narendra modi ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ನಡೆಸುತ್ತಿದೆ .ನಮ್ಮ ಕೇಂದ್ರ ಸರ್ಕಾರದ ಮುಖ್ಯ ಗುರಿ ಏನೆಂದರೆ ಮಹಿಳೆಯರ ತಮ್ಮ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬೇಕು ಎಂಬುದೇ ಕೇಂದ್ರ ಸರ್ಕಾರದ ಆಶಯ ಅದರ ಪ್ರಕಾರ ಮಹಿಳೆಯರಿಗೆ ಉಪಯೋಗವಾಗುವಂತೆ ಹಲವಾರು ರೀತಿಯಾದಂತಹ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ.ಕೇಂದ್ರ ಬಜೆಟ್2023-2024 ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಈ ನಿಟ್ಟಿನಲ್ಲಿ, ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಗ್ರಾಮೀಣ ಮಹಿಳೆಯರನ್ನು 81 ಲಕ್ಷ ಸ್ವಸಹಾಯ ಗುಂಪುಗಳಾಗಿ ಸಜ್ಜುಗೊಳಿಸುವ ಮೂಲಕ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದೆ.ಪ್ರಧಾನಮಂತ್ರಿ ಮುದ್ರಾ ಯೋಜನೆ, ದೇಶದಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವನ್ನು ಪ್ರಯೋಗಿಸಿದ ಯೋಜನೆಯ ಆಗಿದೆ ಯೋಜನೆಯ ಮೊದಲ ಹಂತವು ಬೆಂಬಲಿತವಾಗಿದ್ದು.
ಈಗ ಮತ್ತೊಂದು ಹಂತದ ಸಿ ಯೋಜನೆ ಆರಂಭವಾಗಿದೆ ಇನ್ನು ಬ್ಯಾಂಕುಗಳು ಈ ಯೋಜನೆಯಡಿ ಸಾಲ ವಿತರಿಸುತ್ತೇವೆ ಇನ್ನು ಇದು ಸಾಲ ಪಡೆಯುತ್ತಿರುವ ಅವಕಾಶ ಹುಡುಕುತ್ತಿರುವವರಿಗೆ ಉತ್ತಮ ಅವಕಾಶವಾಗಿದೆ ಇದರಿಂದ ಅರ್ಹತೆ ಪಡೆದವರಿಗೆ ಸಾಲ ಪಡೆಯಲು ಸುಲಭವಾಗುತ್ತದೆ ಹೊಸ ಉದ್ಯಮ ಆರಂಭಿಸುವವರು ಅರ್ಜಿ ಸಲ್ಲಿಸಬಹುದು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿ ಗರಿಷ್ಠ 10 ಲಕ್ಷದವರೆಗಿನ ಸಾಲವನ್ನು ಪಡೆಯಬಹುದು ಆದಾಗಿಯೂ ಇದರಲ್ಲಿ ಕೆಲವು ವರ್ಗಗಳು ಇವೆ.
ಮೂರು ವಿಭಾಗಗಳು ಇವೆ. ಶಿಶು ಕಿಶೋರ್ ಮತ್ತು ತರುಣ್ ಸಾಲ ಇವುಗಳಲ್ಲಿ ಐವತ್ತು ಸಾವಿರ ರೂಪಾಯಿಗಳಲ್ಲಿನ ಸಾಲುಗಳು ಶಿಶುವರ್ಗದಲ್ಲಿ ಲಭ್ಯವಿದೆ. ನೀವು ವಿಳಾಸ ಗುರುತಿನ ಪುರಾವೆ ಎರಡು ಫೋಟೋಗಳು ವ್ಯಾಪಾರ ಪುರಾವೆಗಳನ್ನು ಹೊಂದಿದ್ದರೆ ನೀವು ಈ ಸಲಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಬ್ಯಾಂಕ್ ಶಾಖೆಗೆ ಹೋಗಬೇಕು ಇಲ್ಲದಿದ್ದರೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಮುದ್ರಾ ವೆಬ್ಸೈಟ್ಗೆ ಹೋಗಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಸಾಲದ ದರಗಳು ಬ್ಯಾಂಕ್ ಆಧಾರದ ದರಗಳ ಮೇಲೆ ಬದಲಾಗುತ್ತದೆ.
ನೀವು ಲಿಂಕ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಮೀನುಗಾರಿಕೆ ಜೇನು ಸಾಕಾಣಿ ಕೋಳಿ ಜಾನುವಾರು ಶ್ರೇಣಿಕರಣ ವಿಂಗಡ ಒಟ್ಟುಗೂಡಿಸುವಿಕೆ ಕೃಷಿ ಕೈಗಾರಿಕೆಗಳು ಡೈರಿ ಮೀನುಗಾರಿಕೆ ಸಲಹೆಗಳು ಕೃಷಿ ವ್ಯಾಪಾರ ಕೇಂದ್ರಗಳು ಆಹಾರ ಮತ್ತು ಕೃಷಿ ಸಂಸ್ಕರಣೆಗೆ ಸಂಬಂಧಿಸಿದ ಗುರುತಿಗೆ ಅರ್ಹವಾಗಿರುತ್ತವೆ. ಇನ್ನ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ ನಿರ್ಮಲ ಸೀತಾರಾಮನ್ ಅವರು ಕೆಲವೊಂದು ಯೋಜನೆಗಳು ಹೀಗಿವೆ ಹಣಕಾಸು ಮಂತ್ರಿನಿರ್ಮಲಾ ಸೀತಾರಾಮನ್ಫೆಬ್ರವರಿ 1 ರಂದು ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಎಂಬ ಒಂದು-ಬಾರಿ ಸಣ್ಣ ಉಳಿತಾಯ ಯೋಜನೆಯನ್ನು ಘೋಷಣೆ ಮಾಡಿದರು.
ಇದು ಮಾರ್ಚ್ 2025 ರವರೆಗೆ ಲಭ್ಯವಿರುತ್ತದೆ. ಯೋಜನೆಯು ಎರಡು ವರ್ಷಗಳ ಅವಧಿಯನ್ನು ಹೊಂದಿರುತ್ತದೆ ಮತ್ತು 7.5 ಪ್ರತಿಶತದಷ್ಟು ಬಡ್ಡಿದರವನ್ನು ನೀಡುತ್ತದೆ.ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಠೇವಣಿ ಇಡಬಹುದು.ಆರ್ಥಿಕ ಬೆಂಬಲ, ಕೌಶಲ್ಯ ತರಬೇತಿ ಮಹಿಳೆಯರ ತಮ್ಮ ಸಂಪರ್ಕವನ್ನು ಹೊಂದಬೇಕು ಹಾಗೆ ಈಗ ಬೆಳೆಯುತ್ತಿರುವ ಪ್ರಪಂಚದ ಜೊತೆಯಲ್ಲೇ ಮಹಿಳೆಯರು ಕೂಡ ಹೋಗಬೇಕು ಎಂಬುದೇ ಸರ್ಕಾರದ ಮುಖ್ಯ ಗುರಿ. ಇದಕ್ಕಾಗಿ ಬೇಕಾಗಿರುವಂತಹ ಸಹಾಯದ ಹಸ್ತವನ್ನು ಕೇಂದ್ರ ಸರ್ಕಾರ ನೀಡುತ್ತಿದೆ .ಇದರ ಬಗ್ಗೆ ನಮಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ನಮಗೆ ತಿಳಿಸಿ