ನಮಸ್ತೆ ಪ್ರಿಯ ಮಿತ್ರರೇ, ಮಾಂಸಾಹಾರವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಪೋಷಕಾಂಶಗಳು ನ್ಯೂಟ್ರಿಷನ್ ಗಳು ಸಾಕಷ್ಟು ದೊರೆಯುತ್ತವೆ. ಆದರೆ ಈಗಿನ ಪರಿಸ್ಥಿತಿ ಹಾಗೆ ಇಲ್ಲದ ಕಾರಣ ಮಾಂಸಾಹಾರವನ್ನು ನಾವು ಹೊರಗಡೆ ಇಂದ ತಂದು ತಿನ್ನಲು ಸಾಧ್ಯವಾಗುತ್ತಿಲ್ಲ ಕಾರಣ ನಿಮಗೆ ಗೊತ್ತೇ ಇದೇ ಮಿತ್ರರೇ ಅದುವೇ ಲಾಕಡೌನ್. ನಮ್ಮ ದೇಹಕ್ಕೆ ನಿತ್ಯವೂ ಶಕ್ತಿ ಜೊತೆಗೆ ದೇಹಕ್ಕೆ ಪೋಷಕಾಂಶಗಳು ನ್ಯೂಟ್ರಿಷನ್ ಆಹಾರ ಬೇಕೇ ಬೇಕಾಗುತ್ತದೆ ಹಾಗಾದ್ರೆ ಇದಕ್ಕೆ ಏನು ಮಾಡಬೇಕು.
ಮನೆಯಲ್ಲಿ ಸಿಗುವ ಅತ್ಯದ್ಭುತವಾದ ಆಹಾರ ಪದ್ಧತಿಯಲ್ಲಿ ಸಿಗುವ ಆ ವಸ್ತು ಯಾವುದು ಅದುವೇ ಶೇಂಗಾ ಬೀಜ. ಸಾಮಾನ್ಯವಾಗಿ ಈ ಶೇಂಗಾ ಬೀಜ ಎಲ್ಲರಿಗೂ ಗೊತ್ತಿದೆ ಮಿತ್ರರೇ ಆದರೆ ಇದನ್ನು ಯಾವಾಗ ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಇದನ್ನು ಸೇವನೆ ಮಾಡುವುದರಿಂದ ಮಾಂಸಾಹಾರವನ್ನು ಸೇವನೆ ಮಾಡಿದಷ್ಟೇ ಫಲಗಳು ಸಿಗುತ್ತದೆಯೇ ಅನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಈ ಶೇಂಗಾ ಬೀಜವನ್ನು ನಾವು ದಿನನಿತ್ಯದ ಆಹಾರದಲ್ಲಿ ಬಳಕೆ ಮಾಡುತ್ತೇವೆ. ಕೆಲವರು ಈ ಬೀಜವನ್ನು ಕುದಿಸಿ ತಿನ್ನುತ್ತಾರೆ ಇನ್ನೂ ಕೆಲವರು ಹುರಿದು ಸೇವನೆ ಮಾಡುತ್ತಾರೆ ಇನ್ನೂ ಕೆಲವರು ಕುಟ್ಟಿ ಪುಡಿ ಮಾಡಿ ಅದನ್ನು ಆಹಾರದಲ್ಲಿ ಹಾಕಿ ಅಡುಗೆಯನ್ನು ಮಾಡಿ ಸೇವನೆ ಮಾಡುತ್ತಾರೆ. ಹೀಗೆ ನಾನಾ ಪದ್ಧತಿಯಲ್ಲಿ ಇದನ್ನು ಸೇವನೆ ಮಾಡುತ್ತಾರೆ. ಆದರೆ ನಿಮಗೆ ಶಕ್ತಿಬೇಕು, ನಿಮ್ಮ ದೇಹವು ತುಂಬಾನೇ ಸದೃಢವಾಗಬೇಕು ಅಂತ ನೀವು ಇಷ್ಟ ಪಡುವುದಾದರೆ ನಾವು ತಿಳಿಸುವ ಈ ಪದ್ಧತಿಯಲ್ಲಿ ಸೇವನೆ ಮಾಡಿ.
ಒಂದು ಹಿಡಿಯಷ್ಟು ಶೇಂಗಾ ಬೀಜ ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಅದರಲ್ಲಿ ಒಂದು ಲೋಟ ನೀರು ಹಾಕಿ ರಾತ್ರಿ ಪೂರ್ತಿ ಈ ಶೇಂಗಾ ಬೀಜವನ್ನೂ ನೆನೆಸಿಡಿ. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ಶೇಂಗಾ ಬೀಜ ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಹೆಚ್ಚಿಗೆ ಕೂಡ ಮಾಡಿಕೊಳ್ಳಬಹುದು ಇದು ಹೃದ್ರೋಗಕ್ಕೆ ತುಂಬಾನೇ ಒಳ್ಳೆಯದು. ಸಾಮಾನ್ಯವಾಗಿ ಮಾರ್ಕೆಟ್ ನಲ್ಲಿ ಶೇಂಗಾ ಎಣ್ಣೆ ಅಂತ ದೊರೆಯುತ್ತದೆ ಇದು ಸ್ವಲ್ಪ ದುಬಾರಿಯಾದರೂ ಕೂಡ ಆರೋಗ್ಯಕ್ಕೆ ತುಂಬಾನೆ ಉತ್ತಮವಾಗಿದೆ.
ತೂಕವನ್ನು ಹೆಚ್ಚಿಸಿಕೊಳ್ಳಲು ನೀವು ನಿತ್ಯವೂ ಉಪಹಾರ ಮಾಡಿದ ನಂತರ ಊಟವನ್ನು ಮಾಡಿದ ನಂತರ ಶೇಂಗಾ ಬೀಜ ತಿನ್ನುತ್ತಾ ಬನ್ನಿ. ನಿಮ್ಮ ತೂಕವು ನಿಮಗೆ ಗೊತ್ತಿಲ್ಲದೆ ಏರುತ್ತದೆ. ಇನ್ನೂ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಷ್ಟ ಪಡುವವರು ಉಪಹಾರ ಮಾಡುವ ಮುನ್ನ ನೀವು ಒಂದು ಹಿಡಿಯಷ್ಟು ನೆನೆಸಿದ ಶೇಂಗಾ ಬೀಜ ತಿನ್ನಿ ಇದು ನಿಮಗೆ ಹೊಟ್ಟೆ ತುಂಬಿದ ಹಾಗೆ ಅನುಭವ ನೀಡುತ್ತದೆ. ಇದರಿಂದ ನಿಮಗೆ ಜಾಸ್ತಿ ಹಸಿವಿನ ಕಡೆಗೆ ಒಲವು ಬರುವುದಿಲ್ಲ ಇದರಿಂದ ಆರಾಮ ಆಗಿ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಡಯಾಬಿಟೀಸ್ ರೋಗಿಗಳು ಈ ನೆನೆಸಿದ ಶೇಂಗಾ ಬೀಜ ತಿನ್ನುವುದರಿಂದ ದೇಹದಲ್ಲಿ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ. ಮತ್ತು ಕೂದಲು ಬೆಳೆಯಲು ಇದು ತುಂಬಾನೇ ಸಹಾಯ ಮಾಡುತ್ತದೆ ಅಲ್ಲದೇ ಕ್ಯಾನ್ಸರ್ ವಿರೋಧಿಯಾಗಿ ಕೆಲಸವನ್ನು ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬೆಲ್ಲದ ಜೊತೆಗೆ ಈ ನೆನೆಸಿದ ಶೇಂಗಾ ಬೀಜ ತಿನ್ನಿ ಇದರಿಂದ ನಿಮಗೆ ಶಕ್ತಿ ಬಲ ಬರುತ್ತದೆ. ಜೊತೆಗೆ ಮಹಿಳೆಯರಲ್ಲಿ ಡಾರ್ಕ್ ಸರ್ಕಲ್ ರಿಂಕಲ್ಸ್ ಬ್ಲಾಕ್ ಸ್ಪಾಟ್ ಎಲ್ಲವನ್ನು ಕಡಿಮೆ ಮಾಡಲು ಶೇಂಗಾ ಬೀಜ ಸಹಾಯ ಮಾಡುತ್ತದೆ. ಮುಖವನ್ನು ತುಂಬಾನೇ ಯಂಗ್ ಆಗಿ ಇಟ್ಟುಕೊಳ್ಳಬಹುದು. ಜೊತೆಗೆ ನಿಮ್ಮ ಚರ್ಮ ತುಂಬಾನೇ ಕಾಂತಿಯುಕ್ತವಾಗಿ ಆರೋಗ್ಯಪೂರ್ಣವಾಗಿ ಕಾಣಿಸುತ್ತದೆ. ಈ ಸಲಹೆಯನ್ನು ನಿತ್ಯವೂ ಪಾಲನೆ ಮಾಡುತ್ತಾ ಬನ್ನಿ.