ನೇರಳೆಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎಂದು ವೈದ್ಯರು ಹೇಳುತ್ತಾರೆ.
ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆಹಣ್ಣುಗಳನ್ನು ತಿಂದರೆ ಕಾಯಿಲೆಯನ್ನು ನಿಯಂತ್ರಿಸಬಹುದೆಂದು ವೈದ್ಯವಿಜ್ಞಾನ ತಿಳಿಸುತ್ತದೆ.ಸವಿ, ಒಗರು ರುಚಿಯನ್ನು ಹೊಂದಿರುವ ನೇರಳೆಹಣ್ಣನ್ನು ಉಪ್ಪಿನೊಂದಿಗೆ ತಿಂದರೆ ಬಲುರುಚಿ. ಪಟ್ಟಣದ ಮಾರುಕಟ್ಟೆಯ ತುಂಬ ಇದೀಗ ನೇರಳೆಹಣ್ಣಿನ ಮಾರಾಟದ ಭರಾಟೆ ಆರಂಭಗೊಂಡಿದೆ.
ನೇರಳೆ ತೊಗಟೆ ಮತ್ತು ಎಲೆಗಳ ಕಷಾಯಯಿಂದ ಬಾಯಿ ಮುಕ್ಕಳಿಸಿದರೆ, ಬಾಯಿಗೆ ಸಂಬಂಧಿಸಿದ ರೋಗಗಳು ಗುಣವಾಗುತ್ತದೆ. ಅಜೀರ್ಣದಿಂದ ವಾಂತಿ ಆಗುತ್ತಿದ್ದರೆ, 10 ರಿಂದ 20 ಮಿಲಿ ನೇರಳೆ ಹಣ್ಣಿನ ರಸವನ್ನು ಸೇವಿಸಿದರೆ ವಾಂತಿ ನಿಲ್ಲುತ್ತದೆ.
ನೇರಳೆ ಹಣ್ಣಿನ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಮುಖಕ್ಕೆ ಲೇಪನ ಮಾಡಿದರೆ, ಮೊಡವೆಯಿಂದ ಆದ ರಂದ್ರಗಳು ಮುಚ್ಚಿ, ಮುಖವು ಕಾಂತಿಯುತವಾಗುತ್ತದೆ.
ಚರ್ಮದಲ್ಲಿ ಹುಲುಕಡ್ಡಿಯಾಗಿದ್ದರೆ, ನೇರಳೆ ಹಣ್ಣಿನ ರಸವನ್ನು ಆ ಜಾಗಕ್ಕೆ ಹಚ್ಚಬೇಕು. ಹುಲುಕಡ್ಡಿ ಗುಣವಾಗುತ್ತದೆ. ನೇರಳೆ ಎಲೆಗಳನ್ನು ಜಜ್ಜಿ ಸುಟ್ಟ ಗಾಯದ ಕಲೆಗೆ ಲೇಪಿಸಿದರೆ, ಕ್ರಮೇಣವಾಗಿ ಕಲೆಗಳು ಕಡಿಮೆಯಾಗುತ್ತದೆ.
ಮುಖದಲ್ಲಿ ಮೊಡವೆಗಳಿದ್ದರೆ, ನೇರಳೆ ಬೀಜದ ಪುಡಿಯನ್ನು ಹಾಲಿನಲ್ಲಿ ಕಲಸಿ, ಮುಖಕ್ಕೆ ಲೇಪನ ಮಾಡಿದರೆ ಮೊಡವೆಗಳು ಕಡಿಮೆಯಾಗುತ್ತದೆ.