ಗೋಣಿಸೊಪ್ಪು ಹುಳಿ, ಸಿಹಿ ರಸ ರುಚಿ ಉಳ್ಳದಾಗಿದೆ. ಇದು ವಾತ, ಪಿತ್ತ, ಕಫಗಳನ್ನು ಸಮತೋಲನದಲ್ಲಿ ಇಡುವುದು. ರಕ್ತವನ್ನು ಶುದ್ಧಿ ಮಾಡುವುದು. ಮೂತ್ರದಲ್ಲಿ ಕಲ್ಲು, ಅಶ್ಮರಿ ಮತ್ತು ಇತರೆ ಮೂತ್ರ ದೋಷಗಳನ್ನು ನಿವಾರಿಸುವುದು. ಮೆಹವ್ಯಾಧಿ, ಮೂಲ ವ್ಯಾಧಿಯವರಿಗೆ ಹಿತಕರವಾದುದು.
ರಕ್ತ ಶುದ್ಧಿ, ದೇಹದ ತಂಪಿಗೆ: ಗೋಣಿಸೊಪ್ಪಿನೊಂದಿಗೆ ತೊಗರಿಬೇಳೆ ಇಲ್ಲವೇ ಹೆಸರುಕಾಳುಗಳನ್ನು ಬೇಯಿಸಿ ತಯಾರಿಸಿದ ಪಲ್ಯ, ಸಾರು, ಕೂಟುಗಳನ್ನು ಆಹಾರದೊಂದಿಗೆ ಸೇವಿಸುತ್ತಿದ್ದರೆ, ರಕ್ತ ಶುದ್ಧಿಯಾಗುವುದು, ದೇಹದಲ್ಲಿನ ಉಷ್ಣತೆ ನಿವಾರಣೆಯಾಗುವುದು.
ಮೂತ್ರದ ತಡೆ, ಮೂತ್ರದಲ್ಲಿ ಕಲ್ಲು-ಅಶ್ಮರಿ ಮತ್ತು ಇತರೆ ಮೂತ್ರ ದೋಷಗಳ ನಿವಾರಣೆ: ೫-೬ ಹಿಡಿ ಸೊಪ್ಪನ್ನು ಜಜ್ಜಿ ೪ ಕಪ್ಪು ನೀರಿನಲ್ಲಿ ಕಷಾಯ ಕಾಯಿಸಿ, ಒಂದು ಕಪ್ಪಿಗೆ ಬಗ್ಗಿಸಿಕೊಂಡು, ಒಂದಿಷ್ಟು ಜೇನು ಅಥವಾ ಸಕ್ಕರೆ ಬೇರೆಯಿಸಿ ಬೆಳೆಗ್ಗೆನೇ ಕುಡಿಯುವುದರಿಂದ ದೇಹದಲ್ಲಿನ ಉಷ್ಣತೆಕಮ್ಮಿಯಾಗಿ ಮೂತ್ರವು ಸರಾಗವಾಗಿ ವಿಸರ್ಜನೆಯಾಗಿ, ಮೂತ್ರ ದೋಷಗಳೆಲ್ಲ ನಿವಾರಣೆ ಯಾಗುವುವು.
ಕಜ್ಜಿ, ತೂರಿ ಮತ್ತು ಇತರೆ ಚರ್ಮ ರೋಗಗಳ ನಿವಾರಣೆ: ಗೋಣಿಸೊಪ್ಪುನ್ನು ಜಜ್ಜಿ ರಸ ತೆಗೆದು ಕೊಳ್ಳಬೇಕು. ಈ ರಸಕ್ಕೆ ಒಂದು ಚಮಚ ನಿಂಬೆ ರಸವನ್ನು ಮಿಶ್ರಮಾಡಿ, ಕಜ್ಜಿ, ತುರಿ ಮತ್ತು ಯಾವುದೇ ಚರ್ಮ ರೋಗವಿದ್ದರೂ ಅದಕ್ಕೆ ದಪ್ಪನೆಯವಾಗಿ ಲೇಪಿಸಬೇಕು. ಎರಡು ಗಂಟೆಯ ನಂತರ ಬಿಸಿ ನೀರಿನಿಂದ ತೊಳೆಯಬೇಕು.
ಮಲಬದ್ಧತೆ ನಿವಾರಣೆ: ಎರಡು ಚಮಚ ಗೋಣಿಸೊಪ್ಪಿನ ರಸಕ್ಕೆ ಒಂದು ಚಮಚ ಜೇನು ಸೇರಿಸಿ ಬೆಳೆಗ್ಗೆನೇ ಕುಡಿಯಬೇಕು. ಸುಲಭವಾಗಿ ಮಲ ವಿಸರ್ಜನೆಯಾಗಿ ದೇಹದ ರಕ್ತ ಶುದ್ಧಿಯಾಗುವುದು.