ರಕ್ತಸ್ರಾವ ಬರಿಸುವ ಮೊಳಕೆಗಳ ನಿವಾರಣೆಗೆ ಟಬ್ ಬಾಥ್, ಖರ್ಜೂರದ ಬೀಜಗಳನ್ನು ಕುಟ್ಟಿ ಒಣಗಿಸಿ ಕೆಂಡದ ಮೇಲೆಹಾಕಿ ಅದರ ಹೊಗೆಯನ್ನು ಮೂಲವ್ಯಾಧಿಯ ಮೊಳಕೆಗಳಿಗೆ ತಾಗಿಸಬೇಕು. ಹಾಲಿನಲ್ಲಿ ಬೆರಸಿ ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಗುದದ್ವಾರದ ಸುತ್ತಲೂ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ.
ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಶಮನವಾಗುತ್ತದೆ, ಎಕ್ಕದ ಎಲೆ ಹಾಗೂ ನುಗ್ಗೆ ಸೊಪ್ಪನ್ನು ಅರೆದು ಮೊಳಕೆಗೆ ಹಚ್ಚಿದರೆ ಗುಣವಾಗುತ್ತದೆ. ನುಗ್ಗೆ ಸೊಪ್ಪು ಮತ್ತು ಮೂಲಂಗಿ ಸೊಪ್ಪನ್ನು ಅರೆದು ಹಚ್ಚಿದರೆ ಮೊಳಕೆಯ ನೋವು ಶಮನವಾಗುತ್ತದೆ.
ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ. ಇದರಿಂದ ನೋವು ಉಂಟಾಗುವುದಿಲ್ಲ.
ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.ಮಾವಿನ ಗೊರಟೆ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಈ ಪುಡಿಯನ್ನು ದಿನಕ್ಕೆರಡು ಚಮಚ ಮುಂಜಾನೆ ಸಂಜೆ ಜೇನಿನೊಡನೆ ಸೇವಿಸಿ.