ಹೌದು ಸಹಿ ಮಾಡುವುದರಿಂದ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಬಹುದು ಹೇಗೆ ಗೊತ್ತಾ ನೀವು ಸಹಿ ಮಾಡುವ ಶೈಲಿಯ ಮೇಲೆ ಗೊತ್ತಾಗುತ್ತದೆ ನಿಮ್ಮ ವ್ಯಕ್ತಿತ್ವ ಏನು ಅಂತ ಹಾಗಾದ್ರೆ ಇಲ್ಲಿದೆ ನೋಡಿ ನಿಮ್ಮ ವ್ಯಕ್ತಿತ್ವ ಏನು ಅನ್ನೋದು.
ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ : ಸಮಾಜದಲ್ಲಿ ಗೌರವ, ಮರ್ಯಾದೆಗಳನ್ನು ಗಳಿಸುತ್ತಾರೆ. ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ. ಎಲ್ಲ ವಿಷಯಗಳಿಗೂ ಮುಂದಿರುತ್ತಾರೆ. ದೈರ್ಯವಂತರು.
ಸಹಿ ಕೆಳಮುಖವಾಗಿದ್ದರೆ : ಸ್ವಾರ್ಥ ಹೆಚ್ಚಾಗಿರುತ್ತದಂತೆ.
ಸಹಿ ಮೇಲ್ಮುಖವಾಗಿದ್ದರೆ : ನಿಮಗೆ ತೀಕ್ಷ್ಣ ಬುದ್ಧಿಯಿರುತ್ತದೆ. ಧನಾತ್ಮಕ ವ್ಯಕ್ತಿತ್ವ, ಯಾವುದೇ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತೀರ. ಅಭಿವೃದ್ಧಿ ಪಥದಕಡೆ ನಿಮ್ಮ ಪಯಣ.
ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ : ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತೀರಿ.
ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ : ಎಂದೆಂದಿಗೂ ನಿಮಗೆ ಜಯ ಲಭಿಸುತ್ತದೆ.
ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ : ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತೀರಿ. ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ.
ಸಹಿಯಲ್ಲಿ ಚುಕ್ಕೆಗಳಿದ್ದರೆ :ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರು.
ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ : ಆರಂಭ ಶೂರತ್ವ ಹೆಚ್ಚಾಗಿರುತ್ತದೆ. ಒಳ್ಳೆಯ ಐಡಿಯಾ ಗಳಿರುತ್ತವೆ. ಆದರೆ, ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತೀರ.
ಗ್ರಾಫಾಲಜಿಯಲ್ಲಿ ಇನ್ನು ಆನೇಕ ವಿಷಯಗಳಿವೆ. ಅನೇಕ ಮನೋವೈಜ್ಞಾನಿಕ ಪುಸ್ತಕಗಳನ್ನು ಬರೆದು ಯಶಸ್ವಿ ಆಗಿರುವ ತೆಲುಗಿನ ಹೆಸರಾಂತ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಒಂದು ಉತ್ತಮವಾದ ಹೊತ್ತಿಗೆ ಇದು. ಗ್ರಾಫಾಲಜಿ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ರಾಜಾ ಚೆಂಡೂರು.