ನಮಸ್ತೆ ಪ್ರಿಯ ಓದುಗರೇ, ಮರೆವಿನ ಕಾಯಿಲೆ ಇದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಡುವ ಸಮಸ್ಯೆ ಆಗಿದೆ. ವಯಸ್ಸು ಹೆಚ್ಚುತ್ತಿದ್ದಂತೆ ಮರೆವು ಕೂಡ ಹೆಚ್ಚುತ್ತಲೇ ಹೋಗುತ್ತದೆ. ಮುಖ್ಯವಾಗಿ ವಯಸ್ಕರಲ್ಲಿ ಕಾಣುವ ಈ ಕಾಯಿಲೆಯನ್ನು ಅಲ್ಜೈಮರ್ ಅಂತ ಕರೆಯುತ್ತಾರೆ. ಮರೆವಿನ ಸಮಸ್ಯೆಯು ಸುಮಾರು 50 ವರ್ಷ ದಾಟಿದ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ಬರುತ್ತಿದ್ದಂತೆ ವ್ಯಕ್ತಿಯ ಬುದ್ಧಿಶಕ್ತಿ, ಜ್ಞಾಪಕ ಶಕ್ತಿ, ವಿಷಯಗಳ ಗ್ರಹಿಕೆ ಮಾಡುವುದು ಕಲಿಕೆಯ ಹಾವ ಭಾವಗಳು ಕ್ರಿಯಾಶೀಲತೆ ಭಾವನಾತ್ಮಕ ನಡುವಳಿಕೆಯಲ್ಲಿ ಆನೆ ಆಡಿನಷ್ಟು ವ್ಯತ್ಯಾಸ ಕಂಡು ಬರುತ್ತದೆ. ಅಲ್ಜೈಮರ್ ಸಮಸ್ಯೆ ಇದ್ದ ವ್ಯಕ್ತಿಯು ತಾನು ಏನು ಮಾಡುತ್ತಿದ್ದೇನೆ ಅನ್ನುವ ಪರಿಜ್ಞಾನ ಕೂಡ ಅವರಿಗೆ ಇರುವುದಿಲ್ಲ. ಅಷ್ಟೊಂದು ದೀರ್ಘಕಾಲೀನ ಸಮಸ್ಯೆ ಇದಾಗಿದೆ. ನಮ್ಮ ಭಾರತ ದೇಶದಲ್ಲಿ ಸುಮಾರು ನಾಲ್ಕು ದಶಲಕ್ಷ ಜನರು ಈ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಅಂತ ಪತ್ತೆ ಹಚ್ಚಲಾಗಿದೆ. ಮರೆವಿನ ಕಾಯಿಲೆ ಬಂದರೆ ವ್ಯಕ್ತಿ ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪ ಮಾಡಿಕೊಳ್ಳುತ್ತಾನೆ. ಯಾವುದೇ ವಿಷಯಗಳನ್ನು ಆತನು ಸಹಿಸುವುದಿಲ್ಲ. ಖಿನ್ನತೆಗೆ ಒಳಗಾಗುತ್ತಾನೆ, ಒತ್ತಡಕ್ಕೆ ಸಿಲುಕಿ ತಾನು ಏನು ಮಾಡುತ್ತಿದ್ದೇನೆ ಅನ್ನುವುದನ್ನು ಮರೆತು ನೀಡುತ್ತಾನೆ ಜೊತೆಗೆ ತನ್ನ ಜೀವಕ್ಕೂ ಕೂಡ ಹಾನಿ ಮಾಡಿಕೊಳ್ಳುತ್ತಾನೆ ಅನ್ನುವ ಕೆಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ ಮಿತ್ರರೇ ಅಲ್ವಾ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಈ ಮರೆವಿನ ಸಮಸ್ಯೆಯನ್ನು ಹೋಗಲಾಡಿಸಲು ನಾವು ಯಾವ ತರಕಾರಿಯನ್ನು ತಿನ್ನಬೇಕು ಅಂತ ತಿಳಿಯೋಣ.
ಮೊದಲಿಗೆ ಬ್ರೋಕಲಿನ್ ಅಥವಾ ಕೋಸುಗಡ್ಡೆ. ಇದರಲ್ಲಿ ಹಲವಾರು ಪೌಷ್ಟಿಕಾಂಶಗಳು ಒಳಗೊಂಡಿದ್ದು ಇದು ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸುತ್ತದೆ. ಕೋಸುಗಡ್ಡೆಯಲ್ಲಿ ವಿಟಮಿನ್ ಕೆ ಅಂಶ ಇರುವುದರಿಂದ ಇದು ಒಳ್ಳೆಯ ನಡುವಳಿಕೆಗಳು ಸಾಮರ್ಥ್ಯವನ್ನು ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಖೋಲೈನ್ ಎಂಬ ಅಂಶ ನೆನಪಿನ ಶಕ್ತಿಯನ್ನು ಉತ್ತೇಜನ ಮಾಡುತ್ತದೆ. ದೊಡ್ಡದಾದ ಕೋಸುಗಡ್ಡೆ ತಿನ್ನುವುದರಿಂದ ನೀವು ಇನ್ನೊಬ್ಬರಿಗಿಂತ ಹೆಚ್ಚು ಮೆದುಳಿನ ಶಕ್ತಿ ಸಾಮರ್ಥ್ಯವನ್ನು ಹೊಂದುತ್ತೀರಿ. ಎರಡನೆಯದು ಮೀನು, ಮೀನು ಇಲ್ಲದೆ ಆಹಾರವು ಅಪರಿಪೂರ್ಣ ಅಂತ ಹೇಳಿದರೆ ತಪ್ಪಾಗಲಾರದು. ಇದು ಒಮೆಗಾ ತ್ರಿ ಫ್ಯಾಟಿ ಆಸಿಡ್ ಮೂಲವನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ಮನಸ್ಸನ್ನು ತೀಕ್ಷ್ಣವಾಗಿ ಸೂಕ್ಷ್ಮವಾಗಿ ಶಾಂತವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಮೀನು ತಿನ್ನಲು ಕಷ್ಟ ಆಗುವವರು ಅಗಸೆ ಬೀಜವನ್ನು ಸೇವನೆ ಮಾಡಬಹುದು. ಇನ್ನೂ ಮೂರನೆಯದು ಹಾಲು ಕುಡಿಯುವುದು. ಹಾಲು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ನಮಗೆ ಲಾಭಗಳು ಆಗುತ್ತವೆ ಹೊರತು ನಷ್ಟವೇನೂ ಆಗುವುದಿಲ್ಲ. ದುಷ್ಟ ರೋಗವಾದ ಅಲ್ಜೈಮರ್ ಮತ್ತು ಮರೆವಿನ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಹಾಲು ಸಂಪೂರ್ಣವಾಗಿ ನೆರವು ನೀಡುತ್ತದೆ. ವೃದ್ಧಾಪ್ಯದಲ್ಲಿ ಬಿಡುಗಡೆ ಆಗುವ ಗ್ಲುಟಿತಿಯಾನ್ ಮೆದುಳನ್ನು ಬದಲಾಯಿಸುತ್ತದೆ.
ಮೆದುಳಿನ ಒತ್ತಡವನ್ನು ಮತ್ತು ಮೆದುಳಿಗೆ ಆಗುವ ಹಾನಿಯನ್ನು ತಡೆದು ಮೆದುಳಿನ ಶಕ್ತಿಯನ್ನು ಹೆಚ್ಚಿಸಿ ಮರೆವಿನ ಸಮಸ್ಯೆಯಿಂದ ಮುಕ್ತಿಯನ್ನು ನೀಡುತ್ತದೆ. ಆದ್ದರಿಂದ ದಿನಕ್ಕೆ ಮೂರು ಗ್ಲಾಸ್ ಹಾಲನ್ನು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಬೀನ್ಸ್ ಮತ್ತು ದ್ವಿದಳ ಧಾನ್ಯಗಳ ಆಲ್ಜೈಮರ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಇರುವ ಪೊಟ್ಯಾಶಿಯಂ ಕ್ಯಾಲ್ಸಿಯಂ ಪೋಲಾಟ್ ಅಂಶಗಳು ಈ ಸಮಸ್ಯೆಯನ್ನು ದೂರ ಮಾಡುತ್ತವೆ. ಇವುಗಳು ಮೆದುಳಿನ ಕಾರ್ಯಕ್ಕೆ ಉತ್ತಮ. ಮರೆವಿನ ಕಾಯಿಲೆ ವಿರುದ್ಧ ಹೋರಾಡಿ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಬೀನ್ಸ್ ಮತ್ತು ದ್ವಿದಳ ಧಾನ್ಯಗಳು. ಇನ್ನೂ ವಾರದಲ್ಲಿ ಎರಡು ಬಾರಿ ಸಾಂಬಾರ್ ಮಾಡಿ ಸೇವನೆ ಮಾಡಿ. ಇದರಲ್ಲಿ ಇರುವ ಅರಿಶಿಣ ಬೆಳ್ಳುಳ್ಳಿ ಅನೇಕ ಮಸಾಲೆ ಪದಾರ್ಥಗಳು ಇರುವುದರಿಂದ ಇದು ಮಾನಸಿಕ ಆರೋಗ್ಯಕ್ಕೆ ಸೂಕ್ತವಾಗಿದೆ. ಈ ಅದ್ಭುತವಾದ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.