ಆರೋಗ್ಯದ ದೃಷ್ಟಿಯಿಂದ ಹಳೆಯ ಹುಣಸೆಹಣ್ಣು ತುಂಬಾ ಆರೋಗ್ಯದ. ಹೊಸ ಹುಣಸೆಹಣ್ಣನ್ನು ಅಡುಗೆಯಲ್ಲಿ ಬಳಸುವುದರಿಂದ ಭೇದಿ ಆಗುವುದು ಉಂಟು. ಹಳೆಯ ಹುಣಸೆ ಹಣ್ಣಿಗೆ ಸ್ವಲ್ಪ ಬೆಲ್ಲ ಹಾಗು ಜೀರಿಗೆ ಬೆರೆಸಿ ಕುಟ್ಟಿ ತಿನ್ನುವುದರಿಂದ ಹೊಟ್ಟೆ ನೋವು, ವಾಂತಿ, ತಲೆಸುತ್ತುವಿಕೆ ಮೊದಲಾದ ರೋಗಗಳು ಶಮನಗೊಳ್ಳುವುವು.
ಆಮಶಂಕೆ ಉಂಟ್ಟದಾಗ ಹಳೆಯ ಹುಣಸೇಹಣ್ಣಿನೊಂದಿಗೆ ಪುದೀನಾ, ಕಾಳುಮೆಣಸು, ಏಲಕ್ಕಿ, ಸ್ವಲ್ಪ ಉಪ್ಪು ಸೇರಿಸಿ, ಕುಟ್ಟಿ ಚಟ್ನಿ ಮಾಡಿ ಅನ್ನದೊಂದಿಗೆ ಮಿತವಾಗಿ ಸೇವಿಸುವುದರಿಂದ ಗುಣ ಕಾಣಬಹುದು. ಹುಣಸೆ ಗೊಜ್ಜಿಗೆ ಹುಳಿಮಜ್ಜಿಗೆ ಸ್ವಲ್ಪ ಬೆರಸಿ, ಮಾಗಿದ ಬಾಳೆಹಣ್ಣನ್ನು ಅದರಲ್ಲಿ ಚನ್ನಾಗಿ ತಿರುವಿ ಸೇವಿಸುವುದರಿಂದ ಅತಿಸಾರ ಹಾಗು ಆಮಶಂಕೆ ರೋಗಗಳು ಗುಣವಾಗುವವು.
ಉಷ್ಣದಿಂದ ತಲೆನೋವು ಬಂದಿದ್ದರೆ ಹುಣಸೆಹಣ್ಣು ಹಾಗು ಬೆಲ್ಲದ ಪಾನಕ ತುಂಬಾ ಗುಣಕಾರಿ. ಹುಣಸೇಸಪ್ಪಿನ ರಸವನ್ನು ಮೊಸರಿನಲ್ಲಿ ಕಲಕಿ, ಸೇವಿಸುವುದರಿಂದ ಮೂತ್ರ ವಿಸರ್ಜನೆಯಲ್ಲಿ ಉರಿ ಇದ್ದರೆ ಆಗುವುದು.
ಹುಣಸೆ ಚಿಗುರು ಹಾಗು ನುಗ್ಗೆಕಾಯಿ ಸಾರು ತುಂಬಾ ಆರೋಗ್ಯಕರ. ಹುಣಸೆ ಚಿಗುರು ಹಾಗು ಎಲೆಮಾವಿನಕಾಯಿಯನ್ನು ಬೇಯಿಸಿ ತಿನ್ನುವುದರಿಂದ ಪಿತ್ತದೋಷ ನಿವಾರಣೆ ಆಗುವುದು.
ಸಂಧಿವಾತದ ಕಾರಣ ಶರೀರದ ಯಾವುದಾದರೂ ಅಂಗದಲ್ಲಿ ಊತವೋ, ನೋವೂ ಉಂಟಾಗಿದ್ದಾಗ, ಹುಣಸೆ ಎಲೆಗಳನ್ನು ಬಿಸಿಮಾಡಿ, ಬಟ್ಟೆಯಲ್ಲಿ ಕಟ್ಟಿ ಕಾವು ಕೊಡುವುದರಿಂದ ಗುಣ ಕಾಣುವುದು. ಹುಣಸೆ ಎಲೆಗಳನ್ನು ಚೆನ್ನಾಗಿ ಕುದಿಸಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಉಣ್ಣುವಾಸಿ ಆಗುವುದು.