WhatsApp Group Join Now

ಹಲವಾರು ವಿವಿಧ ರೀತಿಯ ಹಣ್ಣುಗಳನ್ನು ತಿನ್ನುತ್ತೇವೆ. ಅದರಲ್ಲಿ ಒಂದೊಂದು ಹಣ್ಣಿನಲ್ಲಿ ಒಂದು ರೀತಿಯ ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಅಂತಹ ಹಣ್ಣುಗಳಲ್ಲಿ ಚಕೋತಾ ಹಣ್ಣು ಕೂಡ ಒಂದಾಗಿದೆ. ಚಕೋತಾ ಹಣ್ಣು ಬರಿ ತಿನ್ನಲಿಕ್ಕೆ ಅಥವಾ ದಾಹಕ್ಕೆ ಜ್ಯೂಸ್ ಮಾಡಿಕೊಂಡು ಕುಡಿಯಲಿಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಹಣ್ಣು ವಿಟಮಿನ್ ಸಿ ಹೊಂದಿರುವುದರಿಂದ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹಾಗಾದರೆ ಏನೇನು ಉಪಯೋಗವಿದೆ ಮುಂದೆ ನೋಡಿ.

ಚಕೋತಾ ಹಣ್ಣು ಹುಳಿ ಹಾಗು ಸಿಹಿಯನ್ನು ಹೊಂದಿದ್ದು ಈ ಹಣ್ಣನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮವಾದ ಪರಿಣಾಮವನ್ನು ಬೀರುತ್ತದೆ.

ವಸಡಿನಲ್ಲಿ ರಕ್ತ ಬರೋದು ಮತ್ತು ಬಾಯಿಯು ದುರ್ವಾಸನೆಯಿಂದ ಕೂಡಿದ್ದರೆ ದೇಹದಲ್ಲಿ ವಿಟಮಿನ್‌ ಸಿ ಕೊರತೆ ಉಂಟಾಗಿದೆ ಎಂದು ಅರ್ಥ. ಇದರಿಂದ ದೂರ ಇರೋಕೆ ಪ್ರತಿನಿತ್ಯ ಒಂದು ಚಕೋತ ತಿಂದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಮತ್ತು ಈ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಾಗಿದೆ.

ದಿನನಿತ್ಯ ಚಕೋತ ಹಣ್ಣನು ತಿನ್ನುವುದರಿಂದ ಮೂತ್ರನಾಳದ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್‌ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ರಕ್ತದಲ್ಲಿ ಕೊಬ್ಬಿನಂಶ ಸೇರಿ ಹೃದಯಕ್ಕೆ ರಕ್ತ ಸಂಚಾರ ಕಡಿಮೆ ಆಗುತ್ತಿದ್ದರೆ ಚಕೋತದಲ್ಲಿರುವ ಪೆಕ್ಟಿನ್‌ ಎಂಬ ಅಂಶವು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ದೇಹದ ತೂಕ ಇಳಿಸಿಕೊಳ್ಳಲು ನಾರಿನಂಶದ ಸೇವನೆ ತುಂಬಾ ಅಗತ್ಯ. ಆದ್ದರಿಂದ ಚಕೋತಾ ಹಣ್ಣಿನಲ್ಲಿ ಸಾಕಷ್ಟು ನಾರಿನಂಶ ದೇಹಕ್ಕೆ ಸಿಗುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು. ಅಷ್ಟೇ ಅಲ್ಲದೆ ನಿಯಮಿತವಾಗಿ ಚಕೋತ ತಿನ್ನುವುದರಿಂದ ಜೀರ್ಣಕ್ರಿಯೆಯು ಕೂಡ ಚೆನ್ನಾಗಿ ಆಗುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಮೊದಲಾದ ರೋಗಗಳು ಬರುವುದು ಸಾಮಾನ್ಯ. ಇವೆಲ್ಲವುಗಳಿಗೆ ಪರಿಹಾರವೆಂದರೆ ವಿಟಮಿನ್‌ ಸಿ. ಚಕೋತ ಹಣ್ಣು ಅಥವಾ ರಸದ ರೂಪದಲ್ಲಿ ದೇಹಕ್ಕೆ ಸೇರಿವುದರಿಂದ ವಿಟಮಿಸ್‌ ಸಿ ಸಿಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *