ನಮಸ್ತೆ ಪ್ರಿಯ ಓದುಗರೇ, ಸಾವಿರಾರು ವರ್ಷಗಳಿಂದ ಜೇನುತುಪ್ಪವನ್ನು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೇನುತುಪ್ಪ ರುಚಿಯ ಜೊತೆಗೆ ಬಹಳಷ್ಟು ಪೌಷ್ಟಿಕ ಅಂಶಗಳನ್ನು ಒಳಗೊಂಡಿದೆ. ಆಯುರ್ವೇದದಲ್ಲಿ ಕೂಡ ಜೇನುತುಪ್ಪದಲ್ಲಿ ಅನೇಕ ಪ್ರಯೋಜನಗಳು ಇವೆ ಎಂದು ಉಲ್ಲೇಖಿಸಲಾಗಿದೆ. ಈ ಜೇನುತುಪ್ಪದಲ್ಲಿ ವಿಟಮಿನ್ ಏ, ಬಿ, ಸಿ, ಸೋಡಿಯಂ, ರಂಜಕ, ಅಯೋಡಿನ್, ಕಬ್ಬಿಣ, ಕ್ಯಾಲ್ಸಿಯಂ, ಇನ್ನೂ ಮುಂತಾದ ಪೌಷ್ಟಿಕಾಂಶಗಳು ಹೇರಳವಾಗಿವೆ. ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಈ ಜೇನುತುಪ್ಪವನ್ನು ನಾವು ಕೆಲವೊಂದಿಷ್ಟು ಆಹಾರದ ಜೊತೆಗೆ ಸೇವನೆ ಮಾಡಿದರೆ ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಹಾನಿ ಉಂಟು ಮಾಡಬಹುದು. ಹೌದು ಸ್ನೇಹಿತರೆ ಈ ಜೇನುತುಪ್ಪದ ಜೊತೆಗೆ ಕೆಲವು ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿ ಉಂಟಾಗಬಹುದು. ಹಾಗಿದ್ದರೆ ಈ ಜೇನುತುಪ್ಪವನ್ನು ಯಾವೆಲ್ಲ ಆಹಾರದ ಜೊತೆಗೆ ಸೇವನೆ ಮಾಡಬಾರದು ಅಂತ ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಮೊದಲನೆಯದಾಗಿ ನೀವೇನಾದರೂ ತೂಕ ಕಡಿಮೆ ಮಾಡಿಕೊಳ್ಳುವ ಯತ್ನದಲ್ಲಿದ್ದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಹಿಂಡಿ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ. ಹೌದು ಸ್ನೇಹಿತರೆ ಜೇನುತುಪ್ಪವನ್ನು ಎಂದಿಗೂ ಕೂಡ ಬಿಸಿ ನೀರಿಗೆ ಬೆರೆಸಿ ಸೇವನೆ ಮಾಡಬಾರದು.
ನೀವು ಬಿಸಿ ನೀರಿಗೆ ಜೇನುತುಪ್ಪವನ್ನು ಹಾಕಿಕೊಂಡು ಕುಡಿದರೆ ಜೇನುತುಪ್ಪದಲ್ಲಿ ಇರುವ ಉತ್ತಮವಾದ ಪೌಷ್ಟಿಕಂಶಗಳು ಎಲ್ಲವೂ ಕೂಡ ನಾಶ ಆಗುತ್ತವೆ. ಹೀಗಾಗಿ ಬಿಸಿ ನೀರಿಗೆ ನೀವು ಜೇನುತುಪ್ಪವನ್ನು ಹಾಕಿಕೊಂಡು ಕುಡಿದರೆ ನಿಮಗೆ ಯಾವುದೇ ರೀತಿ ಪ್ರಯೋಜನ ಆಗುವುದಿಲ್ಲ. ಇನ್ನೂ ಇದರಿಂದ ನಿಮಗೆ ನಷ್ಟವಾಗಬಹುದು. ಕೆಲವರಿಗೆ ಈ ಬಿಸಿ ನೀರಿಗೆ ಜೇನುತುಪ್ಪವನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಉಂಟಾಗಬಹುದು, ಹೊಟ್ಟೆ ನೋವಾಗಬಹುದು. ಈ ರೀತಿ ಆದಂತಹ ಸಮಸ್ಯೆಗಳು ಬರುತ್ತವೆ. ಹಾಗಾಗಿ ನೀವು ಬಿಸಿ ನೀರಿಗೆ ಜೇನುತುಪ್ಪವನ್ನು ಹಾಕಿಕೊಂಡು ಕುಡಿಯಬೇಡಿ. ಇನ್ನೂ ಕೆಲವರು ಬಿಸಿ ಬಿಸಿಯಾಗಿರುವ ಆಹಾರ ಪದಾರ್ಥಗಳ ಜೊತೆಗೆ ಈ ಜೇನುತುಪ್ಪವನ್ನು ಹಾಕಿಕೊಂಡು ಸೇವನೆ ಮಾಡುತ್ತಾರೆ. ಆದರೆ ಬಿಸಿ ಪದಾರ್ಥಗಳೊಂದಿಗೆ ಜೇನುತುಪ್ಪವನ್ನು ಸೇವನೆ ಮಾಡುವುದರಿಂದ ಇದು ಹಾನಿಕಾರಕ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಜೇನುತುಪ್ಪವೂ ನೈಸರ್ಗಿಕವಾಗಿ ಬಿಸಿಯಾಗಿರುತ್ತದೆ. ನೀವು ಬಿಸಿ ಆಗಿರುವಂತಹ ಆಹಾರ ಪದಾರ್ಥಗಳಿಗೆ ಈ ಬಿಸಿಯಾಗಿರುವ ಜೇನುತುಪ್ಪವನ್ನು ಹಾಕಿಕೊಂಡು ಸೇವನೆ ಮಾಡಿದರೆ ಜೇನುತುಪ್ಪದಲ್ಲಿರುವ ಒಳ್ಳೆಯ ಗುಣಗಳು ನಾಶ ಆಗಿ ಇದು ವಿಷವಾಗಿ ಪರಿವರ್ತನೆ ಆಗಬಹುದು. ಈ ರೀತಿಯಾಗಿ ನೀವು ಬಿಸಿ ಪದಾರ್ಥದೊಂದಿಗೆ ಜೇನುತುಪ್ಪವನ್ನು ಸೇವನೆ ಮಾಡುವುದರಿಂದ ನಿಮಗೆ ಅನೇಕ ರೀತಿಯ ಕಾಯಿಲೆಗಳು ಅದರಲ್ಲಿ ವಿಶೇಷವಾಗಿ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಬರಬಹುದು.
ಹಾಗಾಗಿ ಬಿಸಿಯಾದ ಆಹಾರ ಪದಾರ್ಥದ ಜೊತೆಗೆ ಎಂದಿಗೂ ಕೂಡ ಈ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಂಡು ಸೇವನೆ ಮಾಡಬೇಡಿ. ಇನ್ನೂ ಕೆಲವರು ಸಕ್ಕರೆಯ ಬದಲಾಗಿ ಟೀ ಕಾಫಿ ಜೊತೆಗೆ ಈ ಜೇನುತುಪ್ಪವನ್ನು ಹಾಕಿಕೊಂಡು ಕುಡಿಯುತ್ತಾರೆ. ಇದರಿಂದ ಅವರ ತೂಕ ಹೆಚ್ಚಾಗುವುದಿಲ್ಲ ಎಂದು ಕೆಲವರು ಭಾವಿಸಿರುತ್ತಾರೆ. ಆದರೆ ಚಹಾ ಅಥವಾ ಕಾಫಿಯೊಂದಿಗೆ ಈ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಇದು ನಿಮಗೆ ಹಾನಿ ಮಾಡಬಹುದು. ಏಕೆಂದರೆ ಚಹಾ ಅಥವಾ ಕಾಫಿಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗಬಹುದು. ಇದು ನಿಮ್ಮ ಒತ್ತಡಕ್ಕೂ ಕೂಡ ಕಾರಣ ಆಗಬಹುದು. ಇನ್ನೂ ಮೂಲಂಗಿ ಮತ್ತು ಜೇನುತುಪ್ಪವನ್ನು ಎಂದಿಗೂ ಕೂಡ ಒಟ್ಟಾಗಿ ತಿನ್ನಬೇಡಿ, ಏಕೆಂದರೆ ಮೂಲಂಗಿ ಯೊಂದಿಗೆ ಜೇನುತುಪ್ಪವನ್ನು ಸೇವನೆ ಮಾಡಿದರೆ ಇದು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡಬಹುದು. ನಮ್ಮ ದೇಹದಲ್ಲಿ ಇದು ವಿಷವಾಗಿ ಪರಿವರ್ತನೆ ಆಗಬಹುದು. ಹಾಗಾಗಿ ನೀವೇನಾದರೂ ಮೂಲಂಗಿಯನ್ನು ಸೇವನೆ ಮಾಡಿದರೆ ಎರೆಡು ಗಂಟೆಗಳ ಕಾಲ ಬಿಟ್ಟು ಜೇನುತುಪ್ಪವನ್ನು ಸೇವನೆ ಮಾಡಿ. ಒಂದುವೇಳೆ ಜೇನುತುಪ್ಪವನ್ನಾ ಸೇವನೆ ಮಾಡಿದರೆ ಎರೆಡು ಗಂಟೆಗಳ ಕಾಲ ನಂತರ ಈ ಮೂಲಂಗಿಯನ್ನು ಸೇವನೆ ಮಾಡಿ. ಜೇನುತುಪ್ಪ ದಿಂದ ಹಲವಾರು ಪ್ರಯೋಜನಗಳು ಇವೆ ಆದರೆ ಅದನ್ನು ನಾವು ಸರಿಯಾಗಿ ಬಳಕೆ ಮಾಡಿಕೊಂಡರೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಆಗುತ್ತದೆ. ನೋಡಿದಿರಲ್ಲಾ ಸ್ನೇಹಿತರೆ ಜೇನುತುಪ್ಪದ ಅವಾಂತರ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.