ಕುಳ್ಳಗಿರುವವರಿಗೆ ಹೆಚ್ಚು ಅರೋಗ್ಯ ಸಮಸ್ಯೆಗಳು ಕಂಡು ಬರುತ್ತೇವೆ ಎಂದು ಅಧ್ಯಯನ ಒಂದು ತಿಳಿಸಿದ್ದು, ಎತ್ತರವು ಟೈಪ್ 2 ಮಧುಮೇಹದ ಅಪಾಯವನ್ನು ನಿರ್ಧರಿಸುತ್ತದೆ. ಅದಕ್ಕಾಗಿ ಕಡಿಮೆ ಎತ್ತರ ಇರುವವರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಸಾಮಾನ್ಯ ಎಂದು ತಿಳಿದು ಬಂದಿದೆ. ಅದರಂತೆ WHO ಅಧ್ಯಯನದ ಪ್ರಕಾರ ವಿಶ್ವದಾದ್ಯಂತ ಸುಮಾರು 422 ಮಿಲಿಯನ್ ಜನರಿಗೆ ಮಧುಮೇಹವಿದೆ. ಈ ಕುರಿತು ಜರ್ಮನಿಯ ಜರ್ಮನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ನ್ಯೂಟ್ರಿಷನ್ ನ ಹೊಸ ಸಂಶೋಧನೆಯ ಮಾಡಿದ್ದು ಕಡಿಮೆ ಎತ್ತರ ಇರುವ ಜನರು ಟೈಪ್-2 ಮಧುಮೇಹಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿಸಿದೆ.
ಕುಳ್ಳಗಿರುವವರಿಗೆ ಕಂಡು ಆರೋಗ್ಯ ಸಮಸ್ಯೆಗಳು ಯಾವವು ಅನ್ನುವುದು ಪ್ರಶ್ನೆಯಾದರೆ ಅದಕ್ಕೆ ಉತ್ತರವಾಗಿ ಈ ಜರ್ಮನ್ ಸಂಶೋಧನೆ ತಿಳಿಸಿದ ಪ್ರಕಾರ ಇಲ್ಲಿದೆ ನೋಡಿ ಮಾಹಿತಿ.
ಶ್ವಾಸಕೋಶ ಸಮಸ್ಯೆ: ಅಧ್ಯಯನದ ಪ್ರಕಾರ ಕುಳ್ಳಗಿರುವವರಲ್ಲಿ ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಲಂಡನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ಕಡಿಮೆ ಎತ್ತರ ಹೊಂದಿರುವ ವ್ಯಕ್ತಿಗಳಲ್ಲಿ ಶ್ವಾಸಕೋಶದ ಸಮಸ್ಯೆ ಸಾಮಾನ್ಯವಾಗಿ ಬರುವುದು. ಅಂತಹವರು ನಿಯಮಿತವಾದ ವ್ಯಾಯಾಮ ಹಾಗೂ ಉತ್ತಮ ಜೀವನ ಶೈಲಿಯನ್ನು ಕೈಗೊಳ್ಳಬೇಕು. ಧೂಮಪಾನ ಹವ್ಯಾಸವನ್ನು ಹೊಂದಿದ್ದರೆ ಮೊದಲು ಅದನ್ನು ತಪ್ಪಿಸಬೇಕು. ಎಂದು ಹೇಳಿದೆ.
ಗರ್ಭಾವಸ್ಥೆಯಲ್ಲಿ ತೊಂದರೆ: ಕುಳ್ಳಗಿರುವ ಮಹಿಳೆಯರಿಗೆ ಪ್ರಸವದ ಸಮಯದಲ್ಲಿ ತೊಂದರೆಯನ್ನು ಕಂಡು ಬರುತ್ತೆ, ಅಷ್ಟೇ ಅಲ್ಲದೆ ಮಗುವಿನ ಬೆಳವಣಿಗೆಯಲ್ಲಿ ನ್ಯೂನತೆ ಉಂಟಾಗಬಹುದು. ಅಕಾಲಿಕ ಪ್ರಸವವನ್ನು ಅನುಭವಿಸುವ ಸಾಧ್ಯತೆಗಳು ಇರುತ್ತವೆ. ಮಗುವಿನಲ್ಲಿ ಕಾಮಲೆ, ದೃಷ್ಟಿ ನಷ್ಟ, ಬೌದ್ಧಿಕ ವಿಳಂಬ ಉಂಟಾಗುವುದು. ಜನನದ ನಂತರ ಉತ್ತಮ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಮಗುವಿನ ಆರೋಗ್ಯ ಸುಧಾರಣೆ ಮಾಡಬಹುದು.
ಯಕೃತ್ತಿನಲ್ಲಿ ಕೊಬ್ಬಿನಂಶ: ಕುಳ್ಳಗಿರುವ ಪುರುಷ ಹಾಗೂ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತವೆ. ಕಡಿಮೆ ಎತ್ತರ ಇರುವ ವ್ಯಕ್ತಿಗಳಲ್ಲಿ ಹೃದಯ, ಚಯಾಪಚಯ ಅಪಾಯಕಾರಿಯಿಂದ ಕೂಡಿರುತ್ತವೆ. ಯಕೃತ್ತಿನಲ್ಲಿ ಕೊಬ್ಬಿನಂಶ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚು. ದೇಹದ ತೂಕ ಹೆಚ್ಚುವುದು, ಸೊಂಟದ ಸುತ್ತಳತೆ ಹೆಚ್ಚುವುದು ಜೊತೆಗೆ ರಕ್ತದೊತ್ತಡವು ಹೆಚ್ಚಾಗುವುದು. ಅದರಲ್ಲೂ ಮಧ್ಯ ವಯಸ್ಸನ್ನು ದಾಟಿದ ನಂತರ ಹೆಚ್ಚಿನ ಸಮಸ್ಯೆ ಎದುರಾಗುವುದು ಎಂದು ಹೇಳಲಾಗುವುದು.
ಸಂಧಿವಾತ ಕಾಣಿಸಿಕೊಳ್ಳುವುದು: ಎತ್ತರ ಕಡಿಮೆ ಇರುವವರಲ್ಲಿ ಸಂಧಿವಾತ ಹಾಗೂ ಮೂಳೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ದೇಹದ ಅಧಿಕ ಭಾರವನ್ನು ಮೂಳೆಗಳು ಹೊರಲು ಕಷ್ಟಪಡುವರು. ಅಧಿಕ ಭಾರಗಳು ಮೂಳೆಗಳ ಮೇಲೆ ಸಾಕಷ್ಟು ಒತ್ತಡವನ್ನು ಉಂಟುಮಾಡುತ್ತವೆ. ಒಂದು ಅಧ್ಯಯನದ ಪ್ರಕಾರ ಶೇ.80ರಷ್ಟು ಜನರಲ್ಲಿ ಅವರ ಎತ್ತರದ ಸಂಗತಿಯು ಆನುವಂಶಿಕವಾಗಿ ಇರುತ್ತದೆ
ತಲೆ ಕೂದಲು ಹೋಗಬಹುದು: ಕುಳ್ಳಗಿರುವ ಪುರುಷರಲ್ಲಿ ಅಕಾಲಿಕವಾಗಿ ಕೂದಲುದುರುವುದು ಹಾಗೂ ಬೋಳು ತಲೆಯನ್ನು ಹೊಂದುವ ಸಾಧ್ಯತೆಗಳು ಹೆಚ್ಚು. ಹಲವು ಸಂಶೋಧನೆಗಳ ಪ್ರಕಾರ ಈ ಸಮಸ್ಯೆಗಳು ಅವರ ಆನುವಂಶಿಕ ಸಂಗತಿ ಹಾಗೂ ಎತ್ತರವನ್ನು ಅವಲಂಬಿಸಿದೆ ಎನ್ನಲಾಗಿದೆ.
ಮೊದಲೇ ಪರೀಕ್ಷೆಗೆ ಒಳಗಾಗುವುದು ಸೂಕ್ತ: ಪುರುಷರು ಮತ್ತು ಮಹಿಳೆಯ ಇಬ್ಬರಲ್ಲೂ ಎತ್ತರದ ಸಮಸ್ಯೆಯು ಟೈಪ್-2 ಮಧುಮೇಹಕ್ಕೆ ಕಾರಣವಾಗುವುದು. ಯಕೃತ್ತಿನಲ್ಲಿ ಕೊಬ್ಬಿನಂಶ ಶೇಖರಣೆಯಾಗುವುದು. ರಕ್ತನಾಳದಲ್ಲಿ ಅಪಾಯಕಾರಿ ಅಂಶವು ಸಂಗ್ರಹವಾಗುತ್ತದೆ. ನಿರ್ದಿಷ್ಟವಾಗಿ ಹೇಳಬೇಕು ಎಂದರೆ ರಕ್ತದಲ್ಲಿ ಕೊಬ್ಬು ಮತ್ತು ಸಕ್ಕರೆಯ ಮಟ್ಟ ಹೆಚ್ಚುವುದು. ಇದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚುವುದು. ಶಾಶ್ವತವಾಗಿ ಮಧುಮೇಹ ಸಮಸ್ಯೆಯನ್ನು ಎದುರಿಸಬೇಕಾಗುವುದು. ಅದಕ್ಕಾಗಿ ಆರೋಗ್ಯದ ಮೇಲೆ ಸರಿಯಾದ ಕಾಳಜಿವಹಿಸಿ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಸೂಕ್ತವಾಗಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.