WhatsApp Group Join Now

ನಮಸ್ತೆ ನಮ್ಮ ಆತ್ಮೀಯ ಓದುಗರೇ, ಬೀಟ್ರೂಟ್ ಬಗ್ಗೆ ನಿಮಗೆ ಗೊತ್ತಿರಬಹುದು. ಬೀಟ್ರೂಟ್ ಅಲ್ಲಿ ಫೋಲೇಟ್ ಅಂದರೆ ವಿಟಮಿನ್ ಬಿ9 ತುಂಬಾ ಹೇರಳವಾಗಿದ್ದು, ಇದು ಹೊಸ ಜೀವಕೋಶಗಳು ಹುಟ್ಟಲು ಮತ್ತು ಇರುವ ಜೀವಕೋಶಗಳು ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಫೋಲೇಟ್ ವಿಟಮಿನ್ ರಕ್ತ ನಾಳಗಳ ಡ್ಯಮೆಜ್ ಅನ್ನು ಸರಿ ಮಾಡುತ್ತದೆ. ಮತ್ತು ಹೃದಯದ ಸಮಸ್ಯೆ ಮತ್ತು ಲಕ್ವಾ ಹೊಡೆಯುವುದರ ವಿರುದ್ಧ ಹೋರಾಡುತ್ತದೆ. ಬೀಟ್ರೂಟ್ ಅಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್ ಇದ್ದು ಇದು ದೇಹಕ್ಕೆ ಸೇರಿದ ಮೇಲೆ ನೈಟ್ರಿಕ್ ಆಕ್ಸೈಡ್ ಆಗಿ ಬದಲಾವಣೆ ಹೊಂದುತ್ತದೆ. ಇದರಲ್ಲಿ ಮ್ಯಾಗ್ನಿಷಿಯಂ, ಪೊಟ್ಯಾಸಿಯಂ, ಐರನ್ ಹಾಗೂ ವಿಟಮಿನ್ ಸಿ ತುಂಬಾ ಅಧಿಕ ಪ್ರಮಾಣದಲ್ಲಿ ಸಿಗುತ್ತವೆ ಹಾಗೂ ಇದರಲ್ಲಿ ಫೈಬರ್ ಅಥವಾ ನಾರಿನಂಶ ಅಧಿಕವಿರುವುದರಿಂದ ದೇಹದಲ್ಲಿನ ಮಲಿನ ಹೊರ ಹಾಕಲು ತುಂಬಾ ಸಹಕಾರಿ. ಬೀಟ್ರೂಟ್ ಜ್ಯೂಸ್ ನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೊಸ ರಕ್ತ ಕಣಗಳು ಹುಟ್ಟಿ ದೇಹದಲ್ಲಿ ರಕ್ತ ಸಂಚಾರ ಸುಗಮಾಗುತ್ತದೆ. ಬೀಟ್ರೂಟ್ ನಾವು ದಿನನಿತ್ಯ ಮೇಲಿಂದ ಮೇಲೆ ಬಳಕೆ ಮಾಡುವಂಥ ತರಕಾರಿ. ಆದ್ರೆ ನಾವು ಹಸಿಯಾಗಿ ಬಳಕೆ ಮಾಡುವುದರಿಂದ ಲಾಭ ಜಾಸ್ತಿ.

ಏಕೆಂದರೆ ಬೀಟ್ರೂಟ್ ಅಲ್ಲಿ ಎಲ್ಲಾ ತರಹದ ಪೋಷಕಾಂಶಗಳು ಖನಿಜಾಂಶಗಳು, ಜೀವಸತ್ವಗಳು ಹೆರಳವಾಗಿ ದೊರೆಯುತ್ತವೆ. ಇದು ರಕ್ತವನ್ನು ವೃದ್ಧಿ ಮಾಡುವ ವಿಶೇಷ ಶಕ್ತಿಯನ್ನು ಹೊಂದಿದೆ ಮತ್ತು ಬೇಕಾದಷ್ಟು ಸಮಸ್ಯೆಗೆ ಚಿಕಿತ್ಸೆಯನ್ನು ನೀಡುವಂತಹ ಗುಣ ಈ ಬೀಟ್ರೂಟ್ ಅಲ್ಲಿ ಇದೆ. ನಿಮ್ಮಲ್ಲಿ ಯಾರಿಗಾದರೂ ತಲೆಯಲ್ಲಿ ತುಂಬಾ ಹೊಟ್ಟಾಗುತ್ತಿದ್ದರೆ, ತಲೆಯಲ್ಲಿ ನವೆ ಆಗುತ್ತಾ ಇದೆ ಅಂದ್ರೆ ಬೀಟ್ರೂಟ್ ರಸ ತೆಗೆದು ಅದರ ಜೊತೆ ವಿನೆಗರ್ ಬೆರೆಸಿ ಸುಮ್ಮನೆ ನಿಮ್ಮ ತಲೆ ಬುಡಕ್ಕೆ ಹಚ್ಚಿ ನವೆ ಇಂದ ಸಂಪೂರ್ಣ ಪರಿಹಾರ ಸಿಗುತ್ತದೆ. ಬರೀ ತಲೆಯಲ್ಲಿ ಅಲ್ಲದೇ ದೇಹದ ಯಾವುದೇ ಭಾಗದಲ್ಲಿ ನವೆ ಆದರೂ ಈ ಮಿಶ್ರಣದ ಲೇಪನವನ್ನು ಹಚ್ಚಿದರೆ ಅದೂ ಗುಣವಾಗುತ್ತದೆ. ಇನ್ನೂ ಯಾರಿಗಾದರೂ ಲಿವರ್ ಅಥವ ಯಕೃತ್ ಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಅಂದರೆ ಯಕೃತ್ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಹಸಿವೆ ಸರಿಯಾಗಿ ಆಗ್ತಾ ಇಲ್ಲ ಎಂದಾಗ ಬೀಟ್ರೂಟ್ ನ್ನ ಹಸಿಯಾಗಿಯೇ ಸೇವಿಸಿದರೆ ಗುಣವಾಗುವುದು. ಹಸಿಯಾಗಿ ಅಥವಾ ಜ್ಯೂಸ್ ರೂಪದಲ್ಲಾದರೂ ಸೇವಿಸಿದರೆ ಯಕೃತ್ ಸರಿಯಾಗಿ ಕೆಲ್ಸ ಮಾಡಲು ಶುರು ಮಾಡುತ್ತದೆ. ಹೀಗೆ ಹಸಿಯಾಗಿ ತಿನ್ನುವುದರಿಂದ ಹಸಿವೆ ಕೂಡ ಚೆನ್ನಾಗಿ ಆಗಿ, ತಿಂದ ಆಹಾರ ಜೀರ್ಣವೂ ಆಗುತ್ತದೆ. ಇನ್ನೂ ಗರ್ಭಕೋಶದ ಸಮಸ್ಯೆ ಇದ್ದಾಗ ಇದೇ ಬೀಟ್ರೂಟ್ ಅನ್ನು ಹಸಿಯಾಗಿಯೇ ಸೇವಿಸಬೇಕು, ಇದನ್ನು ಯಾವುದೇ ರೂಪದಲ್ಲಿ ಆಹಾರದಲ್ಲಿ ಸೇವನೆ ಮಾಡುವುದರಿಂದ ಗರ್ಭಕೋಶದ ಯಾವುದೇ ಸಮಸ್ಯೆಗೆ ಪರಿಹಾರ ಸಿಕ್ಕುತ್ತದೆ.

ತುಂಬಾ ಮುಖ್ಯವಾದದ್ದು ಅಂದ್ರೆ ಹಿಂದೆಲ್ಲಾ 60 ಕ್ಕೆ ಅರುಳು ಮರುಳು ಎನ್ನುತ್ತಿದ್ದರೆ ಈಗ 20 ರ ವಯಸ್ಸಲ್ಲೇ ಮರೆವಿನ ಸಮಸ್ಯೆ ಕಾಡುತ್ತಿದೆ, ಯಾರನ್ನು ಏನೇ ಕೇಳಿದರೂ ನೆನಪಿಲ್ಲ, ಜ್ಞಾಪಕ ಇಲ್ಲ ಅಂತಿರ್ಥಾರೆ ಹಾಗಾಗಿ ತುಂಬಾ ಬೇಗ ಮರೆತು ಹೋಗುವ ಸಮಸ್ಯೆ ಏನಾದರೂ ಇದ್ದಲ್ಲಿ ಬೀಟ್ರೂಟ್ ಅದಕ್ಕೆ ರಾಮಬಾಣ ಆಗಿದೆ. ಕೆಲವೊಬ್ಬರಿಗೆ ಆಗ ನೆನಪಿಗೆ ಬಾರದಿದ್ದರೂ ಆಮೇಲೆ ಆದರೂ ನೆನಪಿಗೆ ಬರುತ್ತದೆ ಆದರೆ ಕೆಲವೊಬ್ಬರಿಗೆ ಸಂಪೂರ್ಣವಾಗಿ ಮರೆತೇ ಹೋಗಿಬಿಡುತ್ತಾರೆ. ಈ ಸಮಸ್ಯೆ ಇಂದ ಪರಿಹಾರ ಬೇಕೆಂದರೆ ಈ ಬೀಟ್ರೂಟ್ ನ್ನ ಹಸಿಯಾಗಿ ಮೊಸರು ಪಚಡಿ ರೀತಿಯಲ್ಲಿ ಸೇವಿಸಬೇಕು. ಮರೆಗುಳಿತನ ಹೋಗಲಾಡಿಸಲು ಬೀಟ್ರೂಟ್ ಸಹಕಾರಿ. ಹಾಗೂ ಆಮಶಂಕೆ ಇದ್ದವರು ಬೀಟ್ರೂಟ್ ಜ್ಯೂಸ್ ಜೊತೆಗೆ ಜೇನುತುಪ್ಪ, ನಿಂಬೆ ರಸ ಸೇರಿಸಿ ಕುಡಿಯಬಹುದು. ಹಾಗೂ ರಕ್ತದೊತ್ತಡ ಸಮಸ್ಯೆ ಇದ್ದವರು ಬೀಟ್ರೂಟ್ ಜ್ಯೂಸ್ ಅನ್ನು ಸತತವಾಗಿ 21 ದಿನಗಳ ಕಾಲ ಕುಡಿಯುವುದರಿಂದ ನಿಯಂತ್ರಣಕ್ಕೆ ತರಬಹುದು. ಬೀಟ್ರೂಟ್ ಮೊಸರು ಪಚಡಿ ತಯಾರಿಸುವ ವಿಧಾನ ನೋಡೋಣ. ಒಂದು ಬೀಟ್ರೂಟ್ ತುರಿದು ಅದಕ್ಕೆ ಒಂದು ಹಸಿ ಈರುಳ್ಳಿ, ಒಂದು ಬಟ್ಟಲು ಮೊಸರು ,ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈ ಕಲಸಿಟ್ಟ ಮಿಶ್ರಣಕ್ಕೆ ತುಪ್ಪದಲ್ಲಿ ಸಾಸಿವೆ, ಜೀರಿಗೆ, ಹಸಿ ಮೆಣಸಿನಕಾಯಿಯ ಒಗ್ಗರಣೆ ಕೊಟ್ಟರೆ ನಮ್ಮ ಹಸಿ ಬೀಟ್ರೂಟ್ ಮೊಸರು ಪಚಡಿ ರೆಡಿ. ಈ ಮಾಹಿತಿ ಇಷ್ಠವಾಗಿದ್ದರೆ ಒಮ್ಮೆ ಖಂಡಿತ ಟ್ರೈ ಮಾಡಿ ನೋಡಿ. ನಿಮ್ಮರಿವಗೂ ಶೇರ್ ಮಾಡಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *