ಹಲೋ ನಮ್ಮ ಪ್ರೀತಿಯ ಓದುಗರೇ, ರಕ್ತದೊತ್ತಡ ಅಥವಾ ಬ್ಲಡ್ ಪ್ರೆಶರ್ ಎಂದೇ ಕರೆಯಲ್ಪಡುವ ಬಿಪಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸರ್ವೇ ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದಾಗಿದೆ. ಯಾರಿಗೆ ಶುಗರ್ ಇರುತ್ತದೆಯೋ ಅವರಿಗೆ ಬಿಪಿ ಬರುವುದು ತುಂಬಾನೇ ಕಾಮನ್ ಆಗಿಬಿಟ್ಟಿದೆ. ಇದಕ್ಕೆ ಮುಖ್ಯವಾದ ಕಾರಣವೇನೆಂದರೆ ನಮ್ಮ ಜೀವನ್ ಶೈಲಿ ಆಗಿರಬಹುದು ಅಥವಾ ಆಹಾರ ಪದ್ಧತಿ ಆಗಿರಬಹುದು. ಮನುಷ್ಯನ ದೇಹದಲ್ಲಿ ಬಿಪಿ ಹೆಚ್ಚಾದರೂ ತೊಂದರೆ ಆಗುತ್ತದೆ ಕಡಿಮೆ ಆದರೂ ತೊಂದರೆ ಆಗುತ್ತದೆ. ನಿಮಗೆ ಬಿಪಿ ಇರುವುದು ನಿಖರವಾಗಿ ತಿಳಿಯಲು ಕೆಲವೊಮ್ಮೆ ನಿಮಗೆ ಸಾಧ್ಯ ಆಗುವುದುವಿಲ್ಲ. ಹೀಗೆ ಆಗುವುದರಿಂದ ನಮಗೆ ಇನ್ನಷ್ಟು ಸಮಸ್ಯೆ ಹೆಚ್ಚಾಗ ಲು ಮೂಲ ಕಾರಣ ಆಗಿಬಿಡುತ್ತದೆ. ಆದ್ದರಿಂದ ನಿಮಗೆ ಬಿಪಿ ಸಮಸ್ಯೆ ಇದಿಯೂ ಇಲ್ಲವೋ ಎಂಬುದನ್ನು ತಿಳಿಯಲು ಕೆಲವೊಂದು ಸಲಹೆಗಳನ್ನೂ ಇಂದಿನ ಅಂಕಣದಲ್ಲಿ ನೋಡೋಣ. ಮೊದಲನೆಯದಾಗಿ ನೀವು ವೈದ್ಯರ ಬಳಿ ಹೋದರೆ ಕೆಲವೇ ನಿಮಿಷಗಳಲ್ಲಿ ಕೆಲವೊಂದು ಪರೀಕ್ಷೆಯ ಮೂಲಕ ನಿಮಗೆ ಬಿಪಿ ಇದೆಯೋ ಇಲ್ಲವೋ ಎಂಬುದು ಗೊತ್ತಾಗಿ ಬಿಡುತ್ತದೆ. ಕೆಲವು ಜನರಿಗೆ ತಮಗೆ ಬಿಪಿ ಇದೆಯೋ ಇಲ್ಲವೋ ಎಂಬುದು ಗೊತ್ತೇ ಇರುವುದಿಲ್ಲ ಹಾಗಾಗಿ ಅವರು ವೈದ್ಯರ ಬಳಿ ಕೂಡ ಹೋಗುವುದಿಲ್ಲ.
ಈ ಬಿಪಿ ಸಮಸ್ಯೆ ಇದ್ದರೆ ನಮಗೆ ಯಾವೆಲ್ಲ ಲಕ್ಷಣಗಳು ಮತ್ತು ಪರಿಣಾಮಗಳೂ ನಮ್ಮ ದೇಹದಲ್ಲಿ ಆಗುತ್ತವೆ ಎಂಬುದನ್ನು ನೋಡುವುದಾದರೆ ಹೃದಯದಲ್ಲಿ ಏರು ಪೇರು ಉಂಟಾಗುವುದನ್ನು ಗಮನಿಸಬಹುದು ಮತ್ತು ತಲೆ ಸುತ್ತು ಬರುತ್ತಾ ಇರುತ್ತದೆ, ದೇಹದಲ್ಲಿ ನಿಶ್ಯಕ್ತಿ ಉಂಟಾಗುತ್ತದೆ, ಏಕಾಗ್ರತೆಯ ಕೊರತೆ ಉಂಟಾಗುತ್ತದೆ, ದೃಷ್ಟಿ ಕೂಡ ಮಂದಾಗುತ್ತದೆ ಮತ್ತು ಹೆಚ್ಚು ಬಾಯಾರಿಕೆ ಉಂಟಾಗುತ್ತದೆ, ದಾಹ ಹೆಚ್ಚಾಗುತ್ತದೆ. ಉಸಿರಾಟದ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತ ಇರುತ್ತದೆ ಅಂದರೆ ಉಸಿರಾಡುವಾಗ ನಮಗೆ ಭಾರ, ತೊಡಕು ಉಂಟಾಗುತ್ತದೆ ಮತ್ತು ಒತ್ತಡ ಕೂಡ ಇರುತ್ತದೆ. ನಿದ್ರಾ ಹೀನತೆ ಅಂತಹ ಸಮಸ್ಯೆಗಳು ಉಂಟಾಗುತ್ತವೆ, ರಕ್ತ ಸಂಚಾರದಲ್ಲಿ ಏರು ಪೇರು ಉಂಟಾಗುವುದನ್ನು ಗಮನಿಸಬಹುದು. ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ಅಂತಹ ವ್ಯಕ್ತಿಗೆ ರಕ್ತದೊತ್ತಡ ಸಮಸ್ಯೆ ಇರಬಹುದು ಎಂದು ಅರಿತುಕೊಳ್ಳಬಹುದು. ಒಂದುವೇಳೆ ರಕ್ತದೊತ್ತಡ ಕಡಿಮೆ ಆದಾಗ ಉಪ್ಪು ಅಥವಾ ಸಕ್ಕರೆ ಅನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಲು ಸಲಹೆ ಸೂಚನೆ ನೀಡಲಾಗುತ್ತದೆ. ಇದು ರಕ್ತದಲ್ಲಿರುವ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಹಾಯವಾಗುತ್ತದೆ. ರಕ್ತದೊತ್ತಡಕ್ಕೂ ತೂಕಕ್ಕೂ ಸಂಬಂಧ ಇರುತ್ತದೆ. ಅತಿಯಾದ ತೂಕ ಇರುವವರ ದೇಹದಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಹಾಗಾಗಿ ನಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರುವುದು ಒಳ್ಳೆಯದು. ದಿನ ಬೆಳಿಗ್ಗೆ ವ್ಯಾಯಾಮ ಮಾಡದೇ ಇರುವುದು ರಕ್ತದೊತ್ತಡ ಬರಲು ಕಾರಣ ಆಗಬಹುದು. ಈ ಮೂಲಕ ದೈಹಿಕ ಚಟುವಟಿಕೆ ಕಡಿಮೆ ಆದಾಗ ಕೂಡ ಅದು ನಮ್ಮ ದೇಹದಲ್ಲಿ ರಕ್ತ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿನಿತ್ಯ ಯೋಗ ಮಾಡುವುದು ವ್ಯಾಯಾಮ ಮಾಡುವ ಹವ್ಯಾಸ ಬೆಳೆಸಿ ಕೊಂಡರೆ ಉತ್ತಮ ಇನ್ನೂ ಅತಿಯಾದ ರಕ್ತದೊತ್ತಡ ಕಡಿಮೆ ಮಾಡಲು ಅತಿಯಾದ ಕೊಲೆಸ್ಟ್ರಾಲ್ ಇರುವ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಬೇಕಾಗತ್ತದೆ. ಅಂದರೆ ಪ್ರತಿನಿತ್ಯ ಕರಿದಿರುವ ತಿಂಡಿಗಳನ್ನು ಮತ್ತು ಊಟದಲ್ಲಿ ಅತಿಯಾದ ಉಪ್ಪನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕಾಗುತ್ತದೆ.
ಅದರಲ್ಲಿ ನೀವೇನಾದರೂ ಹೊರಗಿನ ಆಹಾರ ಸೇವನೆ ಮಾಡುತ್ತಿದ್ದರೆ ಅವರು ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಬಳಸಿರುವ ಸಂಭವ ಹೆಚ್ಚಿರುತ್ತದೆ. ಏಕೆಂದರೆ ಉಪ್ಪು ಆಹಾರದ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಆಹಾರವನ್ನು ದೀರ್ಘ ಕಾಲದವರೆಗೆ ಇಟ್ಟಾಗ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಉಪ್ಪು ಅಥವಾ ನಿರ್ದಿಷ್ಟವಾಗಿ ಉಪ್ಪಿನಲ್ಲಿರುವ ಸೋಡಿಯಂ ಹೆಚ್ಚು ರಕ್ತದೊತ್ತಡ ಹಾಗೂ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇನ್ನೂ ಯಾವ ರೀತಿಯ ಆಹಾರ ಸೇವನೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನೋಡುವುದಾದರೆ ಫೈಬರ್ ಅಥವಾ ನಾರಿನಂಶ ಅಧಿಕವಿರುವ ಆಹಾರವನ್ನು ಸೇವನೆ ಮಾಡಿ, ಆದರೆ ನೈಸರ್ಗಿಕವಾಗಿ ನಾರಿನಂಶ ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು. ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳನ್ನು ಸೇವನೆ ಮಾಡಿ ಮತ್ತು ಪೊಟ್ಯಾಸಿಯಂ, ಫೋಲಿಕ್ ಆ್ಯಸಿಡ್ ವಿಟಮಿನ್ ಇರುವ ಆಹಾರಗಳನ್ನು ಸೇವನೆ ಮಾಡುವುದರಿಂದ ಕೂಡ ನಿಮ್ಮ ರಕ್ತದೊತ್ತಡ ನೈಸರ್ಗಿಕವಾಗಿ ನಿಯಂತ್ರಣಕ್ಕೆ ಬರುತ್ತದೆ. ಮತ್ತು ನೀವು ಆಹಾರದಲ್ಲಿ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡಿ ಇದರಿಂದ ರಕ್ತ ಹೆಪ್ಪುಗಟ್ಟುವದನ್ನು ತಡೆಗಟ್ಟಬಹುದು. ವಾರದಲ್ಲಿ ಒಂದು ಅಥವಾ ಎರೆಡು ಬಾರಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಎಸಳನ್ನು ಸೇವನೆ ಮಾಡಿ, ಇದು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಈ ಮಾಹಿತಿ ಇಷ್ಟವಾದಲ್ಲಿ ನೀವೂ ಅನುಸರಿಸಿ ನಿಮ್ಮವರಿಗೂ ತಿಳಿಸಿ. ಶುಭದಿನ.