ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮೂಳೆಗಳಿಗೆ ಮರುಜೀವ ಕೊಡುವ ಒಂದು ಸೂಪರ್ ಮನೆಮದ್ದು ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ನೀವು ವೈದ್ಯರ ಹತ್ತಿರ ಹೋಗಿ ಇದಕ್ಕೆ ಚಿಕಿತ್ಸೆ ಪಡೆದು ಗುಣ ಆಗದೇ ನಿಮಗೆ ಒಳ್ಳೆಯ ರಿಜಲ್ಟ್ ದೊರೆತಿಲ್ಲವೆಂದರೆ ನಾವು ತಿಳಿಸುವ ಈ ಮನೆಮದ್ದು ಒಂದು ಬಾರಿ ಪ್ರಯತ್ನಿಸಿ ನೋಡಿ. ಹಾಗೆಯೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮೂಳೆಗಳು ಮುರಿದು ಹೋದರೆ ನಮಗೆ ನಡೆಯಲು ಆಗುವುದಿಲ್ಲ ಕುಳಿತುಕೊಳ್ಳಲು ಅಂತ ತುಂಬಾನೇ ಕಷ್ಟವಾಗುತ್ತದೆ.
ಈಗಿನ ಕಾಲದಲ್ಲಿ ಜನರು ಈ ಮೂಳೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ಅವರು ಈ ವಿಷಯದಲ್ಲಿ ಎಡವಿ ಬಿಡುತ್ತಾರೆ. ಅಂದರೆ ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಂ ಸಿಗುವುದು ಕಡಿಮೆ ಆಗುತ್ತದೆ ಇದಕ್ಕೆಲ್ಲ ಈಗಿನ ಆಹಾರ ಪದ್ಧತಿಯೇ ಸರಿ. ದೇಹದ ಪ್ರತಿಯೊಂದು ಭಾಗವೂ ಹೇಗೆ ಮುಖ್ಯವೋ ಹಾಗೆಯೇ ಮೂಳೆಗಳು ಕೂಡ ಅತ್ಯವಶ್ಯಕವಾಗಿದೆ.
ಹಾಗಾದ್ರೆ ಬನ್ನಿ ಈ ಮೂಳೆಗಳ ರಕ್ಷಣೆಯನ್ನು ಸುಲಭವಾದ ಸರಳವಾದ ಈ ಒಂದು ಎಲೆಯನ್ನು ಬಳಕೆ ಮಾಡಿಕೊಂಡು ಮನೆಮದ್ದು ತಯಾರಿಸಿ ಯಾವ ರೀತಿಯಲ್ಲಿ ಪರಿಹಾರವನ್ನು ಕಂಡು ಕೊಳ್ಳಬಹುದು ಅಂತ ತಿಳಿಯೋಣ.ಈ ಎಲೆಯನ್ನು ಪ್ರಾಚೀನ ಕಾಲದಿಂದಲೂ ಬಳಕೆ ಮಾಡುತ್ತಾ ಚಿಕಿತ್ಸೆಯನ್ನು ನೀಡುತ್ತಿದ್ದರು ಋಷಿಗಳು ವೈದ್ಯರು ಅಂತ ತಿಳಿದು ಬಂದಿದೆ. ಹಾಗಾದರೆ ಬನ್ನಿ ಆ ಎಲೆ ಅಥವಾ ಗಿಡ ಯಾವುದು ಅಂತ ತಿಳಿಯೋಣ.
ಈ ಗಿಡವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರಬಹುದು ಅದುವೇ ಮುಳ್ಳಹರವೆ ಗಿಡ. ಇದು ನೋಡಲು ಹರವೆ ಸೊಪ್ಪಿನ ಹಾಗೆ ಇರುತ್ತದೆ. ಈ ಗಿಡವು ಚಿಕ್ಕ ಚಿಕ್ಕ ಎಲೆಗಳಿಂದ ಹೊಂದಿದ್ದು ಅದರ ಪಕ್ಕದಲ್ಲಿ ಮುಳ್ಳು ಇರುತ್ತದೆ. ಇದನ್ನು ಬಳಕೆ ಮಾಡಿಕೊಂಡು ಪಲ್ಯೆ ಸಾರು ಚಟ್ನಿ ಹೀಗೆ ವಿವಿಧ ಆಹಾರಗಳನ್ನು ಮಾಡಿಕೊಂಡು ಸೇವನೆ ಮಾಡುತ್ತಾರೆ. ಇದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಮತ್ತೆ ಜನರು ಇದನ್ನು ಸುಲಭವಾಗಿ ಗುರುತಿಸುತ್ತಾರೆ ಆದರೆ ಸಿಟಿ ಜನರು ಇದನ್ನು ಬೇಗನೆ ಗುರುತಿಸುವುದಿಲ್ಲ.
ಈ ಗಿಡದ ಎಲೆಗಳನ್ನು ಕಿತ್ತುವುದು ಸ್ವಲ್ಪ ಕಷ್ಟವಾಗುತ್ತದೆ ಇದರಲ್ಲಿ ಸಾಸಿವೆ ಕಾಳಿನಷ್ಟು ಬೀಜಗಳು ಇರುತ್ತದೆ. ಈ ಗಿಡದಲ್ಲಿ ನ್ಯೂಟ್ರಿಷನ್ ಫಾಸ್ಫರಸ್ ಜಿಂಕ್ ಐರನ್ ವಿಟಮಿನ್, ಸಿಲೇನಿಯಂ ಮ್ಯಾಂಗನೀಸ್, ಮ್ಯಾಗ್ನಿಷಿಯಂ ಪೊಟ್ಯಾಶಿಯಂ ತುಂಬಾನೇ ಅಂಶಗಳನ್ನು ಹೊಂದಿದ್ದು ಅಷ್ಟೇ ದೇಹಕ್ಕೆ ಒಳ್ಳೆಯದು. ಇದು ಮೂಳೆ ಮುರಿತವನ್ನು ಜೋಡಣೆ ಮಾಡುವಲ್ಲಿ ಪ್ರಮುಖವಾಗಿ ಸಹಕಾರಿ ಆಗಿ ಕೆಲಸವನ್ನು ಮಾಡುತ್ತದೆ.
ನೀವು ಎಲ್ಲಾದರೂ ಪ್ರಯಾಣ ಮಾಡುವಾಗ ಆಕ್ಸಿಡೆಂಟ್ ಆದಾಗ ಆಟವನ್ನು ಆಡುವಾಗ ಕುಳಿತುಕೊಳ್ಳುವಾಗ ಬಾತ್ ರೂಮ್ ನಲ್ಲಿ ಜಾರಿ ಬಿದ್ದಾಗ ಅಚಾನಕ್ ಆಗಿ ಮೂಳೆಗಳು ಮುರಿದು ಹೋಗಿ ಬಿಡುತ್ತವೆ ಆಗ ನೀವು ವೈದ್ಯರ ಹತ್ತಿರ ಹೋಗಿ ಬ್ಯಾಂಡೇಜ್ ಅನ್ನು ಹಾಕಿಕೊಳ್ಳುತ್ತೀರಿ ಅದು ಜೋಡಣೆ ಆಗಲು ನಿಮಗೆ ಮೂರು ತಿಂಗಳು ಬೇಕಾಗುತ್ತದೆ. ಆ ಹೊತ್ತಿನಲ್ಲಿ ನೀವು ಈ ಗಿಡದ ಎಲೆಗಳನ್ನು ತಂದು ಅದನ್ನು ಜಜ್ಜಿ ಅದರ ರಸವನ್ನು 10-20ಎಂ.ಎಲ್ ನಷ್ಟು ಬೆಳಿಗ್ಗೆ ಎದ್ದು ತಕ್ಷಣ ಕುಡಿಯುತ್ತಾ ಬನ್ನಿ ಹದಿನೈದು ದಿನಗಳವರೆಗೆ ನಿಮಗೆ ಮೂಳೆ ಮುರಿತ ಮೂಳೆಗಳು ಜೋಡಣೆ ಪ್ರೋಸೆಸ್ ಶುರು ಆಗುತ್ತದೆ. ತಕ್ಷಣವೇ ನೀವು ಪರಿಹಾರವನ್ನು ಕಾಣಬಹುದು. ವೈದ್ಯರು ನೀಡಿದ ಮಾತ್ರೆಗಳ ಜೊತೆಗೆ ಈ ರಸವನ್ನು ಕುಡಿದರೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಒಮ್ಮೆ ಪ್ರಯತ್ನ ಮಾಡಿ.