ನಮಸ್ತೆ ಪ್ರಿಯ ಓದುಗರೇ, ಮೊದಲೆಲ್ಲಾ ಮೊಡವೆ ನಿನ್ನ ಮುಖಕ್ಕೊಂದು ಒಡವೆ ಅಂತ ಆದರೆ ಇತ್ತೀಚಿನ ದಿನಗಳಲ್ಲಿ ಮೊಡವೆ, ಕಲೆ, ಗುಳ್ಳೆ ಆದರೆ ಸಾಕು ನಮ್ಮ ಈಗಿನ ಯುವಪೀಳಿಗೆ ಅದರಲ್ಲೂ ನಮ್ಮ ಹೆಣ್ಣು ಮಕ್ಕಳು ಏನೋ ಆಕಾಶ ತಲೆ ಮೇಲೆ ಬಿದ್ದ ಹಾಗೆ ಕುತ್ಕೊತಾರೆ. ಇದಕ್ಕೆ ಇಂದಿನ ಲೇಖನದಲ್ಲಿ ಒಂದು ಮನೆಮದ್ದನ್ನು ತಿಳಿಸಿ ಕೊಡುತ್ತೇವೆ ಬನ್ನಿ ಸ್ನೇಹಿತರೆ. ಅದಕ್ಕೆ ಬೇಕಾದ ಸಾಮಗ್ರಿಗಳನ್ನು ನೋಡೋಣ. ಮೊದಲನೆಯದು ಆಲೂಗೆಡ್ಡೆ ಹಾಗೂ ಇನ್ನೊಂದು ಚಕ್ಕೆ ಪುಡಿ. ಈ ಲೇಪನವನ್ನು ಅಥವಾ ಫೇಸ್ ಪ್ಯಾಕ್ ಅನ್ನು ಮಾಡುವ ವಿಧಾನ ಈ ರೀತಿ ಇದೆ – ಆಲೂಗೆಡ್ಡೆಯನ್ನು ತುರಿದು ಅದರ ರಸವನ್ನು ಬೇರ್ಪಡಿಸಿ, ಆ ರಸಕ್ಕೆ ದಾಲ್ಚಿನ್ನಿ ಅಥವಾ ಚಕ್ಕೆ ಪುಡಿಯನ್ನು ಸೇರಿಸಿ ಮಿಶ್ರ ಮಾಡಿದರೆ ನಮ್ಮ ಮೊಡವೆಗಳನ್ನು ನಿವಾರಿಸುವ ಫೇಸ್ ಪ್ಯಾಕ್ ರೆಡಿ. ಇದನ್ನು ಎಲ್ಲೆಲ್ಲಿ ಮೊಡವೆ ಗುಳ್ಳೆ ಆಗಿರುವವೋ ಆ ಜಾಗಕ್ಕೆ ಸ್ವಲ್ಪ ದಪ್ಪನಾಗಿ ಹಚ್ಚಿಕೊಳ್ಳಬೇಕು. ಇವೆರೆಡೂ ನಮ್ಮ ಮೊಡವೆ ಗುಳ್ಳೆಗಳ ನಿವಾರಣೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ನೋಡೋಣ.
ಮೊಡವೆಗಳು ಬರುವುದು ಸಹಜ, ಆದರೆ ಈ ಮೊಡವೆಗಳು ಹೋದ ನಂತರ ತಾವು ಬಂದು ಹೋಗಿರುವ ನೆನಪಿಗಾಗಿ ಕಲೆಗಳನ್ನು ಬಿಟ್ಟು ಹೋಗುವುದು ಸಾಮಾನ್ಯ. ಅಂತಹ ಹಳೇ ಕಲೆಗಳನ್ನು ಈ ಲೇಪನದ ಚಿಕಿತ್ಸೆಯನ್ನು ನೀವು ಕೆಲವು ದಿನಗಳ ಕಾಲ ಸತತವಾಗಿ ಮಾಡುತ್ತಾ ಬಂದರೆ ಮೊಡವೆ ಗುಳ್ಳೆಗಳು ಬಹಳ ಬೇಗ ಕಡಿಮೆ ಆಗುತ್ತೆ. ಗುಳ್ಳೆಗಳು ಬಿಟ್ಟು ಹೋದಂತಹ ಕಲೆಗಳೂ ಕೂಡ ಮಾಯ ಆಗುತ್ತವೆ. ನಾವು ಇದಕ್ಕೆ ಬಳಸುತ್ತಿರುವುದು ಆಲೂಗೆಡ್ಡೆ. ಆಲೂಗೆಡ್ಡೆಯಲ್ಲಿ ಒಂದು ವಿಶೇಷವಾದ ಗುಣ ಇದೆ. ಅದೇನು ಆ ಗುಣ ಅಂದ್ರೆ ಚರ್ಮವನ್ನು ತಿಳಿಗೊಳಿಸುವಂಥದ್ದು ಅಂದ್ರೆ ಅದು ಒಂದು ಬ್ಲೀಚಿಂಗ್ ಏಜೆಂಟ್ ತರಹ ಕೆಲಸ ಮಾಡುತ್ತೆ. ಇದು ಚರ್ಮದ ಬಣ್ಣವನ್ನು ತಿಳಿಗೊಳಿಸುತ್ತದೆ. ಇದನ್ನು ಕೇವಲ ಮೊಡವೆ ಆಗಿರುವವರು ಮಾತ್ರವಲ್ಲದೆ ಬೇರೆಯವರೂ ತಮ್ಮ ಮುಖದ ಕಾಂತಿ ಮತ್ತು ಸೌಂದರ್ಯ ಹೆಚ್ಚಿಸಿಕೊಳ್ಳಲು ಇದನ್ನು ಬಳಕೆ ಮಾಡಬಹುದು. ಕಪ್ಪು ಚರ್ಮದ ಛಾಯೆ ಇರುವವರು ಇದನ್ನು ಬಳಕೆ ಮಾಡುತ್ತಾ ಬಂದರೆ ಅವರ ಮುಖದ ಬಣ್ಣ ತಿಳಿಯಾಗುವುದು.
ಇಂದು ನಾವು ಹೇಳಿದ ಲೇಪನವನ್ನು ಮೊಡವೆ ಗುಳ್ಳೆಗಳು ಬರುತ್ತಿದ್ದ ಹಾಗೆ ಅದರ ಮೇಲೆ ದಪ್ಪನಾಗಿ ಒಂದು ಗಂಟೆಗಳ ಕಾಲ ಗಟ್ಟಿಯಾಗಿ ಅದುಮಿ ಇಟ್ಟುಕೊಳ್ಳಬೇಕು. ಹೀಗೆ 3-4 ಬಾರಿ ಮಾಡುತ್ತಿದ್ದರೆ ಗುಳ್ಳೆಯ ಗಾತ್ರ ಕ್ಷೀಣಿಸಿ ಕಲೆಯೂ ಉಳಿಯದಂತೆ ಆಗುತ್ತದೆ. ಇದಕ್ಕೆ ನಾವು ಇನ್ನೊಂದು ಪದಾರ್ಥ ಬಳಸುತ್ತಿರುವುದು ದಾಲ್ಚಿನ್ನಿ ಅಂದರೆ ಚಕ್ಕೆ ಪುಡಿ. ಈ ದಾಲ್ಚಿನ್ನಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಸೌಂದರ್ಯಕ್ಕೂ ಅಷ್ಟೇ ಒಳ್ಳೆಯದು. ಇದನ್ನು ನಾವು ಆಲೂಗೆಡ್ಡೆ ರಸದಲ್ಲಿ ಸೇರಿಸಿ ಹಚ್ಚುವುದರಿಂದ ಗುಳ್ಳೆಗಳನ್ನು ನಿವಾರಣೆ ಮಾಡಿ ಕಲೆಗಳೂ ಉಳಿಯದಂತೆ ಆಗುತ್ತದೆ. ಈ ಚಿಕಿತ್ಸೆಯನ್ನು ಯಾರು ಬೇಕಾದರೂ ಮಾಡಿಕೊಳ್ಳಬಹುದು. ಯಾವ ಅಡ್ಡ ಪರಿಣಾಮಗಳೂ ಇಲ್ಲ. ಇನ್ನೊಂದು ಅದ್ಭುತವಾದ ವಿಷಯ ಏನು ಅಂದ್ರೆ, ನೀವು ಇಂದು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವ ಧಾವಂತದಲ್ಲಿ ಇರ್ತೀರಿ ಆದರೆ ಅವತ್ತಿನ ಬೆಳಿಗ್ಗೆಯೇ ನಿಮ್ಮ ಮುಖದಲ್ಲಿ ಮೊಡವೆ ಬಂದು ಆವರಿಸಿರುತ್ತದೆ. ಆಗ ನಿಮ್ಮ ಮನೆಯ ಫ್ರಿಡ್ಜ್ ಆಲಿ ಇರುವ ಐಸ್ ಕ್ಯೂಬ್ ಅಂದ್ರೆ ಮಂಜು ಗೆಡ್ಡೆಯನ್ನು ತೆಗೆದುಕೊಂಡು ಒಂದು ನಿಮಿಷಗಳ ಕಾಲ ಅದನ್ನು ನಿಮ್ಮ ಮೊಡವೆಯ ಮೇಲೆ ಒತ್ತಿ ಹಿಡಿದುಕೊಳ್ಳಿ. ಹೀಗೆ ಮಾಡಿದರೆ ನೀವು ಕಾರ್ಯಕ್ರಮಕ್ಕೆ ಹೋಗುವಷ್ಟರಲ್ಲಿ ಮೊಡವೆ ತನ್ನಿಂದ ತಾನಗೆ ಒಳಗೆ ಹೋಗಿರುತ್ತದೆ. ಆದರೆ ಇದು ತತ್ ಕ್ಷಣದ ಪರಿಹಾರವೇ ಹೊರತು ಶಾಶ್ವತ ಅಲ್ಲ. ಆದರೆ ಆಲೂಗೆಡ್ಡೆ ಚಕ್ಕೆ ಪುಡಿ ಚಿಕಿತ್ಸೆ ನಿಮ್ಗೆ ಶಾಶ್ವತ ಪರಿಹಾರ ನೀಡುತ್ತದೆ. ನೋಡಿದ್ರಲ್ಲ ಸ್ನೇಹಿತರೇ, ಈ ಮಾಹಿತಿ ಇಷ್ಟವಾಗಿದ್ದರೆ ನೀವು ಬಳಸಿ ಇತರರಿಗೂ ತಿಳಿಸಿ. ಶುಭದಿನ.