ನಮಸ್ತೆ ಪ್ರಿಯ ಓದುಗರೇ, ಮದ್ಯಪಾನದ ಬಗ್ಗೆ ಹಲವಾರು ಜನರು ಹಲವಾರು ಬಗೆಯ ಅಭಿಪ್ರಾಯಗಳಿವೆ, ಆಗಿನ ಕಾಲದಿಂದಲೂ ಮನುಷ್ಯನಿಗೆ ಇರುವ ಕೆಟ್ಟ ಚಟ ಅಂದರೆ ಅದು ಕುಡಿಯುವುದು. ಕಾಲಕ್ಕೆ ತಕ್ಕಂತೆ ಮನುಷ್ಯನಿಗೆ ವಿವಿಧ ರೀತಿಯ ಮಧ್ಯಗಳು ಸಿಗುತ್ತಾ ಹೋಗುತ್ತವೆ. ಬೇರೆ ಬೇರೆ ಕಲ್ಲ ಘಟ್ಟದಲ್ಲಿ ಜನರು ಪ್ರಾಚೀನ ಕಾಲದಿಂದಲೂ ಮದ್ಯಪಾನವನ್ನು ಖಂಡಿಸುತ್ತಾ ಬರುತ್ತಾ ಇದ್ದಾರೆ. ಆದರೂ ಇದೀಗ ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನರು ಮಧ್ಯಪಾನ ವ್ಯಸನಕ್ಕೆ ದಾಸರಾಗಿದ್ದರೆ. ಯಾರು ಬಹಳ ವರ್ಷಗಳಿಂದ ಕುಡಿಯುತ್ತಾ ಬರುತ್ತಾ ಇರುತ್ತಾರೋ ಅವರಿಗೆ ದೇಹದಲ್ಲಿ ಬೇರೆ ಬೇರೆ ಅಂಗಗಳಿಗೆ ಖಾಯಿಲೆಗಳು ಬರುತ್ತಾ ಇರುತ್ತದೆ.
ಸ್ನೇಹಿತರೆ ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಜಗತ್ತಿನಾದ್ಯಂತ ವರ್ಷಕ್ಕೆ ಸರಾಸರಿ 2.5 ಮಿಲಿಯನ್ ಸಾವುಗಳು ಈ ಮಧ್ಯಪಾನ ಮಾಡುವುದರಿಂದ ಆಗುತ್ತಿದೆ ಎಂದು ಘೋಷಿಸಲಾಗಿದೆ. ಈ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಬೇರೆ ಬೇರೆ ಕರ್ಯಕರ್ಮಗಳನ್ನು ಹಮ್ಮಿಕೊಂಡಿದೆ. ಜನರಿಗೆ ಮದ್ಯಪಾನದಿಂದ ಬರುವಂತಹ ಕಾಯಿಲೆಗಳು ಮತ್ತು ತೊಂದರೆಗಳ ಬಗ್ಗೆ ಅರಿವು ಮೂಡಿಸುವುದು ತುಂಬಾನೇ ಮುಖ್ಯವಾಗಿದೆ. ಹಾಗಿದ್ದರೆ ಈ ಮಧ್ಯಪನವನ್ನು ತುಂಬಾ ವರ್ಷಗಳಿಂದ ದಿನಗಳಿಂದ ಮಾಡುತ್ತಾ ಇದ್ದರೆ ಯಾವೆಲ್ಲ ಆರೋಗ್ಯದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ನೋಡುವುದಾದರೆ –
ಮೊದಲನೆಯದಾಗಿ ನೀವೇನಾದರೂ ಮದ್ಯಪಾನವನ್ನು ದೀರ್ಘ ಕಾಲದಿಂದ ಮಾಡುತ್ತಾ ಇದ್ದರೆ ನಿಮ್ಮ ಎಲುಬುಗಳು ತುಂಬಾ ಹಾನಿಗೆ ಒಳಗಾಗುತ್ತವೆ. ಎಲುಬಿನಲ್ಲಿ ಕೋಲಾಜಿನ್, ಪ್ರೋಟಿನ್ ಎಂಬ ಕ್ಯಾಲ್ಸಿಯಂ, ಲವಣಗಳು ಇರುತ್ತವೆ. ಅತಿಯಾದ ಮದ್ಯಪಾನವನ್ನು ಮಾಡುವುದರಿಂದ ಈ ಎರೆಡೂ ಖನಿಜಗಳ ಸಾಂದ್ರತೆ ಕಡಿಮೆ ಆಗಿ ಮೂಳೆಗಳಿಗೆ ಹಾನಿ ಉಂಟಾಗುತ್ತದೆ. ಇದರಿಂದ ಕೀಲು ನೋವು, ಬೆನ್ನು ನೋವು, ಎಲುಬುಗಳು ಕಾರಣವಿಲ್ಲದೆ ಪದೇ ಪದೇ ಮುರಿತಕ್ಕೆ ಒಳಗಾಗುತ್ತವೆ. ಮಧ್ಯ ವ್ಯಸನದಿಂದ ದೇಹದಲ್ಲಿ ಎಲುಬಿನ ನಷ್ಟ ಕೂಡ ಹೆಚ್ಚಾಗುತ್ತದೆ ಮತ್ತು ಎಲುಬಿನಲ್ಲಿ ಶಕ್ತಿ ಕೂಡ ಕಡಿತವಾಗುತ್ತದೆ.
ಇದರಿಂದ ಪ್ರತಿದಿನ ಚಟುವಟಿಕೆಗಳೊಂದಿಗೆ ಆಗುವ ಸಹಜವಾದ ಎಲುಬಿನ ಅಂಗಾಂಶ ನಾಶ ಪ್ರಕ್ರಿಯೆ ಕೂಡ ಬಹಳ ತ್ವರಿತವಾಗಿ ಆಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ ಮೂಳೆಗಳು ಮುರಿದಾಗ ನೈಸರ್ಗಿಕವಾಗಿ ಜೋಡಣೆ ಆಗುವ ಕೆಲಸ ನಿಧಾನವಾಗಿ ಆಗುತ್ತದೆ. ಇನ್ನೂ ಯಾರೂ ಅತಿಯಾಗಿ ಮಧ್ಯ ಪಾನವನ್ನು ಮಾಡುತ್ತಾ ಇರುತ್ತಾರೆ ಅಂಥವರಿಗೆ ಲಿವರ್ ಕಾಯಿಲೆಗಳು ತುಂಬಾನೇ ಬರುತ್ತವೆ. ಮಧ್ಯಪಾನ ಮಾಡುವುದರಿಂದ ಪಿತ್ತ ಜನಕಾಂಗ ಕೊಳೆಯುತ್ತ ನಿಧಾನವಾಗಿ ನಾಶ ಆಗುತ್ತವೆ.
ಇದಷ್ಟೇ ಅಲ್ಲದೇ ಮಧ್ಯ ಪಾನ ಮಾಡುವುದರಿಂದ ಜಠರ ಸಮಸ್ಯೆ ಶುರು ಆಗುವುದರ ಜೊತೆಗೆ ಪದೇ ಪದೇ ಅಜೀರ್ಣ ಹಾಗೂ ವಿಟಮಿನ್ಗಳ ಕೊರತೆ ಉಂಟಾಗುತ್ತದೆ. ಅತಿಯಾದ ಮಧ್ಯಪಾನ ಹೃದಯದ ತೊಂದರೆಗೆ ಈಡು ಮಾಡುತ್ತದೆ. ರಕ್ತದೊತ್ತಡ ಹೆಚ್ಚಾಗಿ ಹೃದಯಕ್ಕೆ ಸಂಬಂಧ ಇರುವಂತಹ ರೋಗಗಳು ಅತಿ ಬೇಗ ಬರುತ್ತವೆ. ಅತಿಯಾದ ಮಧ್ಯ ಪಾನದಿಂದ ಕಣ್ಣಿನ ಮಾಂಸ ಖಂಡಗಳು ದುರ್ಬಲಗೊಳ್ಳುತ್ತವೆ. ನರ ಸಂಬಂಧಿ ಕಾಯಿಲೆಗಳು ಬರುತ್ತವೆ. ಅದರಲ್ಲಿ ಮುಖ್ಯವಾದುವು ಅಂದರೆ ನರ ದೌರ್ಬಲ್ಯ, ಕೈ ಕಾಲು ಮರಗಟ್ಟುವಿಕೆ ಹಾಗೆ ನೆನಪಿನ ಶಕ್ತಿ ಕಡಿಮೆ ಆಗುತ್ತಾ ಬರುತ್ತದೆ.
ಮಧ್ಯ ಸೇವನೆಯಿಂದ ಬಾಯಿ, ಗಂಟಲು, ಪಿತ್ತಜನಕಾಂಗ, ಸ್ತನದ ಕ್ಯಾನ್ಸರ್ ಬರುತ್ತದೆ. ಇನ್ನೂ ಕೆಲವು ಗರ್ಭಿಣಿ ಸ್ತ್ರೀಯರು ಆಲ್ಕೋಹಾಲ್ ಸೇವನೆ ಮಾಡುವುದರಿಂದ ಬೆಳೆಯುವ ಶಿಶುವಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಬೆಳೆಯುವ ಮಗುವಿನ ಎಳುವಿನಲ್ಲಿ ಬಿಬಿ ದೌರ್ಬಲ್ಯ ಹಾಗೂ ಗರ್ಭಿಣಿಯರಿಗೆ ಅಪಾಯ ಉಂಟು ಮಾಡುತ್ತದೆ. ಮಧ್ಯ ಪಾನ ಮಾಡಿದರೆ ನರಕದ ಚಿಂತನೆ ಮಾಡಿದಂತೆ ಎಂದು ಮಹಾಕವಿ ಕಾಳಿದಾಸ ಉಲ್ಲೇಖ ಮಾಡಿದ್ದಾರೆ. ಮಧ್ಯಪಾನ ಶಾರೀರಿಕವಾಗಿ ಹಾಗೂ ಸಾಮಾಜಿಕವಾಗಿ ತೊಂದರೆಗಳನ್ನು ಉಂಟು ಮಾಡುತ್ತದೆ.
ಸಾವಿರಾರು ಕುಟುಂಬಗಳು ಈ ಮಧ್ಯ ವ್ಯಸನದಿಂದ ಬೀದಿ ಪಾಲಾಗಿದ್ದಾರೆ. ಮುಗ್ಧ ಜನಗಳು ಈ ವ್ಯಸನಕ್ಕೆ ಬಿದ್ದರೆ ಅದರಿಂದ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಈ ಚಟದಿಂದ ಹೊರಗೆ ಬರುವುದೇ ಒಳ್ಳೆಯದು. ಒಂದುವೇಳೆ ನೀವೂ ಮಧ್ಯ ಪಾನ ಮಾಡುತ್ತಿದ್ದರೆ ಇಂದೇ ಅದನ್ನು ಬಿಡಲು ಪ್ರಯತ್ನಿಸಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಯಾವ ಲಾಭವೂ ಇಲ್ಲ, ಹೊರತಾಗಿ ನಿಮ್ಮ ಆರೋಗ್ಯವನ್ನು ನೀವೇ ದುಡ್ಡು ಕೊಟ್ಟು ಹಾಳು ಮಾಡಿಕೊಳ್ಳುತ್ತೀರಿ. ಇಂದಿನ ಮಾಹಿತಿ ಇಷ್ಟವಾಗಿದ್ದರೇ ಶೇರ್ ಮಾಡಿ, ಲೈಕ್ ಮಾಡಿ. ಶುಭದಿನ.