ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ದೇವಸ್ಥಾನ ಅಂದ್ರೆ ಅಲ್ಲಿ ದೇವರಿಗೆ ಪೂಜೆ ಮಾಡೋಕೆ ಅಂತಾನೆ ಪೂಜಾರಿಗಳು ಇರುತ್ತಾರೆ, ಅಲ್ಲದೆ ದೇವಸ್ಥಾನಕ್ಕೆ ಹೋದ ಭಕ್ತರು ತಾವು ತೆಗೆದುಕೊಂಡು ಹೋದ ಹಣ್ಣು ಕಾಯಿಗಳನ್ನು ಪೂಜಾರಿ ಬಳಿ ಕೊಟ್ಟು ಹಣ್ಣು ಕಾಯಿ ಮಾಡಿಸಿಕೊಂಡು ಬರುತ್ತಾರೆ. ಆದ್ರೆ ನಾವು ಇವತ್ತು ನಿಮಗೆ ಮಾಹಿತಿ ನೀಡಲು ಹೊರಟಿರುವ ದೇವಸ್ಥಾನದಲ್ಲಿ ದೇವರನ್ನು ಪೂಜೆ ಮಾಡೋಕೆ ಪೂಜಾರಿಗಳು ಇಲ್ಲ. ಅಲ್ಲದೆ ಈ ದೇಗುಲಕ್ಕೆ ಮಧ್ಯ ರಾತ್ರಿ ಕೂಡ ಹೋಗಿ ದೇವರನ್ನು ಭಕ್ತರೇ ಪೂಜೆ ಮಾಡಿ ಬರಬಹುದು. ಹಾಗಾದರೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ ಆ ದೇವಸ್ಥಾನ ಎಲ್ಲಿದೆ? ಅಲ್ಲಿನ ಮಹಿಮೆಗಳನ್ನು ಏನೇನು ಅನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಪುರದಮ್ಮ ಎಂಬ ಹೆಸರಿನಿಂದ ಖ್ಯಾತವಾಗಿರುವ ಆದಿಶಕ್ತಿ ಜಗನ್ಮಾತೆ ಯು ಈ ಕ್ಷೇತ್ರದಲ್ಲಿ ಕಲ್ಲಿನ ರೂಪದಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ. ಬೇರೆ ದೇವಸ್ಥಾನ ಗಳಂತೆ ಇಲ್ಲಿ ದೇವಿಗೆ ಒಡವೆ ಅಲಂಕಾರಗಳನ್ನು ಮಾಡುವುದಿಲ್ಲ.
ಈ ತಾಯಿಯು ನಿರಾಭರಣ ಪ್ರಿಯೆ ಹೀಗಾಗಿ ಈ ತಾಯಿಯು ಬಾರಿ ತಾಳಿ ಹಾಗೂ ಹೂವಿನ ಹಾರಗಳಿಂದ ಅಲಂಕೃತ ಆಗಿ ಈ ದೇವಿಯು ಭಕ್ತರಿಗೆ ದರ್ಶನವನ್ನು ನೀಡ್ತಾ ಇದ್ದಾಳೆ. ಈ ದೇವಸ್ಥಾನದ ವಿಶೇಷತೆ ಏನೆಂದರೆ ದೇವಿಯನ್ನು ಪೂಜೆ ಮಾಡಲು ಯಾವುದೇ ಪೂಜಾರಿಗಳು ಇಲ್ಲ ಎನ್ನುವುದು. ಈ ಕ್ಷೇತ್ರಕ್ಕೆ ಹೋದ ಭಕ್ತರು ದೇವಿಯನ್ನು ಅತ್ಯಂತ ಸಮೀಪದಲ್ಲಿ ನಿಂತು ತಮಗೆ ಇಷ್ಟ ಬಂದ ರೀತಿಯಲ್ಲಿ ಪೂಜೆಯನ್ನು ಮಾಡಬಹುದು. ಅಲ್ಲದೆ ಮಧ್ಯ ರಾತ್ರಿ ಸಮಯದಲ್ಲಿ ಸಹ ದೇಗುಲಕ್ಕೆ ಹೋಗಿ ಈ ಅಮ್ಮನವರನ್ನು ಭಕ್ತರು ಪೂಜೆ ಮಾಡಿ ಬರಬಹುದು. ತನ್ನ ಬಳಿ ಯಾರೇ ಬಂದು ಏನನ್ನೇ ಬೇಡಿದರೂ ಈ ತಾಯಿ ಪೂರ್ಣ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಮಾಟ ಮಂತ್ರ ಸಮಸ್ಯೆ, ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ಹೀಗೆ ಏನೇ ಸಮಸ್ಯೆ ಇದ್ದರೂ ಈ ತಾಯಿಗೆ ಎಡೆಯನ್ನು ಸಮರ್ಪಿಸುತ್ತೇವೆ ಎಂದು ಹರಕೆ ಹೊತ್ತರೆ ಅವರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಂತೆ. ಅಲ್ಲದೆ ಒಂದು ಚೀಟಿಯಲ್ಲಿ ತಮ್ಮ ಕಷ್ಟಗಳನ್ನು ಬರೆದು ದೇಗುಲದ ಆವರಣದಲ್ಲಿ ಇರುವ ತಾಳಿ ಮರಕ್ಕೆ ಚೀಟಿ ಕಟ್ಟಿ ಹೋದ್ರೆ ಆ ತಾಯಿಯ ಕೃಪೆಯಿಂದ ಕಷ್ಟಗಳು ಎಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಮಧ್ಯಪಾನ ಮಾಡುವವರನ್ನು ಈ ಕ್ಷೇತ್ರಕ್ಕೆ ಕರೆದುಕೊಂಡು ಬಂದು ದೇವಿಗೆ ಪೂಜೆ ಮಾಡಿಸಿದರೆ ಮಧ್ಯಪಾನ ಮಾಡುವ ವ್ಯಕ್ತಿಗಳು ಕುಡಿಯುವುದನ್ನು ಬಿಟ್ಟು ನೆಮ್ಮದಿಯ ಜೀವನ ನಡೆಸುತ್ತಾರೆ ಎನ್ನುವುದು ಇಲ್ಲಿಗೆ ಬಂದು ದೇವಿಯನ್ನು ಪೂಜಿಸಿದ ಭಕ್ತ ಜನರ ಮನದ ಮಾತಾಗಿದೆ.
ಇನ್ನೂ ಈ ದೇವಿಗೆ ಮಾಂಸದ ಅಡುಗೆ ಪ್ರಿಯವಾಗಿದ್ದೂ ಹೆಚ್ಚಿನ ಜನರು ಈ ದೇವಿಗೆ ಮಾಂಸದ ಅಡುಗೆಯನ್ನು ಎಡೆಯಾಗಿ ನೀಡುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಕೆಲವರು ಕುರಿ ಕೋಳಿ ಹಂದಿಯನ್ನು ಬಲಿ ಕೊಟ್ಟು ಹರಕೆ ತೀರಿಸುತ್ತಾರೆ. ಸಸ್ಯ ಹಾರಿಗಳು ಕೂಡ ದೇವಿಗೆ ಸಸ್ಯಾಹಾರ ಎಡೆಯನ್ನು ನೀಡಬಹುದು. ಅಮಾವಾಸ್ಯೆ ದಿನ ಇಲ್ಲಿ ಜನ ಜಂಗುಳಿ ಸೇರಿರುತ್ತಾರೆ. ಇಲ್ಲಿ ದೇವಿಗೆ ವಿಶೇಷ ಶಕ್ತಿ ಇರುತ್ತೆ ಎನ್ನುವುದು ಜನರ ನಂಬಿಕೆ. ಅಮಾವಾಸ್ಯೆ ದಿನ ಮಧ್ಯರಾತ್ರಿ ವರೆಗೂ ದೇವಿಗೆ ಪೂಜೆ ನೆರವೇರುತ್ತದೆ. ಇನ್ನೂ ಈ ದೇಗುಲವು ಗೋಪುರ, ಗರ್ಭಗೃಹ, ವಿಶಾಲವಾದ ಪ್ರಾಂಗಣ ಒಳಗೊಂಡಿದೆ. ದೇಗುಲದ ಹೊರ ಆವರಣದಲ್ಲಿ ಇರುವ ಮೂರ್ತಿ ಕೆತ್ತನೆಗಳು ಮನಸಿಗೆ ಮುದವನ್ನು ನೀಡುತ್ತವೆ. ಜಗನ್ಮಾತೆ ಯು ಕಲ್ಲಿನ ವಿಗ್ರಹ ರೂಪದಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿರುವ ಈ ಕ್ಷೇತ್ರಕ್ಕೆ ಯಾವ ಸಮಯದಲ್ಲಿ ಬೇಕಾದರೂ ಭೇಟಿ ನೀಡಬಹುದು. ಈ ಪುಣ್ಯ ಕ್ಷೇತ್ರವೂ ಹಾಸನ ಜಿಲ್ಲೆಯ ಬೀಗನಹಳ್ಳಿ ಎಂಬ ಗ್ರಾಮದಲ್ಲಿದೆ. ಈ ಸುಕ್ಷೇತ್ರ ಬೆಂಗಳೂರಿನಿಂದ 202 ಕಿಮೀ, ಮೈಸೂರಿನಿಂದ 134 ಕಿಮೀ, ಹಾಸನದಿಂದ 22 ಕಿಮೀ, ಬೀಗನಹಳ್ಳಿ ಇಂದ ಕೇಕವಲ 1.6 ಕಿಮೀ ದೂರದಲ್ಲಿದೆ. ಹಾಸನ ವೂ ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಅಪರೂಪದ ದೇಗುಲವನ್ನು ದರ್ಶನ ಮಾಡಿ ಕೃತಾರ್ಥ ಆಗಿ. ಶುಭದಿನ.