WhatsApp Group Join Now

ನಮಸ್ತೇ ಪ್ರಿಯ ಓದುಗರೇ, ಪ್ರತಿಯೊಬ್ಬರ ಮನೆಯಲ್ಲಿ ಮಸಾಲೆ ಪದಾರ್ಥಗಳು ರಾರಾಜಿಸುತ್ತವೆ. ಆಹಾರವನ್ನು ರುಚಿಯಾಗಿಸಲು ಮಸಾಲೆ ಪದಾರ್ಥಗಳ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಮ್ಮ ದೇಶದಲ್ಲಿ ಮಸಾಲೆ ಪದಾರ್ಥಗಳ ಸುವಾಸನೆ ದೇಶ ವಿದೇಶದಲ್ಲಿ ಕೂಡ ಪ್ರಸಿದ್ದತೇಯನ್ನು ಪಡೆದಿದೆ. ಇನ್ನೂ ಕೆಲವು ಜನರು ಮಸಾಲೆ ಪದಾರ್ಥಗಳನ್ನು ಖರೀದಿಸುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಮಸಾಲೆ ಮೂಲಕ ತಮ್ಮದೇ ಆದ ಮಿಶ್ರಣವನ್ನು ತಯಾರಿಸುತ್ತಾರೆ. ಇದರಿಂದ ಅಡುಗೆ ರುಚಿಯಾಗುವುದಲ್ಲದೆ ಅಡುಗೆ ಮನೆ ಮಸಾಲೆ ಪದಾರ್ಥಗಳಿಂದ ತುಂಬಿ ತುಳುಕುತ್ತದೆ. ಹೌದು ಕೆಲವು ಮಸಾಲೆ ಪದಾರ್ಥಗಳು ಪ್ರತಿನಿತ್ಯವೂ ಬಳಕೆ ಮಾಡಲು ಆಗುವುದಿಲ್ಲ. ಕೆಲವು ಮಸಾಲೆ ಪದಾರ್ಥಗಳ ಬಾಲ್ವಿಕೆ ಕಡಿಮೆ ಇರುತ್ತದೆ. ಹೀಗಾಗಿ ಅವುಗಳು ಹಾಳಾಗುವ ಭಯವು ಅತ್ಯಧಿಕ ವಾಗಿರುತ್ತದೆ. ಮಸಾಲೆ ಪದಾರ್ಥಗಳು ಒಮ್ಮೆ ಹಾಳಾದರೆ ಮತ್ತೆ ಅದನ್ನು ಬಳಕೆ ಮಾಡಲು ಆಗುವುದಿಲ್ಲ. ಹೀಗಾಗಿ ಮಸಾಲೆ ಪದಾರ್ಥಗಳ ದೀರ್ಘಾಯುಷ್ಯವು ಅದನ್ನು ಚೆನ್ನಾಗಿ ಶೇಖರಣೆ ಮಾಡುವುದರಲ್ಲಿ ಅಡಗಿದೆ.ಮಸಾಲೆ ಪದಾರ್ಥಗಳನ್ನು ತಂದು ಕೇವಲ ಅಡುಗೆ ಮಾಡುವುದಲ್ಲದೆ ಅವುಗಳನ್ನು ಚೆನ್ನಾಗಿ ಶೇಖರಣೆ ಮಾಡುವುದು ತುಂಬಾನೇ ಅಗತ್ಯವಿದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ನೀವು ಕೂಡ ದೀರ್ಘಕಾಲದವರೆಗೆ ಮಸಾಲೆಗಳನ್ನು ತಾಜಾವಾಗಿಡಲು ಬಯಸಿದರೆ, ಇದಕ್ಕಾಗಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅವುಗಳನ್ನು ಒಂದೊಂದಾಗಿ ತಿಳಿಯೋಣ ಬನ್ನಿ.

ಮೊದಲಿಗೆ ಗಾಜಿನ ಪಾತ್ರೆಯಲ್ಲಿ ಶೇಖರಣೆ ಮಾಡಿರಿ. ಹೌದು ಗಾಜಿನ ಪಾತ್ರೆಗಳು ಮಸಾಲೆ ಪದಾರ್ಥಗಳ ಶೇಖರಣೆ ಗೆ ತುಂಬಾನೇ ಸೂಕ್ತವಾಗಿದೆ. ಪ್ಲ್ಯಾಸ್ಟಿಕ್ ಹಾಗೂ ಸ್ಟೀಲ್ ಪಾತ್ರೆಗಳಲ್ಲಿ ಶೇಖರಣೆ ಮಾಡಬಹುದು ಆದರೆ ಅದು ಬೇಸಿಗೆಯಲ್ಲಿ ಮಾತ್ರ ಚೆನ್ನಾಗಿ ಇರುತ್ತದೆ. ಹಾಗೂ ಮಳೆಗಾಲದಲ್ಲಿ ತೇವಾಂಶ ಹಿಡಿಯುತ್ತದೆ. ಇದರಿಂದ ಮಸಾಲೆ ಪದಾರ್ಥಗಳು ತೇವವಾಗಿ ಬಿಡುತ್ತವೆ. ಹೀಗಾಗಿ ಅವುಗಳು ತೇವಾಂಶ ಹಿಡಿದು ಕೊಂಡರೆ ಮಸಾಲೆ ಪದಾರ್ಥಗಳು ಬಣ್ಣವನ್ನು ಕಳೆದು ಕೊಳ್ಳುತ್ತವೆ ಹಾಗೂ ಒಣಗುತ್ತವೆ. ಆದ್ದರಿಂದ ಗಾಜಿನ ಪಾತ್ರೆಗಳಲ್ಲಿ ಶೇಖರಣೆ ಮಾಡುವುದು ಒಳಿತು. ಎರಡನೆಯದು ಮಸಾಲೆ ಪದಾರ್ಥಗಳನ್ನು ಆದಷ್ಟು ಬಿಡಿ ಮಾಡಿ. ಮಸಾಲೆ ಪದಾರ್ಥಗಳನ್ನು ನಾವು ಒಂದು ಪ್ಯಾನ್ ನಲ್ಲಿ ಹಾಕಿ ಕಡಿಮೆ ಉರಿಯಲ್ಲಿ ನಿಧಾನವಾಗಿ ಹುರಿದುಕೊಳ್ಳಬೇಕು. ಇದರಿಂದ ಮಸಾಲೆ ಪದಾರ್ಥಗಳು ಕೀಟಗಳಿಂದ ಮುಕ್ತಿಯನ್ನು ಪಡೆಯುತ್ತವೆ. ಹಾಗೂ ಅವುಗಳ ರುಚಿ ಮತ್ತು ಬಣ್ಣವು ಮಾಸಿ ಹೋಗುವುದಿಲ್ಲ. ಮುಖ್ಯವಾಗಿ ಹೇಳಬೇಕು ಅಂದರೆ ಮಸಾಲೆ ಪದಾರ್ಥಗಳಿಗೆ ಗಾಳಿ ಆಡದಂತೆ ನೋಡಿಕೊಳ್ಳಬೇಕು.

ಮಸಾಲೆ ಪದಾರ್ಥಗಳಿಗೆ ಗಾಳಿ ತಾಕದಂತೆ ಅವುಗಳನ್ನು ಬಿಗಿಯಾದ ಪಾತ್ರೆಗಳಲ್ಲಿ ಶೇಖರಣೆ ಮಾಡಿ ಇಡುವುದು ಒಳ್ಳೆಯದು. ಏಕೆಂದರೆ ಮಸಾಲೆ ಪದಾರ್ಥಗಳು ಒಮ್ಮೆ ತೇವಾಂಶ ಹಿಡಿದಿಟ್ಟು ಕೊಂಡರೆ ಅವುಗಳು ಒಣಗಿ ಹಾಳಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೇ ಮಸಾಲೆ ಪದಾರ್ಥಗಳನ್ನು ಗಾಳಿಗೆ ದೀರ್ಘಕಾಲದವರೆಗೆ ಒಡ್ಡುವುದರಿಂದ ಅವು ಹಾಳಾಗಬಹುದು ಎಂದು ತಿಳಿಯಿರಿ. ನೀವು ಗಮನಿಸಿರಬಹುದು ಯಾವುದೇ ವಸ್ತುಗಳು ಕೂಡ ಗಾಳಿಗೆ ತೆರೆದಿಟ್ಟಾಗ ಹಾಳಾಗುವುದು ರುಚಿ ಕಳೆದುಕೊಳ್ಳುವುದು ಒಣಗುವುದು ಎಂದು. ಹಾಗೆ ಮಸಾಲೆ ಪದಾರ್ಥಗಳು ಕೂಡ. ಆದ್ದರಿಂದ ಅವುಗಳನ್ನು ಗಾಳಿಯಿಂದ ಬಚಾವ್ ಮಾಡಿ ಗಾಜಿನ ಡಬ್ಬಿಯಲ್ಲಿ ಹಾಕಿ ಇಡಿ ಇನ್ನೂ ಕೊನೆಯದಾಗಿ ಕತ್ತಲಿನಲ್ಲಿ ಸಂಗ್ರಹಣೆ ಮಾಡಿ. ನೀವು ನಿತ್ಯವೂ ಉಪಯೋಗಿಸದೆ ಇರುವ ಮಸಾಲೆ ಪದಾರ್ಥಗಳನ್ನು ಕತ್ತಲಿನಲ್ಲಿ ಶೇಖರಣೆ ಮಾಡಿ ಇಡುವುದು ಒಳ್ಳೆಯದು. ಏಕೆಂದರೆ ಅವುಗಳು ತುಂಬಾನೇ ಫ್ರೆಶ್ ಆಗಿ ಇರುತ್ತದೆ. ಮೇಲೆ ಹೇಳಿದಂತೆ ಶಾಖ ಸೂರ್ಯನ ಬೆಳಕು ಹಾಗೂ ಗಾಳಿಗೆ ಮಸಾಲೆ ಪದಾರ್ಥಗಳು ಕೆಡುವ ನೂರೆಂಟು ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಅವುಗಳನ್ನು ಇಂತಹ ನೈಸರ್ಗಿಕ ವಾತಾವರಣದಿಂದ ಸೂಕ್ಷ್ಮವಾಗಿ ಶೇಖರಣೆ ಮಾಡಿ. ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

WhatsApp Group Join Now

Leave a Reply

Your email address will not be published. Required fields are marked *