ನಮಸ್ತೇ ಪ್ರಿಯ ಓದುಗರೇ, ನೂರಾರು ವರ್ಷಗಳಿಂದ ಏಲಕ್ಕಿ ನಮ್ಮ ಬಳಕೆಯಲ್ಲಿದೆ. ಜಗತ್ತಿನಲ್ಲಿ ಸಿಗುವ ಬಹುತೇಕ ದುಬಾರಿ ಆಹಾರ ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ನಿಲ್ಲುತ್ತದೆ. ಏಲಕ್ಕಿ ಮಸಾಲೆ ಪದಾರ್ಥಗಳಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದು ಅಡುಗೆಯ ಸುಗಂಧವನ್ನು ಹೆಚ್ಚಿಸುತ್ತದೆ. ಜೊತೆಗೆ ಆಹಾರದ ರುಚಿಯನ್ನು ಉತ್ತಮಗೊಳಿಸುವುದರ ಜೊತೆಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ರಾತ್ರಿ ಮಲಗುವ ಮುನ್ನ ಎರಡು ಏಲಕ್ಕಿ ತಿಂದು ಮಲಗಿದರೆ ಆಗುವ ಲಾಭಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಏಲಕ್ಕಿ ತಿನ್ನುವುದರಿಂದ ಆಗುವ ಲಾಭಗಳನ್ನು ನೀವು ಅರಿತು ಕೊಂಡರೆ ಇಂದಿನಿಂದಲೇ ಏಲಕ್ಕಿ ತಿನ್ನಲು ಶುರು ಮಾಡುತ್ತೀರಿ ಹಾಗಾದ್ರೆ ಬನ್ನಿ ಲಾಭಗಳನ್ನು ಒಂದೊಂದಾಗಿ ತಿಳಿಯೋಣ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಮಸಾಲೆ ಡಬ್ಬಿಯಲ್ಲಿ ಏಲಕ್ಕಿ ರಾರಾಜಿಸುತ್ತದೆ. ಹಾಗು ಅಡುಗೆಯಲ್ಲಿ ಪ್ರತಿಯೊಬ್ಬರೂ ಏಲಕ್ಕಿ ತಪ್ಪದೇ ಬಳಸಿಯೇ ಬಳಸುತ್ತಾರೆ. ಇನ್ನು ಏಲಕ್ಕಿ ಉಪಯೋಗದ ಬಗ್ಗೆ ಹೇಳುವುದಾದರೆ ನೆಗಡಿ ಕೆಮ್ಮು ಶೀತ ಗಂಟಲು ಕಟ್ಟುವಿಕೆ ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಲು ಏಲಕ್ಕಿಯನ್ನು ಬಳಸುತ್ತಾರೆ. ಇನ್ನೂ ಚರ್ಮದಲ್ಲಿ ತುರಿಕೆ, ಕಡಿತ, ಕೆಂಪು ಆಗುವುದು ಈ ಎಲ್ಲ ಸಮಸ್ಯೆಗಳನ್ನು ಏಲಕ್ಕಿ ತಿಂದು ದೂರ ಮಾಡಬಹುದು.

ಇನ್ನು ಏಲಕ್ಕಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೇ ಹಾಗೂ ಹೊಟ್ಟೆಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳನ್ನು ದೂರವಿಡಲು ಏಲಕ್ಕಿ ತುಂಬಾನೇ ಸಹಾಯ ಮಾಡುತ್ತದೆ. ಆಯುರ್ವೇದದಲ್ಲಿ ಏಲಕ್ಕಿ ಅಡುಗೆಗೆ ಮಾತ್ರವಲ್ಲದೇ ರೋಗ ನಿವಾರಕವಾಗಿ ಕೆಲಸವನ್ನು ನಿರ್ವಹಿಸುತ್ತದೇ ಅಂತ ಸಾಬೀತಾಗಿದೆ. ಆಯುರ್ವೇದದಲ್ಲಿ ಯಾವುದೇ ಒಂದು ವಸ್ತು ಇರಲಿ ರೋಗಗಳಿಂದ ದೂರ ಮಾಡುವುದರ ಜೊತೆಗೆ ರೋಗಗಳು ಬರದಂತೆ ಮುಂಜಾಗ್ರತೆಯನ್ನು ಒದಗಿಸುತ್ತದೆ. ಆಯುರ್ವೇದದಲ್ಲಿ ಏಲಕ್ಕಿಯನ್ನು ತಿಂದು ಯಾವ ರೀತಿ ರೋಗಗಳಿಂದ ದೂರವಿರಬಹುದು ಅಂತ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಏಲಕ್ಕಿಯನ್ನು ಚೆನ್ನಾಗಿ ಪುಡಿ ಮಾಡಿ ಮಕ್ಕಳಿಗೆ ನೀಡುವುದರಿಂದ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ರಾತ್ರಿ ಹೊತ್ತು ಮಲಗುವ ಮುನ್ನ ಏಲಕ್ಕಿಯನ್ನು ತಿನ್ನುವುದರಿಂದ ನಾವು ಸೇವಿಸಿದ ಆಹಾರ ಜೀರ್ಣ ವಾಗಲು ಈ ಏಲಕ್ಕಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇನ್ನು ಗಂಟಲಿನ ಉರಿ ಮತ್ತು ಹೊಟ್ಟೆಯ ಉರಿಯನ್ನು ಏಲಕ್ಕಿ ನೀಗಿಸುತ್ತದೆ.

ಇನ್ನೂ ಏಲಕ್ಕಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳುತ್ತಾರೆ. ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಅಷ್ಟೇ ಅಲ್ಲದೇ ಹೊಟ್ಟೆಯಲ್ಲಿನ ಬಾವು ಉಬ್ಬರವನ್ನು ಕಡಿಮೆ ಮಾಡುತ್ತದೆ. ಇನ್ನು ಅಸಿಡಿಟಿ ಗ್ಯಾಸ್ಟ್ರಿಕ್ ಹೊಟ್ಟೆ ಕೆಡುವುದು ಈ ಬಗೆಯ ಎಲ್ಲ ಸಮಸ್ಯೆಗಳನ್ನು ಏಲಕ್ಕಿ ದೂರ ಮಾಡಲು ಪರಿಣಾಮ ಕಾರಿಯಾಗಿ ಕೆಲಸವನ್ನು ನಿರ್ವಹಿಸುತ್ತದೆ. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಏಲಕ್ಕಿ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಕೆಲವರು ಊಟವಾದ ಬಳಿ ಸೋಂಪು ಮತ್ತು ಏಲಕ್ಕಿ ತಿನ್ನುವ ರೂಢಿಯನ್ನು ಬೆಳೆಸಿ ಕೊಂಡಿರುತ್ತಾರೆ. ಹೀಗೆ ಯಾಕೆ ಮಾಡುತ್ತಾರೆ ಅಂದರೆ ಸೇವಿಸಿದ ಆಹಾರವು ಚೆನ್ನಾಗಿ ಜೀರ್ಣವಾಗಬೇಕು ಅನ್ನುವ ಉದ್ದೇಶದದಿಂದ ಹೋಟೆಲ್ ಗಳಲ್ಲಿ ಮುಖ್ಯವಾಗಿ ಕೊಡುತ್ತಾರೆ. ಏಕೆಂದರೆ ಇದು ಜೀರ್ಣಶಕ್ತಿಯನ್ನಿ ಅಭಿವೃದ್ಧಿ ಮಾಡುವ ಶಕ್ತಿಯನ್ನು ಏಲಕ್ಕಿ ಹೊಂದಿದೆ. ಅಷ್ಟೇ ಅಲ್ಲದೇಇದರಲ್ಲಿ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಸೋಂಕುಗಳನ್ನು ತಡೆ ಹಾಕುವ ಆಂಟಿ ಮೈಕ್ರೋಬಿಯಲ್ ಲಕ್ಷಣಗಳು ಸಿಗುತ್ತವೆ.

Leave a Reply

Your email address will not be published. Required fields are marked *