ನಮಸ್ತೆ ಪ್ರಿಯ ಓದುಗರೇ, ಲೈಫ್ ಅಥವಾ ಜೀವನ ಅನ್ನುವುದು ದೇವರು ಕೊಟ್ಟ ಒಂದು ಅದ್ಭುತವಾದ ಕೊಡುಗೆ ಆಗಿದೆ ಜೊತೆಗೆ ಅಚ್ಚರಿ ಮತ್ತು ಆಶ್ಚರ್ಯ ಕೂಡ ಆಗಿದೆ. ಮನುಷ್ಯನ ದೇಹವು ವಿವಿಧ ಅಂಗಾಂಶಗಳಿಂದ ಕೂಡಿದೆ. ಪ್ರತಿಯೊಂದು ಭಾಗವೂ ಮುಖ್ಯವಲ್ಲದೆ ಅದ್ಭುತವಾಗಿ ತಮ್ಮದೇ ಆದ ಕಾರ್ಯವನ್ನು ಮಾಡುತ್ತವೆ. ಹೀಗಾಗಿ ನಾವು ನಮ್ಮ ದೇಹದ ಪ್ರತಿಯೊಂದು ಅಂಗವನ್ನು ಕಾಪಾಡಿಕೊಂಡು ಕಾಳಜಿಯನ್ನು ಮಾಡುತ್ತಾ ಬರಬೇಕು. ಒಂದು ವೇಳೆ ನೀವು ಏನಾದರೂ ಈ ಕೆಟ್ಟ ಅಭ್ಯಾಸವನ್ನು ಹೊಂದಿದ್ದರೆ. ಈಗಲೇ ಬಿಟ್ಟು ಬಿಡಬೇಕು ಮಿತ್ರರೇ. ಯಾಕೆಂದರೆ ನಾವು ಮಾಡುವ ಚಿಕ್ಕ ತಪ್ಪಿನಿಂದ ಇಡೀ ನಮ್ಮ ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾದರೆ ಆ ತಪ್ಪು ಯಾವುದು ಆ ಕೆಲಸ ಯಾವುದು ಅಂತ ನಿಮಗೆ ಕುತೂಹಲವೇ ಹಾಗಾದರೆ ಬನ್ನಿ ಇಂದಿನ ಲೇಖನವೇ ನಿಮಗಾಗಿ. ಈ ಲೇಖನದಲ್ಲಿ ನಾವು ನಿಮಗೆ ಮೂಗಿನ ಹೊಳ್ಳೆಗಳಲ್ಲಿ ಬೆಳೆದಿರುವ ಕೂದಲನ್ನು ಯಾಕೆ ಕತ್ತರಿಸಬಾರದು. ಅದನ್ನು ವಿವಿಧ ಉಪಕರಣಗಳನ್ನು ಬಳಕೆ ಮಾಡಿಕೊಂಡು ಕತ್ತರಿಸುವುದರಿಂದ ಆಗುವ ಹಾನಿಯಾದರು ಏನು ಅಂತ ಸವಿಸ್ತಾರವಾಗಿ ಇಂದಿನ ಲೇಖನದಲ್ಲಿ ತಿಳಿಯೋಣ.

ಮನುಷ್ಯನ ದೇಹ ಮತ್ತು ಸೌಂದರ್ಯ ಅನ್ನುವುದು ಪ್ರಕೃತಿಯ ಕೊಡುಗೆ ಅಂತ ಹೇಳಲಾಗಿದೆ. ಆದ ಕಾರಣವೇ ನಮ್ಮ ದೇಹವು ಪ್ರಕೃತಿಗೆ ಸ್ಪಂದನೆ ಮಾಡಬೇಕು ಹೊರತು ಮಾನವನ ಇಷ್ಟವಲ್ಲ. ಯಾಕೆಂದರೆ ಪ್ರಕೃತಿ ಏನೇ ನೀಡಿದರು ಕೂಡ ನಮ್ಮ ಆರೋಗ್ಯದ ಒಳಿತಿಗಾಗಿಯೇ ಅಂತ ನಾವು ಅರಿತುಕೊಳ್ಳಬೇಕು. ಮೊದಲಿಗೆ ತಿಳಿದುಕೊಳ್ಳೋಣ ಮೂಗಿನ ಹೊಳ್ಳೆಗಳಲ್ಲಿ ಕೂದಲು ಏಕೆ ಬೆಳೆಯುತ್ತದೆ ಅಂತ ಮಿತ್ರರೇ. ಹೌದು ಕಣ್ಣುಗಳನ್ನು ರಕ್ಷಣೆ ಮಾಡಲು ದೇವರು ಕಣ್ಣಿನ ರೆಪ್ಪೆಗಳನ್ನು ಸೃಷ್ಟಿ ಮಾಡಿದ್ದಾನೆ. ಹಾಗೆಯೇ ಮೂಗಿನ ಹೊಳ್ಳೆಗಳಲ್ಲಿ ಕೂದಲು ಸೃಷ್ಟಿ ಮಾಡಲು ಕಾರಣ ನಾವು ಸೇವನೆ ಮಾಡುವ ಗಾಳಿಯಲ್ಲಿ ಸಾವಿರಾರು ಸೂಕ್ಷ್ಮಾಣು ಜೀವಿಗಳು ಅಡಗಿರುತ್ತವೆ ಜೊತೆಗೆ ಈ ಗಾಳಿಯು ಬಿಸಿಯಾಗಿ ಇರುವುದಲ್ಲದೆ ತುಂಬಾನೇ ಕಲುಷಿತವಾಗಿರುತ್ತದೆ. ಆದ್ದರಿಂದ ಮೂಗಿನಲ್ಲಿರುವ ಕೂದಲು ಇದನ್ನು ಫಿಲ್ಟರ್ ಮಾಡುತ್ತದೆ ಇದೆ ಕಾರಣದಿಂದಾಗಿ. ನಂತರ ಇದು ಶುದ್ಧವಾದ ಗಾಳಿ ಮಾತ್ರವೇ ಶ್ವಾಸಕೋಶ ಒಳಗೆ ಹೋಗುವಂತೆ ಮಾಡುತ್ತದೆ. ಮೂಗಿನ ಪಕ್ಕದಲ್ಲಿ ಸೈನಸ್ ಎಂಬ ಭಾಗವೂ ಗಾಳಿಯನ್ನು ತಂಪು ಮಾಡುತ್ತದೆ. ಕೆಲವರಿಗೆ ಮೂಗು ಕಟ್ಟಿದರೆ ಅವರು ಮೂಗಿನಿಂದ ಉಸಿರಾಡದೆ ಬಾಯಿಯಿಂದ ಉಸಿರಾಡುತ್ತಾರೆ. ಸ್ನೇಹಿತರೇ, ನಾವು ಎಂದಿಗೂ ಬಾಯಿಯಿಂದ ಉಸಿರಾಡಬಾರದು ಒಂದು ವೇಳೆ ನೀವು ಬಾಯಿಯಿಂದ ಉಸಿರಾಡಿದರೆ ನೀವು ಭವಿಷ್ಯದಲ್ಲಿ ತುಂಬಾನೇ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನೂ ವಿಷಯವನ್ನು ನೋಡುವುದಾದರೆ, ಮೂಗಿನಲ್ಲಿ ಬೆಳೆದಿರುವ ಕೂದಲು ತುಂಬಾನೇ ಸಾಮಾಜಿಕ ಸನ್ನಿವೇಶವನ್ನು ಸೃಷ್ಟಿ ಮಾಡುತ್ತದೆ ಜೊತೆಗೆ ತುಂಬಾನೇ ಮುಜುಗರವನ್ನು ಉಂಟು ಮಾಡುತ್ತದೆ. ಆದ ಕಾರಣ ಜನರು ಬ್ಯುಟಿಷಿಯನ್ ಗೆ ಹೋಗಿ ಅವುಗಳನ್ನು ಕತ್ತರಿಸುತ್ತಾರೆ. ಆದರೆ ಇದು ತಪ್ಪು ಹೀಗೆ ಎಂದಿಗೂ ಮಾಡಬಾರದು.

ಮೂಗಿನಲ್ಲಿ ಇರುವ ಕೂದಲು ಕಲುಷಿತ ಗಾಳಿಯನ್ನು ಶುದ್ಧ ಮಾಡುತ್ತದೆ ಮೂಗಿನೋಳಗೆ ಬ್ಯಾಕ್ಟೀರಿಯಾ ವೈರಸ್ ಗಳು ಪ್ರವೇಶ ಮಾಡದಂತೆ ನೋಡಿಕೊಳ್ಳುತ್ತದೆ. ಇಲ್ಲವಾದರೆ ನೀವು ಮೂಗಿನಲ್ಲಿ ಇರುವ ಕೂದಲನ್ನು ಕತ್ತರಿಸಿದರೆ ಅದು ಕಲುಷಿತ ಗಾಳಿ ಶ್ವಾಸಕೋಶಕ್ಕೆ ತಲುಪಿ ಶ್ವಾಸಕೋಶಗಳು ಬ್ಲಾಕೆಜ್ ಮಾಡುತ್ತದೆ ಇದರಿಂದ ನಿಮಗೆ ಉಸಿರಾಡಲು ಕಷ್ಟವಾಗುತ್ತದೆ. ಆದ ಕಾರಣ ನೀವು ಈ ಕೆಟ್ಟ ಅಭ್ಯಾಸವನ್ನು ಬಿಟ್ಟು ಬಿಡಬೇಕು. ಹಾಗಂತ ತುಂಬಾನೇ ಉದ್ದವಾಗಿ ಬೆಳೆದ ಕೂದಲನ್ನು ಹಾಗೆಯೂ ಬಿಡಬಾರದು. ಅದಕ್ಕೆ ನೀವು ಮೊದಲು ಬಿಸಿ ನೀರಿನ ಹಬೆಯನ್ನು ತೆಗೆದುಕೊಂಡು ಮೂಗಿನಿಂದ ಹೊರಗೆ ಬಂದ ಕೂದಲನ್ನು ಮಾತ್ರ ಕಾಳಜಿಯಿಂದ ಜೋಪಾನವಾಗಿ ಕತ್ತರಿಸಬೇಕು. ಒಂದು ವೇಳೆ ಮೂಗಿನಲ್ಲಿ ಸಮಸ್ಯೆ ಕಾಣಿಸಿಕೊಂಡರೆ ನೀವು 18 ವರ್ಷದವರೆಗೆ ಕಾಯ್ದು ನಂತರ ಆಪರೇಶನ್ ಮಾಡಿಕೊಳ್ಳಬೇಕು. ಆದರೆ ಮಿತ್ರರೇ ಈ ತಪ್ಪನ್ನು ಮಾತ್ರ ಇಂದೆ ಬಿಟ್ಟು ಬಿಡುವುದು ಒಳ್ಳೆಯದು. ಹವ್ಯಾಸ ಅನ್ನುವುದು ಒಳ್ಳೆಯದಾಗಲಿ ಕೆಟ್ಟದಾಗಿರಲಿ ಅತಿಯಾದರೆ ಎಲ್ಲವೂ ವಿಷವೇ. ಹೀಗಾಗಿ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *