ನಮಸ್ತೇ ಪ್ರಿಯ ಓದುಗರೇ, ನೂರಾರು ವರ್ಷಗಳಿಂದ ಏಲಕ್ಕಿ ನಮ್ಮ ಬಳಕೆಯಲ್ಲಿದೆ. ಜಗತ್ತಿನಲ್ಲಿ ಸಿಗುವ ಬಹುತೇಕ ದುಬಾರಿ ಆಹಾರ ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ನಿಲ್ಲುತ್ತದೆ. ಏಲಕ್ಕಿ ಮಸಾಲೆ ಪದಾರ್ಥಗಳಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದು ಅಡುಗೆಯ ಸುಗಂಧವನ್ನು ಹೆಚ್ಚಿಸುತ್ತದೆ. ಜೊತೆಗೆ ಆಹಾರದ ರುಚಿಯನ್ನು ಉತ್ತಮಗೊಳಿಸುವುದರ ಜೊತೆಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ರಾತ್ರಿ ಮಲಗುವ ಮುನ್ನ ಎರಡು ಏಲಕ್ಕಿ ತಿಂದು ಮಲಗಿದರೆ ಆಗುವ ಲಾಭಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ.

ಏಲಕ್ಕಿ ತಿನ್ನುವುದರಿಂದ ಆಗುವ ಲಾಭಗಳನ್ನು ನೀವು ಅರಿತು ಕೊಂಡರೆ ಇಂದಿನಿಂದಲೇ ಏಲಕ್ಕಿ ತಿನ್ನಲು ಶುರು ಮಾಡುತ್ತೀರಿ ಹಾಗಾದ್ರೆ ಬನ್ನಿ ಲಾಭಗಳನ್ನು ಒಂದೊಂದಾಗಿ ತಿಳಿಯೋಣ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಮಸಾಲೆ ಡಬ್ಬಿಯಲ್ಲಿ ಏಲಕ್ಕಿ ರಾರಾಜಿಸುತ್ತದೆ. ಹಾಗು ಅಡುಗೆಯಲ್ಲಿ ಪ್ರತಿಯೊಬ್ಬರೂ ಏಲಕ್ಕಿ ತಪ್ಪದೇ ಬಳಸಿಯೇ ಬಳಸುತ್ತಾರೆ. ಇನ್ನು ಏಲಕ್ಕಿ ಉಪಯೋಗದ ಬಗ್ಗೆ ಹೇಳುವುದಾದರೆ ನೆಗಡಿ ಕೆಮ್ಮು ಶೀತ ಗಂಟಲು ಕಟ್ಟುವಿಕೆ ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಲು ಏಲಕ್ಕಿಯನ್ನು ಬಳಸುತ್ತಾರೆ.

ಇನ್ನೂ ಚರ್ಮದಲ್ಲಿ ತುರಿಕೆ, ಕಡಿತ, ಕೆಂಪು ಆಗುವುದು ಈ ಎಲ್ಲ ಸಮಸ್ಯೆಗಳನ್ನು ಏಲಕ್ಕಿ ತಿಂದು ದೂರ ಮಾಡಬಹುದು. ಇನ್ನು ಏಲಕ್ಕಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೇ ಹಾಗೂ ಹೊಟ್ಟೆಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳನ್ನು ದೂರವಿಡಲು ಏಲಕ್ಕಿ ತುಂಬಾನೇ ಸಹಾಯ ಮಾಡುತ್ತದೆ. ಆಯುರ್ವೇದದಲ್ಲಿ ಏಲಕ್ಕಿ ಅಡುಗೆಗೆ ಮಾತ್ರವಲ್ಲದೇ ರೋಗ ನಿವಾರಕವಾಗಿ ಕೆಲಸವನ್ನು ನಿರ್ವಹಿಸುತ್ತದೇ ಅಂತ ಸಾಬೀತಾಗಿದೆ. ಆಯುರ್ವೇದದಲ್ಲಿ ಯಾವುದೇ ಒಂದು ವಸ್ತು ಇರಲಿ ರೋಗಗಳಿಂದ ದೂರ ಮಾಡುವುದರ ಜೊತೆಗೆ ರೋಗಗಳು ಬರದಂತೆ ಮುಂಜಾಗ್ರತೆಯನ್ನು ಒದಗಿಸುತ್ತದೆ.

ಆಯುರ್ವೇದದಲ್ಲಿ ಏಲಕ್ಕಿಯನ್ನು ತಿಂದು ಯಾವ ರೀತಿ ರೋಗಗಳಿಂದ ದೂರವಿರಬಹುದು ಅಂತ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಏಲಕ್ಕಿಯನ್ನು ಚೆನ್ನಾಗಿ ಪುಡಿ ಮಾಡಿ ಮಕ್ಕಳಿಗೆ ನೀಡುವುದರಿಂದ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ರಾತ್ರಿ ಹೊತ್ತು ಮಲಗುವ ಮುನ್ನ ಏಲಕ್ಕಿಯನ್ನು ತಿನ್ನುವುದರಿಂದ ನಾವು ಸೇವಿಸಿದ ಆಹಾರ ಜೀರ್ಣ ವಾಗಲು ಈ ಏಲಕ್ಕಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಇನ್ನು ಗಂಟಲಿನ ಉರಿ ಮತ್ತು ಹೊಟ್ಟೆಯ ಉರಿಯನ್ನು ಏಲಕ್ಕಿ ನೀಗಿಸುತ್ತದೆ. ಇನ್ನೂ ಏಲಕ್ಕಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳುತ್ತಾರೆ. ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತ
ಶುಭದಿನ.

Leave a Reply

Your email address will not be published. Required fields are marked *