ಮಾವಿನ ಹಣ್ಣು ಈಗ ಮಾರುಕಟ್ಟೆ ಪ್ರವೇಶಿಸುತ್ತಿದೆ. ಮಾವಿನ ಹಣ್ಣು ತುಂಬಾ ರುಚಿಯನ್ನು ಹೊಂದಿದ್ದು ಹಾಗೇ ಮಾವಿನ ಹಣ್ಣಿನಲ್ಲಿ ಸಾಕಷ್ಟು ಬಗೆಯ ವಿಟಮಿನ್‌ಗಳು ಅಡಕವಾಗಿದೆ. ಮಾವಿನ ಹಣ್ಣಿನಲ್ಲಿ ಹೇರಳವಾದ ಫೈಬರ್ ಅಂಶವಿದೆ.ಅದೇ ರೀತಿ ವಿಟಮಿನ್ ಎ, ಬಿ, ಸಿ, ಕೆ, ಇ ಗಳಿದೆ. ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಾದ ಇದು ಪರಿಪೂರ್ಣ ಹಣ್ಣು ಎಂದೇ ಹೇಳಬಹುದು. ಮಾವಿನಹಣ್ಣು ಎಷ್ಟು ರುಚಿಯೋ ಅಷ್ಟೇ ಅಧಿಕ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕವೂ ಹೌದು.
ಆದರೆ ಹೆಚ್ಚು ಮಾವಿನ ಹಣ್ಣನ್ನು ಸೇವಿಸಿದರೆ ಅನಾರೋಗ್ಯ ಕಾಡುವುದು ಪಕ್ಕಾ. ಮಾವಿನ ಹಣ್ಣಿನ ಅತಿಯಾದ ಸೇವನೆಯಿಂದ ಯಾವೆಲ್ಲ ಅನಾರೋಗ್ಯ ಕಾಡುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಿ. ಮಾವಿನ ಹಣ್ಣಿನಲ್ಲಿ ಹೇರಳವಾಗಿ ಫೈಬರ್ ಅಂಶವಿದೆ. ಅತಿಯಾದ ಫೈಬರ್ ಅಂಶವಿರುವ ಆಹಾರವನ್ನು ಸೇವಿಸಿದರೆ ಅತಿಸಾರ ಕಾಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಮಾವಿನ ಹಣ್ಣಿನಲ್ಲಿ ಹೆಚ್ಚು ನೀರಿನಂಶ ಇರುವುದರಿಂದ ಅತಿಯಾದ ಸೇವನೆ ಮಾಡಬಾರದು. ಆದ್ದರಿಂದ ರುಚಿಯಾಗಿದೆ ಎಂದು ಹೆಚ್ಚು ಮಾವಿನ ಹಣ್ಣು ತಿನ್ನುವ ಮುನ್ನ ಎಚ್ಚರಿಕೆವಹಿಸಬೇಕು. ಮಧುಮೇಹ ಹೊಂದಿರುವ ವ್ಯಕ್ತಿಗಳು ಮಾವಿನಹಣ್ಣಿನ ಬಗ್ಗೆ ಅತಿಯಾದ ಆಸೆ ಬಿಡಬೇಕು. ಮಾವಿನಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ನೈಸರ್ಗಿಕ ಸಕ್ಕರೆ ಗುಣವನ್ನು ಹೊಂದಿದೆ. ಹೀಗಾಗಿ ಮಧುಮೇಹಿಗಳು ಮಾವಿನ ಹಣ್ಣನ್ನು ಸೇವಿಸುವ ಮೊದಲು ಜಾಗೃತೆವಹಿಸಿ. ಮಾವಿನ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೊಂದಿರುವ ಕಾರಣ ಮಧುಮೇಹಿಗಳು ವೈದ್ಯರ ಬಳಿ ಒಂದು ಬಾರಿ ಸಲಹೆ ಪಡೆದುಕೊಳ್ಳುವುದು ಉತ್ತಮ.
ಮಾವಿನ ಹಣ್ಣಿನಲ್ಲಿ ಅತಿಯಾದ ನೀರಿನ ಅಂಶವಿರುವುದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚಿದೆ.ಹೆಚ್ಚಿನ ಮಾವಿನ ಹಣ್ಣಿನ ಸೇವನೆಯಿಂದ ಸೋರುವ ಮೂಗು, ಮೂಗಿನ ಹೊಳ್ಳೆಗಳಲ್ಲಿ ತುರಿಕೆ, ತಲೆನೋವಿನಂತಹ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಹೀಗಾಗಿ ಅತಿಯಾದ ಮಾವಿನ ಹಣ್ಣಿನ ಸೇವನೆ ಒಳ್ಳೆಯದಲ್ಲ. ಮಾವಿನ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಅಜೀರ್ಣತೆ ಕಾಡಬಹುದು.ಅದರಲ್ಲೂ ಮಾವಿನ ಕಾಯಿಯನ್ನು ತಿನ್ನುವುದಿಂದ ಅಜೀರ್ಣತೆ ಉಂಟಾಗುತ್ತದೆ. ಅಲ್ಲದೆ ಮಾವಿನ ಹಣ್ಣಿನಿಂದ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಉಂಟಾಗುವ ಸಂಭವ ಹೆಚ್ಚಿದೆ. ಮಾವಿನ ಹಣ್ಣನ್ನು ಹಾಲಿನೊಂದಿಗೆ ಸೇವಿಸಿದರೆ ಅಥವಾ ಮಾವಿನ ಹಣ್ಣಿನ ಪಾಯಸದಂತಹ ಆಹಾರಗಳನ್ನು ಸೇವಿಸಿದರೆ ಆಸಿಡಿಟಿ ಉಂಟಾಗುತ್ತದೆ. ಅದ್ದರಿಂದ ಹೆಚ್ಚು ಸಿಹಿ ಎಂದು ಮಾವಿನ ಹಣ್ಣನ್ನು ಹೆಚ್ಚು ಸೇವಿಸಬಾರದು ಇದರ ಬಗ್ಗೆ ಜಾಗ್ರತೆ ವಹಿಸಬೇಕು.