ನಮಸ್ತೆ ಪ್ರಿಯ ಓದುಗರೇ, ಭಾರತ, ಇಂಡಿಯಾ, ಹಿಂದುಸ್ಥಾನ್. ಈ ದೇಶ ಎಷ್ಟೋ ಬ್ರಾಂಡ್ ಗಳಿಗೆ ಸ್ವರ್ಗ. ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಯಲ್ಲಿ ಎರಡನೇ ಸ್ಥಾನ. ಮೊದಲನೇ ಸ್ಥಾನವಾದ ಚೀನಾ ವಿದೇಶಿ ಮಡಿವಂತಿಕೆ ಮಾಡಿಕೊಂಡು ತನ್ನ ಬ್ರಾಂಡ್ಸ್ ಗಳನ್ನ ಮಾಡಿಕೊಂಡು ಹೆಸರು ಗಳಿಸುತ್ತಿದೆ. ಭಾರತ ಮಾತ್ರ ವಿಶ್ವದ ಬೆಸ್ಟ್ ಬ್ರಾಂಡ್ಸ್ ಗಳಿಗೆ ಸ್ವಾಗತ ಸ್ವಾಗತ ಅಂತ ಸಿಕ್ಕಾಪಟ್ಟೆ ಬ್ಯುಸಿನೆಸ್ ಕೊಡ್ತಾ ಇದೆ. ಕನ್ಸುಮೇರ್ ಮಾರ್ಕೆಟ್ ಅಲ್ಲಿ ಭಾರತಕ್ಕೆ ಏಳನೇ ಸ್ಥಾನ. ಹತ್ತತ್ರ 17 ಮಿಲಿಯನ್ ಡಾಲರ್ ಬ್ಯುಸಿನೆಸ್ ಕೊಡ್ತಾ ಇದೆ ನಮ್ಮ ಭಾರತ ದೇಶ. ಆದ್ರೆ ಈ ಕಂಪನಿಯ ದುರಹಂಕಾರ ಹೇಗಿದೆ ಅಂದ್ರೆ ಇಲ್ಲೇ ನಮ್ಮ ಭಾರತ ದೇಶದಲ್ಲಿ ಲಾಭ ಗಳಿಸಿ ನಮಗೇ ಉಲ್ಟಾ ಹೊಡಿತ ಇದಾರೆ. ನಮ್ಮ ದೇಶದ ಒಳ ವಿಷಯಗಳು ಇವರಿಗೆ ಯಾಕೆ ಬೇಕು. ಬಂದ್ರಾ ಬ್ಯುಸಿನೆಸ್ ಮಾಡಿದ್ರಾ, ಹಣ ಮಾಡಿಕೊಂಡು ತೆಪ್ಪಗಿರಬೇಕು ಅಲ್ವಾ? ಯಾಕೆ ಇದೆಲ್ಲ ಮಾತುಗಳು ಎಂದು ಆಶ್ಚರ್ಯ ಆಗುತ್ತಿದೆ ಅಲ್ವಾ? ಅದು ಯಾಕೆ ಅಂತ ನೋಡೋದಾದರೆ ಅಮೆರಿಕದ KFC ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸಿ ಟ್ವೀಟ್ ಮಾಡಿ ಈಗ ಗೊಳೋ ಅಂತ ಅಳತೊಡಗಿ ದೇ. ಈಗ ಹುಂಡೈ ಕಂಪನಿ ಭಾರತದಲ್ಲಿ ಆರು ಲಕ್ಷಕ್ಕೂ ಹೆಚ್ಚು ಕಾರ್ ಮಾರಿದೆ. ಅದೇ ಪಾಕಿಸ್ತಾನ ದಲ್ಲಿ ಒಂದು ಲಕ್ಷ ಕಾರ್ ಮಾರಲು ಸುಸ್ತು ಹೊಡೆಯುತ್ತಿದೆ. ಹೀಗಿರುವಾಗ ಪಾಕಿಸ್ತಾನದ ಪರ ಟ್ವೀಟ್ ಮಾಡಿದ್ರೆ ಸುಮ್ಮನೆ ಇರೋಕೆ ಆಗುತ್ತಾ? ಭಾರತ ದೇಶದ ಪ್ರಜೆಗಳು ಹುಂಡೈ ಕಂಪನಿ ನ ಬೈಕಾಟ್ ಮಾಡ್ತೀವಿ ಅಂದಿದ್ದೆ ತಡ ವೀ ಆರ್ ಸಾರಿ ವೀ ಆರ್ ಸಾರಿ ಅಂತ ನಾಟಕ ಮಾಡ್ತಾ ಇದಾರೆ. ಬೇಕಾ ಇದೆಲ್ಲ.
KFC ಗೊತ್ತಲ್ವಾ ಚಿಕನ್ ಅಂದ್ರೆ KFC ಆ ತರಹ ಬ್ರಾಂಡ್ ಮಾಡಿದಾರೆ. ಅವರು ಭಾರತದಲ್ಲಿ ಎಷ್ಟು ಬ್ಯುಸಿನೆಸ್ ಕೊಡ್ತಾ ಇದಾರೆ ಅಂತ ನಿಮಗೆ ಗೊತ್ತಾ? 500 ಕೋಟಿ ರೂಪಾಯಿ ಒಂದು ವರ್ಷಕ್ಕೆ. ಅಂದ್ರೆ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಸಸ್ಯಾಹಾರಿಗಳು ಇರುವ ದೇಶ. ಈ ದೇಶದಲ್ಲಿಯೇ 500 ಕೋಟಿ ಬ್ಯುಸಿನೆಸ್ ಮಾಡಿದಾರೆ. ಆದ್ರೆ ಬರಿ ಮಾಂಸಾಹಾರಿಗಳು ಇರುವ ಪಾಕಿಸ್ತಾನದಲ್ಲಿ ಬರೀ 130 ಕೋಟಿ ಬ್ಯುಸಿನೆಸ್ ಮಾಡಿದಾರೆ. ನಾಲ್ಕು ಪಟ್ಟು ಹೆಚ್ಚು ಬ್ಯುಸಿನೆಸ್ ಕೊಡುವ ಭಾರತದ ಬಗ್ಗೆ ಮಾತನಾಡಿದರೆ ಸುಮ್ನೆ ಇರೋಕೆ ಆಗುತ್ತಾ? ಹುಚ್ಚು ಬಿಡಿಸಿಯೇ ಬಿಡ್ತಾರೆ. ಬರೀ ಈ ಎರೆಡು ಬ್ರಾಂಡ್ ಅಲ್ಲ, ‘ಡಾಮಿನೋಸ್’, ‘ಸುಝುಕಿ’ ಇವರು ಪಾಕಿಸ್ತಾನದ ಪರವಾಗಿ ಟ್ವೀಟ್ ಮಾಡಿ ಚೆನ್ನಾಗಿ ಹಿಂದೇಟು ತಿಂದಿದ್ದಾರೆ. ‘ಫ್ಯಾಬ್ ಇಂಡಿಯಾ’, ತನ್ನ ಬ್ರಾಂಡ್ಸ್ ಜೊತೆಯೇ ಇಂಡಿಯಾನ ಸೇರಿಸಿಕೊಂಡಿದ್ದಾರೆ. ಆದರೆ ಇಲ್ಲಿರುವ ಮೆಜಾರಿಟಿ ಇರುವ ಜನರ ಭಾವನೆಗೆ ದಕ್ಕೆ ತರಬಾರದು ಅನ್ನೋ ಸೆನ್ಸ್ ಇಲ್ಲ. ದೀಪಾವಳಿ ಅಂದ್ರೆ ಹಿಂದೂಗಳ ದೊಡ್ಡ ಹಬ್ಬ. ದೀಪ ಹಚ್ಚಿ ಸಿಹಿ ಹಂಚಿ ಆಚರಿಸುತ್ತಾರೆ. ಆದ್ರೆ ‘ಫ್ಯಾಬ್ ಇಂಡಿಯಾ’ ದೀಪಾವಳಿಗೆ ಅಂತ ಮಾಡಿದ ಜಾಹೀರಾತಿನಲ್ಲಿ ಹೊಸ ಹೆಸರು ಕೊಟ್ರು ಅದೇನು ಗೊತ್ತಾ? ಜಶ್ನೆ ರಿವಾಜ್ ಅಂತ. ದೀಪಾವಳಿಗೆ ದಿವಾಲಿ ಅಂತ ಕರೆದರೇ ಬಿಡಲ್ಲ, ಅಂಥದರಲ್ಲಿ ಉರ್ದು ಹೆಸರಲ್ಲಿ ಕರೆದರೆ ಬಿಡ್ತೇವಾ? ಇನ್ನೂ ‘ಸಿ ಟೈರ್’ ಅವರು ಒಂದು ಜಾಹೀರಾತು ಮಾಡಿದ್ರು, ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡಿಬೇಡಿ ಅಂತ ಹೇಳಿದ್ರು ಇನ್ನೂ ಅದರಲ್ಲಿ ಹಿಂದಿಯ ಅಮೀರ್ ಖಾನ್ ನಟಿಸಿದರು, ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯುವವರು ಒಳ್ಳೆಯ ಭಾರತದ ಪ್ರಜೆಗಳು ನಾಗರಿಕರು ಅಲ್ಲ ಅಂತ ಈ ಜಾಹೀರಾತು ಹೇಳಿತು, ಆಗ ಜನ ಚೆನ್ನಾಗಿ ಉಗಿದ್ರು, ಯಾಕೆ ನಮ್ಮ ಭಾರತೀಯರ ಹಬ್ಬಗಳನ್ನು ಟಾರ್ಗೆಟ್ ಮಾಡ್ತೀರಾ ಅಂತ ಉಗುದ್ರು. ಅಷ್ಟೇ, ಜಾಹೀರಾತು ನಿಂತು ವೀ ಆರ್ ಸಾರಿ ವೀ ಆರ್ ಸಾರಿ ಅಂತ ಕೇಳತೊಡಗಿದರು. ಏನಾಗಿದೆ ಈ ಬ್ರಾಂಡ್ಸ್ ಗಳಿಗೆ? ದೊಡ್ಡ ದೊಡ್ಡ ಬ್ರಾಂಡ್ಸ್ ಗಳಿಗೆ ಇದೆಲ್ಲ ಅಭ್ಯಾಸ ಆದ ಹಾಗಿದೆ.
ಭಾರತದಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಇರೋ ಜನರ ಭಾವನೆಗೆ ದಕ್ಕೆ ತರೋದು, ಚೆನ್ನಾಗಿ ಬೈಸ್ಕೊಳೋದು, ಆಮೇಲೆ ಸಾರಿ ಕೇಳೋದು. ಇದರಿಂದ ನಷ್ಟ ಅವ್ರಿಗೆನೆ ಆದ್ರೆ ಬುದ್ಧಿ ಅಂತೂ ಕಲಿತ ಇಲ್ಲ. ‘ಮಾನ್ಯವರ್’ ಬ್ರಾಂಡ್ ಗೊತ್ತಲ್ವಾ? ವಿರಾಟ್ ಕೋಹ್ಲಿ ಜಾಹೀರಾತಲ್ಲಿ ಇದಾರೆ. ಇದು ಇಂಡಿಯಾ ಬ್ರಾಂಡ್ ಆದರೆ ಇವರೇನು ಮಾಡಿದರು ಗೊತ್ತಾ? ಹಿಂದೂಗಳ ಮದುವೆಗೆ ಅಣಕಿಸುವ ಹಾಗೆ ಜಾಹೀರಾತು ಮಾಡಿ ಚೆನ್ನಾಗಿ ಉಗಿಸಿಕೊಂಡು ಸಾರಿ ಅಂತ ಕೇಳತೊಡಗಿದರು. ಅಷ್ಟೇ ಅಲ್ಲ ಅವರ ಸೇಲ್ಸ್ ರಿಪೋರ್ಟ್ ಪಾತಾಳಕ್ಕೆ ಕುಸಿದಿತ್ತು. ಇನ್ನೂ ‘ಟಾಟಾ ಕಂಪನಿ’ ಬಗ್ಗೆ ನಮಗೆಲ್ಲ ಗೊತ್ತಿದೆ, ಇದು ಭಾರತದ ಬ್ರಾಂಡ್ ಅದೇ ಕಂಪನಿ ತನಿಷ್ಕ್ ಭಾರತೀಯರ ಭಾವನೆಗೆ ದಕ್ಕೆ ತರುವ ಜಾಹೀರಾತು ಮಾಡಿ ಯಡವಟ್ಟು ಮಾಡಿಕೊಂಡ ರು. ಒಂದು ಬ್ರಾಂಡ್ ಆಗಿ ಭಾರತಕ್ಕೆ ಬಂದರೆ ಬರೀ ಬ್ಯುಸಿನೆಸ್ ಮಾಡಿ ಲಾಭ ಪಡೆದು ಸುಮ್ಮನಾಗಬೇಕು ಅದನ್ನು ಬಿಟ್ಟು ಇಲ್ಲಿರುವ ಜನರ ಭಾವನೆಗೆ ದಕ್ಕೆ ತರುವ ಪ್ರಯತ್ನ ಮಾಡೋದು, ಪಾಕಿಸ್ತಾನದ ಪರ ಟ್ವೀಟ್ ಮಾಡೋದು ಇದೆಲ್ಲ ಬೇಕಾ? ದುಡ್ಡು ಮಾಡುವ ಉದ್ದೇಶ ಇರುವ ಕಂಪನಿಗಳು ಬರೀ ಅದರ ಬಗ್ಗೆ ಮಾತ್ರ ಗಮನ ಹರಿಸಿದರೆ ಒಳ್ಳೆಯದು ಅದನ್ನು ಬಿಟ್ಟು ಬೇರೆ ಅಧಿಕ ಪ್ರಸಂಗ ಮಾಡಿದರೆ ಇಲ್ಲಿ ದುಡ್ಡು ಇಲ್ಲ, ಬ್ಯುಸಿನೆಸ್ ಇಲ್ಲ. ತಪ್ಪಾಯ್ತು ತಪ್ಪಾಯ್ತು ಅಂತ ಭಾರತೀಯರ ಎದುರು ಮಂಡಿ ಊರಿ ಕೂತುಕೊಳ್ಳಬೇಕಾಗುತ್ತದೆ. ಹುಷಾರ್!.. ಶುಭದಿನ.