ತುಂಬಾ ಜನ ಮದುವೆ ಆಗಬೇಕು ಅಂತ ಎಷ್ಟೋ ಪ್ರಯತ್ನವನ್ನು ಪಡುತ್ತಾರೆ. ಆದರೆ ಅದೇನು ತೊಂದರೆಗಳು ಬಂದು ಮದುವೆಯಾಗುವುದು ತುಂಬಾನೇ ಲೇಟ್ ಆಗುತ್ತೆ. ಜೊತೆಗೆ ಕೆಲವೊಂದು ಸಮಸ್ಯೆಗಳು ಕೂಡ ಕಾಡುತ್ತೆ. ಇನ್ನು ಮದುವೆ ಯೋಗ ಕೂಡಿ ಬರಬೇಕು ಅಂದರೆ ಶಾಸ್ತ್ರದ ಸುಲಭವಾದ ಪರಿಹಾರ ಮಾಡಿಕೊಂಡರೆ ಸರಿ ಹೋಗುತ್ತೆ ಹಾಗೆ ಬೇಗ ಮದುವೆ ಕೂಡ ಆಗುತ್ತೆ ಅಂತ ಹೇಳುತ್ತಾರೆ ಕೆಲವು ಜ್ಯೋತಿಷ್ಯರು. ಆದರೆ ಒಂದು ಸ್ಮಾಲ್ ಡೀಟೇಲ್ ಹೇಳುತ್ತೇನೆ ಕೇಳಿಸಿಕೊಳ್ಳಿ. ಮದುವೆ ಯೋಗಗಳನ್ನು ಕೂಡಿಬರಲು ಸುಲಭವಾದ ಪರಿಹಾರಗಳು ನೀವು ಮಾಡಿಕೊಳ್ಳಬೇಕು. ಯಾರಿಗಾದರೂ ಮದುವೆಯಾಗುತ್ತಿಲ್ಲ ಅಂದರೆ ಅದಕ್ಕೆ ಕಾರಣ ಮಾಂಗಲ್ಯ ದೋಷ ಅಥವಾ ಕುಜದೋಷ ಸರ್ಪದೋಷ ಕಾಳಸರ್ಪ ದೋಷ ಏಳನೇ ಮನೆಯಲ್ಲಿ ಕುಜ-ಶನಿ ಹೀಗೆ ಇವೆಲ್ಲವೂ ಕಾರಣ ಇರಬಹುದು.
ನಾವು ಎಷ್ಟೇ ಹುಡುಗ-ಹುಡುಗಿಯರನ್ನು ಹುಡುಕಿದರು ವರನಿಗೆ ತಕ್ಕ ವಧುವಿಗೆ ತಕ್ಕ ವರ ಸಿಗುವುದಿಲ್ಲ. ಇವೆಲ್ಲ ಕಾರಣದಿಂದಾಗಿಯೇ ಮದುವೆ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಹೀಗೆ ಮದುವೆಯಾಗದೆ ಕಂಕಣಭಾಗ್ಯ ಕೂಡಿ ಬರದೇ ಇರುವವರು ಅನೇಕರು ಇದ್ದಾರೆ. ತಮ್ಮ ಕುಟುಂಬದವರು ತಂದೆ-ತಾಯಿಯರು ಕೂಡ ಮದುವೆ ಆದರೆ ಸಾಕು. ವಯಸ್ಸು ಮೀರಿ ಹೋಗಿದೆ ಅಂತ ತಲೆಕೆಡಿಸಿಕೊಂಡು ಆಗಾಗ ಮಾತನಾಡುತ್ತಿದ್ದರು ತಾರೆ. ಇದಕ್ಕೆಲ್ಲಾ ಕೆಲವು ಸರಿಯಾದ ಪರಿಹಾರಗಳನ್ನು ಅನುಸರಿಸಿ ಪಾಲಿಸಿ ನೋಡಿ ಈ ಪರಿಹಾರದಿಂದ ಕಂಡಿತ ಕಂಕಣ ಭಾಗ್ಯ ಕೂಡಿ ಬರಬಹುದು. ಮೊದಲನೆಯದಾಗಿ ನೀವು ಏನು ಮಾಡಬೇಕೆಂದರೆ ಕುಜದೋಷ ಅಂದರೆ ತಮ್ಮ ಜನ್ಮ ಕುಂಡಲಿಯಲ್ಲಿ 2,4,6, 8ನೇ ಮನೆಯಲ್ಲಿ ಕುಜಾ ಇರುತ್ತಾನೆ. ಹೀಗಿರುವ ಅವರು ಪ್ರತಿದಿನ ಸಾಯಂಕಾಲದ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ಮೂರು ಬತ್ತಿಯಿಂದ ದೀಪರಾಧನೆ ಮಾಡಿ ಅಂಗಾರಕ ಸ್ತೋತ್ರ ಅಥವಾ ಜಪವನ್ನು ಮಾಡಿದರೆ ಕುಜ ಗ್ರಹದ ದೋಷ ನಿವಾರಣೆಯಾಗುತ್ತದೆ.
ಇನ್ನು ಶುಕ್ಲಪಕ್ಷದ ಮಂಗಳವಾರದ ದಿನ ಪ್ರಾರಂಭಮಾಡಿ 18 ದಿನಗಳ ಉಪವಾಸ ಮಾಡಬೇಕು. ಬೆಳಗ್ಗೆ ಉಪವಾಸ ಇದ್ದು ಸಾಯಂಕಾಲ ದೀಪರಾಧನೆ ಮಾಡಿ ನಂತರ ತೊಗರಿಬೇಳೆಯನ್ನು ಮಾಡಿದ ಪದಾರ್ಥವನ್ನು ತಿಂದು ತುಂಬಾನೆ ಒಳ್ಳೆಯದು. ಹೀಗೆ ಮಾಡಿದರೆ ಕುಜದೋಷ ಬೇಗ ನಿವಾರಣೆಯಾಗುತ್ತೆ. ಕುಜದೋಷ ನಿವಾರಣೆಯಾಗುವುದು ರಿಂದ ಮದುವೆ ಕೊಡಬೇಕಾಗುತ್ತೆ. ಇನ್ನು ಸ್ತ್ರೀಯರು ಪ್ರತಿ ತಿಂಗಳಿನಲ್ಲಿ ಅವರ ಜನ್ಮ ನಕ್ಷತ್ರದ ದಿನದಂದು ಸುಬ್ರಹ್ಮಣ್ಯಸ್ವಾಮಿಗೆ ಹಾಲಿನಿಂದ ಅಭಿಷೇಕ ಮಾಡಿಸಬೇಕು. ಇನ್ನು ನಾಲ್ಕನೆಯದಾಗಿ ದುರ್ಗಾದೇವಿಗೆ ಸಪ್ತ ಸ್ತೋತ್ರಗಳನ್ನು ಪಠಿಸುತ್ತಾ ಕುಂಕುಮಾರ್ಚನೆ ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ. ಇನ್ನು ಐದನೇಯದಾಗಿ ಹದಿನೆಂಟು ಮಂಗಳವಾರ ಗಳು ಗೌರಿ ದೇವಿಗೆ ಪೂಜೆ ಮಾಡಿ ಸುಮಂಗಲಿಯರಿಗೆ ಕೆಂಪು ಬಣ್ಣದ ವಸ್ತುಗಳನ್ನು ಮಂಗಳಕರ ವಸ್ತುಗಳನ್ನು ಮಣ್ಣಿನ ದೀಪಗಳು ತಾಂಬೂಲವನ್ನು ನೀಡಿ ಅವರ ಆಶೀರ್ವಾದವನ್ನು ತಗೋಬೇಕು. ಹಾಗೆ ತೊಗರಿಬೇಳೆ ಹಾಗು ತುಪ್ಪದಿಂದ ಮಾಡಿದ ಆಹಾರವನ್ನು ಸುಮಂಗಲಿಯರಿಗೆ ಭೋಜನ ವಾಗಿ ನೀಡಿದರೆ ದೋಷಗಳು ದೂರವಾಗುತ್ತೆ ಅಂತ ಕೂಡ ಹೇಳಲಾಗುತ್ತೆ.