WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಮನೆಯ ಅಥವಾ ಆಸ್ತಿಯ ಇ.ಸಿ ಅನ್ನು ಹೇಗೆ ಪಡೆಯಬಹುದು ಮನೆಯಲ್ಲಿ ಕುಳಿದುಕೊಂಡು ಅಂತ ತಿಳಿಸಿಕೊಡುತ್ತೇವೆ ಬನ್ನಿ. ಮೊದಲನೆಯ ಹಂತ ಅಂದ್ರೆ ಸಾಮಾನ್ಯವಾಗಿ ನಾವು ಕ್ರೋಮ್ ಅಥವಾ ಬ್ರೋಸರ್ ಗೆ ಹೋಗಬೇಕು ಅಲ್ಲಿ ನೀವು ಕಾವೇರಿ ಆನ್ಲೈನ್ ಸೇವೆಗಳು ಅಂತ ಟೈಪ್ ಮಾಡಬೇಕು. ಆವಾಗ ನಿಮಗೆ ಕಾವೇರಿ ಸರ್ವೀಸ್ ಅಂತ ಮೊದಲಿಗೆ ಒಂದು ಮಾಹಿತಿ ಬರುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿ. ಮಾಡಿದ ನಂತ್ರ ನಿಮಗೆ ಒಂದು ಹೋಂ ಪೇಜ್ ಸಿಗುತ್ತದೆ. ಅಲ್ಲಿ ನೇಮ್ ಮತ್ತು ಪಾಸ್ವರ್ಡ್ ಇರುತ್ತದೆ. ಇದ್ದರೆ ನೀವು ಲಾಗಿನ್ ಆಗಬಹುದು. ಅಥವಾ ಕೆಳಗಡೆ ಸ್ಕ್ರಾಲ್ ಮಾಡಿದ್ರೆ ನಿಮಗೆ ನ್ಯೂ ರಿಜಿಸ್ಟರ್ ಯೂಸರ್ ಅಂತ ಬರುತ್ತದೆ ಅದರ ಮೇಲೆ ನೀವು ಕ್ಲಿಕ ಮಾಡಿ. ಮಾಡಿದ ನಂತ್ರ ಅದು ನಿಮ್ಮ ಮಾಹಿತಿಯನ್ನು ಕೇಳುತ್ತದೆ ಹೆಸರು ವಿಳಾಸ, ಮೊಬೈಲ್ ನಂಬರ್, ಇಮೇಲ್ ಐಡಿ ಆಧಾರ್ ಕಾರ್ಡ್ ನಂಬರ್ ವೋಟರ್ ಐಡಿ ನಿಮ್ಮ ಪರ್ಸಲ್ ಮಾಹಿತಿಯನ್ನು ಕೇಳುತ್ತದೆ ನಂತ್ರ ಕೊನೆಗೆ ಸೆಕ್ಯೂರಿಟಿ ಕೋಡ್ ಕೇಳುತ್ತದೆ ಆಮೇಲೆ ಕೆಳಗಡೆ ನೀಡಿರುವ ಲೆಟರ್ ಅನ್ನು ಹಾಕಿ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ.

ಕ್ಲಿಕ್ ಮಾಡಿದ ನಂತ್ರ ನಿಮ್ ರಿಜಿಸ್ಟರ್ಡ್ ಕಾವೇರಿ ಸರ್ವಿಸ್ ನಲ್ಲಿ ಆಗಿರುತ್ತದೆ. ತದ ನಂತರ ನಿಮ್ ಇಮೇಲ್ ಐಡಿ ಒಂದು ಲಿಂಕ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ಆಕ್ಟಿವೆಟ ಮಾಡಿಕೊಳ್ಳಬಹುದು. ಆಮೇಲೆ ನೀವು ಲಾಗಿನ್ ಆಗಲು ಇಷ್ಟ ಪಡುವುದಾದರೆ ನೀವು ನಿಮ್ ಹೆಸರಿನ ಪಟ್ಟಿಯಲ್ಲಿ ನೀವು ಇಮೇಲ್ ಐಡಿ ಹಾಕಿ. ಪಾಸ್ ವರ್ಡ್ ನಿಮ್ ಮೊಬೈಲ್ ಗೆ ಬರುತ್ತದೆ ಜೊತೆಗೆ ನಿಮಗೆ ಯಾವ ಪಾಸ್ವರ್ಡ್ ಬೇಕು ಅದನ್ನು ನೀವು ಧೃಢ ಪಡಿಸಿಕೊಂಡು ನೀವು ಲಾಗಿನ್ ಆಗಿ. ಲಾಗಿನ್ ಆಗಿ ನಂತ್ರ ಕಾವೇರಿ ಆನ್ಲೈನ್ ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನಿಮ್ಮ ಎಡಗಡೆಗೆ ಆನ್ಲೈನ್ ಇ.ಸಿ ಮತ್ತೆ ಆನ್ಲೈನ್ ಸಿಸಿ, ನೋ ಯುರ್ ಪ್ರಾಪರ್ಟಿ, ಅಂತ ತುಂಬಾನೇ ಹಲವಾರು ಆಪ್ಷನ್ ಗಳು ಬಂದಿರುತ್ತದೆ. ಆದ್ರೆ ನಮ್ಮ ಇಂದಿನ ಲೇಖನ ಆಗಿರುವುದು ಹೇಗೆ ಇ.ಸಿ ಸರ್ಟಿಫಿಕೇಟ್ ಪಡೆಯುವುದು ಅಂತ. ಅದರ ಬಗ್ಗೆ ಮುಂದೆ ತಿಳಿಯೋಣ. ಲಾಗಿನ್ ಆದ ಮೇಲೆ ಒಂದು ಪೇಜ್ ಓಪನ್ ಆಗುತ್ತದೆ ಅಂತ ಗೊತ್ತ ಅಲ್ವಾ ಸ್ನೇಹಿತರೇ ಅದರಲ್ಲಿ ಆನ್ಲೈನ್ ಇ.ಸಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ಮಂತ್ರ ಒಂದು ಪೇಜ್ ಓಪನ್ ಆಗುತ್ತದೆ. ಸರ್ಚ್ ಬೈ ಪ್ರಾಪರ್ಟಿ ನೇಮ್ ನಿಂದ ನೀವು ಶುರು ಮಾಡಬೇಕು. ನಂತ್ರ ದಿನಾಂಕ ಮಾಹಿತಿ ಇರುತ್ತದೆ. ನಂತ್ರ ನಿಮ್ಮ ಜಿಲ್ಲೆ ನಿಮ್ಮ ಊರು ಕೇಳುತ್ತದೆ. ಹೀಗೆ ಮಾಹಿತಿಗೆ ಅನುಗುಣವಾಗಿ ತುಂಬುತ್ತಾ ಬನ್ನಿ. ನಂತ್ರ ಪ್ರಾಪರ್ಟಿ ನಂಬರ್ ಅಂದ್ರೆ ನಿಮ್ ಸೇಲ್ ಡೀಡ್ ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಸರ್ವೇ ನಂಬರ್ ಸೈಟ್ ನಂಬರ್ ಯಾವುದು ಇರುತ್ತದೆ ಅದನ್ನು ಹಾಕಬೇಕು.

ಆಮೇಲೆ ಟೈಪ್ ಆಫ್ ಪ್ರಾಪರ್ಟಿ ಅಂತ ಕೇಳುತ್ತದೆ ಅದರಲ್ಲಿ ನೀವು ನಾನ್ ಅಗ್ರಿಕಲ್ಚರ್ ಅಂತ ಹಾಕಿ ಅಥವಾ ನೀವು ಯಾವುದು ಮಾಡುತ್ತೀರಿ ಅದನ್ನು ಹಾಕಿ. ಆಮೇಲೆ ಟೋಟಲ್ ಮೀಜೋರ್ಮೆಂಟ್ ಹಾಕಿ. ಶೆಡ್ಯೂಲ್ ಪ್ರಾಪರ್ಟಿ ನಲ್ಲಿ ಎಲ್ಲ ರೀತಿಯ ಮಾಹಿತಿ ಇರುತ್ತದೆ ಅದಕ್ಕೆ ಅನುಗುಣವಾಗಿ ನೀವು ಹಾಕಬಹುದು. ಕೊನೆಗೆ ಡಿಜಿಟಲ್ ಕಾಪಿ ಅಥವಾ ವಿ ವಾಂಟ್ ಡಿಜಿಟಲ್ ಕಾಪಿ ಅನ್ನೋ ಒಪ್ಷನ್ನ್ ಮೇಲೆ ಕ್ಲಿಕ್ ಮಾಡಿ. ಸರ್ಚ್ ಅಂತ ಕೊಡಿ. ನಿಮಗೆ ಇ.ಸಿ ಸರ್ಟಿಫಿಕೇಟ್ ಓಪನ್ ಆಗುತ್ತದೆ ನೀವು ಪ್ರಿಂಟ್ ಅಥವಾ ಡೌನ್ಲೋಡ್ ಮಾಡಿಕೊಳ್ಳಬಹುದು. ಇಲ್ಲವಾದ್ರೆ ಮುಂದೆ ಸ್ಕ್ರಾಲ್ ಮಾಡಿ ಚೆಕ್ ಬಾಕ್ಸ್ ಕೊಟ್ಟು ಪ್ರೋಸೀಡ್ ಅಂತ ಕೊಟ್ಟರೆ ನಿಮಗೆ ಈ ಸರ್ಟಿಫಿಕೇಟ್ ಸಿಗುತ್ತದೆ.
ಶುಭದಿನ.

WhatsApp Group Join Now

Leave a Reply

Your email address will not be published. Required fields are marked *