸಂಬಂಧಕ್ಕೆ ಹಾನಿ ಉಂಟು ಮಾಡಬಹುದು .ಅದರ ಬಗ್ಗೆ ನೀವು ತಿಳಿಯಬೇಕು . ಈ 7 ಅಭ್ಯಾಸಗಳು ಇರುವಂತವರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಬಾರದು.
1.ಮಾತು ತಪ್ಪುವವರು : ಯಾರಿಗೆ ಆದರೂ ಮಾತು ಕೊಡುವುದು ತುಂಬಾ ಸುಲಭ. ಆದ್ರೆ ಅದನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಕಷ್ಟ. ಹೀಗಾಗಿ ಮಾತು ಕೊಡುವ ಮೊದಲು ತುಂಬಾ ಆಲೋಚನೆ ಮಾಡಬೇಕು. ಮಾತಿಗೆ ತಪ್ಪುವಂತಹ ವ್ಯಕ್ತಿ ಜೀವನದಲ್ಲಿ ಸಂಸ್ಥೆಗಳನ್ನು ಉಂಟು ಮಾಡಬಹುದು. ಹೀಗಾಗಿ ಇಂಥವರಿಂದ ದೂರವಿರಿ. 2 ನಿಯಂತ್ರಿಸುವುದು ಕೆಲವರು ಪ್ರೇಮಿಯು ಆ ರೀತಿಯ ಬಟ್ಟೆ ಧರಿಸಬೇಕು ,ಇದನ್ನು ತಿನ್ನಬೇಕು, ಮತ್ತು ಅಲ್ಲಿಗೆ ಹೋಗಬಾರದು ಎನ್ನುವ ನಿರ್ಭಂದಗಳನ್ನು ಹಾಕಿರುತ್ತಾರೆ. ಇದು ಆರಂಭದಲ್ಲಿ ಆರೈಕೆ ಎನ್ನಿಸಿದರೂ ಜೀವನದಲ್ಲಿ ಸಮಸ್ಯೆ ಆಗಿ ಪರಿಣಮಿಸುವುದು .3 ಮಾನ್ಯತೆ ನೀಡದೆ ಇರುವುದು ಕೊಡುವುದು ,ಸ್ವೀಕರಿಸುವುದು ಹಂಚಿಕೊಳ್ಳುವುದು ಸಂಬಂಧದಲ್ಲಿ ಇರುವುದೇ. ಆದರೆ ಸಂಗಾತಿ ಇದನ್ನು ಒಪ್ಪದೇ ಇದ್ದರೆ ನೀವು ಆತನಿಂದ ದೂರ ಇರುವುದೇ ಒಳ್ಳೆಯದು .ಯಾಕೆಂದರೆ ಆತನ ಪೋಷಕರ ನಂತರ ನೀವೇ ಏರೆಡನೀ ಆದ್ಯತೆ ಆಗಿರಬೇಕು.
4 ಅದೇ ತಪ್ಪು ಪುನರಾವರ್ತನೆ ಆತ ತಪ್ಪು ಮಾಡಿದ ಬಳಿಕ ಕ್ಷಮೆ ಕೇಳಬಹುದು ಮತ್ತು ಅದೇ ತಪ್ಪು ಮತ್ತೆ ಮತ್ತೆ ಮಾಡಿದರೆ ಅದನ್ನು ಕ್ಷಮಿಸಲು ಆಗಲ್ಲ .ಹೀಗಾಗಿ ಇಂತಹ ವ್ಯಕ್ತಿಯನ್ನು ಜೀವನದಿಂದ ದೂರವಿರುವುದೇ ಒಳ್ಳೆಯದು .5 ನಿಮ್ಮ ಅಭಿಪ್ರಾಯಕ್ಕೆ ಬೆಲೆ ಇಲ್ಲ ನೀವು ನೀಡುವಂತಹ ಯಾವುದೇ ಅಭಿಪ್ರಾಯವನ್ನು ಆತ ಕಡೆಗಣಿಸುತ್ತಿದ್ದಾರೆ ಎಂದಾದರೆ ಇದು ಒಳ್ಳೆಯ ವಿಚಾರವಲ್ಲ .ಸಂಬಂಧದಲ್ಲಿ ಇಬ್ಬರ ಅಭಿಪ್ರಾಯವೂ ಮುಖ್ಯ .ಆತ ಯಾವಾಗಲು ತನ್ನದೇ ಅಭಿಪ್ರಾಯ ಮಂಡಿಸುತ್ತಾ ,ನಿಮ್ಮ ಅಭಿಪ್ರಾಯವನ್ನು ಕಡೆಗಣಿಸುತ್ತಿದ್ದಾರೆ ಆಗ ಇದು ಮುಂದೆ ಜೀವನದಲ್ಲಿ ತೊಂದರೆ ಉಂಟು ಮಾಡುತ್ತದೆ. 6 ಸುಳ್ಳುಗಾರ ಸುಳ್ಳು ಹೇಳುವುದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಸುಳ್ಳಿನ ಸರಮಾಲೆಯನ್ನೇ ಜೋಡಿಸುವಂತಹ ವ್ಯಕ್ತಿಯನ್ನು ಆದಷ್ಟು ಕಡೆಗಣಿಸುವುದು ಉತ್ತಮ .7 ಅಂಟಿಕೊಳ್ಳುವ: ಯಾವಾಗಲೂ ನಿಮ್ಮ ಜೊತೆ ಮಗುವಿನಂತೆ ಇದ್ದರೆ ಅಂಥ ವ್ಯಕ್ತಿಯನ್ನು ಮದುವೆ ಆಗಬೇಡಿ .ಇದು ಮೊದಲು ಆರೈಕೆ ಆಗಿ ಕಂಡು ಬಂದರೂ ಮುಂದೆ ಮದುವೆ ನಂತರ ನೀವು ನಿಮ್ಮ ಸ್ನೇಹಿರೊಂದಿಗೆ ಅಥವಾ ಬೇರೆ ಯಾರಾದರೂ ಜೊತೆಗೆ ಇದ್ದರೆ ಅವರು ಸಹಿಸುವುದಿಲ್ಲ ಇದು ಮತ್ತೆ ಸಮಸ್ಯೆಯೇ.