WhatsApp Group Join Now

ಮೆಂತ್ಯೆ ಸೊಪ್ಪನ್ನು ತೆಂಗಿನ ಹಾಲಿನಲ್ಲಿ ನುಣ್ಣಗೆ ಅರೆದು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ನಿಂತು ನೀಳವಾಗಿ ಬೆಳೆಯತೊಡಗುವುದು.

ಮೆಂತ್ಯೆ ಸೊಪ್ಪನ್ನು ನುಣ್ಣಗೆ ಅರೆದು , ಮುಖಕ್ಕೆ ಲೇಪಿಸುವುದರಿಂದ ಮೊಡವೆ ಗುಳ್ಳೆಗಳು ಮಾಯಾ ಆಗುತ್ತವೆ. ಮೆಂತ್ಯೆಸೊಪ್ಪಿನ ಪಲ್ಯ, ಹುಳಿ ವಾರಕೊಂದು ಬಾರಿ ಆದರೂ ಮಾಡಿ, ಸೇವಿಸುತ್ತಿದ್ದರೆ ಪಿತ್ತಕೋಶ, ಶ್ವಾಸಕೋಶ, ಹೃದಯ ಸಂಬಂದಿಸಿದ ರೋಗಗಳು ಕಡಿಮೆ ಆಗುತ್ತವೆ. ಮೆಂತ್ಯೆ ಸೊಪ್ಪಿನ ಸೇವನೆಯಿಂದ ಮೆದುಳು ದೋಷಗಳು ದೂರ ಆಗುತ್ತವೆ.

ರುಚಿಯಲ್ಲಿ ಬೇಯಿಸಿದ ಮೆಂತ್ಯೆಸೊಪ್ಪಿನ ಸೇವನೆಯಿಂದ ಸಂದಿವಾತ ರೋಗಗಳು ನಿವಾರಣೆ ಆಗುವುದು. ಮೈ ಕೈ ನೋವು, ಬೆನ್ನು ನೋವು ಸೊಂಟನೋವು ಇರುವವರು ಸಹ ಪಲ್ಯದ ರೂಪದಲ್ಲಿ ನಾರಿನ ರೂಪದಲ್ಲಿ ಬಳಸಿದರೆ ನೋವು ಕಡಿಮೆ ಆಗುವುದು.

ಮೆಂತ್ಯೆ ಸೊಪ್ಪನ್ನು ಗೊಬ್ಬರಿ ಹಾಲಿನಲ್ಲಿ ನುಣ್ಣಗೆ ಅರೆದು ರಾತ್ರಿ ಮಲಗುವ ಮೊದಲು ಮುಖಕ್ಕೆ ಹಚ್ಚಿಕೊಂಡು ಮಲಗಿ ನಂತರ ಬೆಳಗ್ಗೆ ಬಿಸಿನೀರಿನಲ್ಲಿ ಚನ್ನಾಗಿ ತೊಳೆದುಕೊಂಡರೆ ಮುಖದ ಚರ್ಮ ಸುಕ್ಕುಗಟ್ಟುವುದು ಕಡಿಮೆ ಆಗುವುದರ ಜೊತೆಗೆ ಮುಖದ ಕಾಂತಿ ಹೆಚ್ಚುತ್ತದೆ.

ಮುಖದಮೇಲೆ ಕಪ್ಪು ಕಲೆಗಳು ಆಗಿದ್ದರೆ ಇದೆ ರೀತಿ ಆದ ಕ್ರಮವನ್ನು ಅನುಸರಿಸಿದರೆ ಮುಖದಮೇಲಿನ ಕಪ್ಪು ಕಲೆಗಳು ಆದಷ್ಟುಬೇಗ ಮಾಯವಾಗುತ್ತವೆ.

WhatsApp Group Join Now

Leave a Reply

Your email address will not be published. Required fields are marked *