ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡು ಬರೋಣ. ಈ ಯೋಜನೆಯನ್ನು ವಿಶೇಷವಾಗಿ 18 ರಿಂದ -35 ವರ್ಷ ವಯಸ್ಸಿನ ನಿರುದ್ಯೋಗಿ ಯುವಕರಿಗೆ ವಿನ್ಯಾಸ ಗೊಳಿಸಲಾಗಿದೆ. ನಿರುದ್ಯೋಗಿ ಯುವಕರು ಹಾಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದೆ ತಮ್ಮ ಶಾಲಾ ಕಾಲೇಜುಗಳಿಂದ ಹೊರಗೆ ಉಳಿದುರುವಂತಹ ಯುವಕರಿಗೆ ಈ ಯೋಜನೆ ಅಡಿಯಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಹಾಗೆ ಇದರಲ್ಲಿ ಮೀಸಲಾತಿ ಅಂತ ಇರುತ್ತೆ. ಎಸ್ ಟಿ ಅಂದ್ರೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 20% ಎಸ್ ಸಿ ಅಂದ್ರೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 7% ಮತ್ತು ಓ ಬಿ ಸಿ ಅಭ್ಯರ್ಥಿಗಳಿಗೆ 15% ಮೀಸಲಾತಿ ಇರುತ್ತದೆ. ಎಲ್ಲಾ ಅರ್ಜಿದಾರರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಂತಹ ಅಡ್ರೆಸ್ ಪ್ರೂಫ್ ಹೊಂದಿರಬೇಕು.

ಈ ಯೋಜನೆ ಮೂಲಕ ಸುಮಾರು 70% ಶೇಕಡಾ ಯುವಕರಿಗೆ ಉದ್ಯೋಗವನ್ನು ಒದಗಿಸುವ ಗುರಿಯನ್ನು ಕರ್ನಾಟಕ ಸರ್ಕಾರ ಹೊಂದಿದೆ. ಕೌಶಲ್ಯ ಕರ್ನಾಟಕ ಯೋಜನೆ ಗೆ ಆನ್ಲೈನ್ ನೋಂದಣಿ ಯನ್ನಾ ಅಧಿಕೃತ ವೆಬ್ಸೈಟ್ www.KAUSHALKAR.com ಅಲ್ಲಿ ಮಾಡಬಹುದು. ಆಸಕ್ತರು ಹಾಗೆ ತರಬೇತಿ ನೀಡುವವರು ಮತ್ತು ಉದ್ಯೋಗದಾತರಿಗೆ ಆನ್ಲೈನ್ ನೋಂದಣಿ ಮಾಡಿಕೊಳ್ಳಲು ಒಂದೇ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಆಸಕ್ತರು ಯಾವ ರೀತಿ ನೋಂದಾವಣಿ ಮಾಡಿಕೊಳ್ಳಬಹುದು ಎಂದು ತಿಳಿಯೋಣ ಸ್ನೇಹಿತರೆ. ಮೊದಲಿಗೆ ಆಸಕ್ತರು ಹಾಗೆ ನಿರುದ್ಯೋಗಿ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ ಆಗಿರುವಂತಹ www.KAUSHALKAR.com ವೆಬ್ಸೈಟ್ ಗೆ ಹೋಗಬೇಕು ನಂತರ ಆ ಪೇಜ್ ಅನ್ನು ಸ್ಕ್ರೋಲ್ಸ್ ಮಾಡಿದಮೇಲೆ ರಿಜಿಸ್ಟ್ರೇಷನ್ ಅಂತ ಇರುತ್ತೆ, ಅದರ ಮೇಲೆ ಕ್ಲಿಕ್ ಮಾಡಬೇಕು.

ನಿಮಗೆ ಕನ್ನಡದಲ್ಲಿ ರಿಜಿಸ್ಟ್ರೇಷನ್ ಮಾಡಬೇಕು ಅಂದರೆ ಪೇಜ್ ಮೇಲೆ ಕನ್ನಡ ಇಂಗ್ಲಿಷ್ ಆಪ್ಷನ್ ಇರುತ್ತೆ ನಿಮಗೆ ಬೇಕಾದ ಭಾಷೆಯನ್ನು ನೀವು ಆಯ್ಕೆ ಮಾಡಬಹುದು. ನಂತರ ಸ್ಕಿಲ್, ಆ್ಯಪ್ರೆಂಟಿಸ್ ಶಿಪ್, ಎಂಪ್ಲಾಯಮೆಂಟ, ಸೆಲ್ಫ್ಟ್ಎಂಪ್ಲಯಿಮೆಂಟ ಅಂತ ನಾಲ್ಕು ಆಪ್ಷನ್ ಇರುತ್ತೆ. ಈಗ ನಾವು ಎಂಪ್ಲಾಯಿಮೆಂಟ ಮೇಲೆ ಕ್ಲಿಕ್ ಕೌಶಲ್ಯ ಕರ್ನಾಟಕ ಆನ್ಲೈನ್ ನಮೂನೆಯನ್ನು ಭರ್ತಿ ಮಾಡಲಿಕ್ಕೆ ತಮ್ಮ ಆಧಾರ್ ಸಂಖ್ಯೆ ಯನ್ನ ಎಂಟ್ರಿ ಮಾಡಬೇಕು. ನಂತರ ಅರ್ಜಿಯಲ್ಲಿ ವಯಕ್ತಿಕ ವಿವರಗಳು, ಪೋಷಕ ವಿವರಗಳು ಹಾಗೂ ವಿಧ್ಯಾಭ್ಯಾಸ ವಿವರಗಳು, ಶಿಕ್ಷಣದ ವಿವರಗಳು ಅಂತಹ ಅಗತ್ಯವಿರುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಹಾಗೆ ಒನ್ ಟೈಂ ಪಾಸ್ ವರ್ಡ್ ಸ್ವೀಕರಿಸಲು ಓಟೀಪೀ ಸೆಂಡ್ ಅಂತ ಬಟನ್ ಮೇಲ್ ಕ್ಲಿಕ್ ಮಾಡಬೇಕು. ವಯಕ್ತಿಕ ವಿವರಗಳಲ್ಲಿ ನೀಡಲಾದ ನಂಬರ್ ಗೆ ಒಟಿಪೀ ಬರುತ್ತೆ, ನಂತರ ಆ ಓಟಿಪಿ ಯನ್ನ ಎಂಟ್ರಿ ಮಾಡಿ, ನಂತರ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಕೆಳ ಭಾಗದ ಬಲ ಭಾಗದಲ್ಲಿ ಇರುವ ಸಬ್ ಮೀಟ್ ಬಟ್ಟನ್ ಮೇಲೆ ಕ್ಲಿಕ್ ಮಾಡಿ. ತಿಳಿದುಕೊಂಡರಲ್ವ ಸ್ನೇಹಿತರೆ ಯಾವ ರೀತಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದು. ಇಷ್ಟೇ ಸ್ನೇಹಿತರೆ ಇಂದೇ ನೋಂದಣಿ ಮಾಡಿಕೊಂಡು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *